ಭಾರತ್ ಬಂದ್ ಸಂದರ್ಭದಲ್ಲಿ ರೈತರೊಂದಿಗೆ ನಿಲ್ಲುತ್ತೇವೆ: ಸಂದರ್ಶನದಲ್ಲಿ ರಂದೀಪ್ ಸಿಂಗ್ ಸುರ್ಜೇವಾಲಾ ಹೇಳಿಕೆ

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮೂರು ರೈತ ಹಾಗೂ ಜನವಿರೋಧಿ ಕಪ್ಪು ಕಾನೂನುಗಳ ವಿರುದ್ಧ ಡಿ.8ರಂದು ಕರೆ ನೀಡಿರುವ ಭಾರತ್ ಬಂದ್ ಪರವಾಗಿ ಕಾಂಗ್ರೆಸ್ ನಿಲ್ಲಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹೇಳಿದ್ದಾರೆ. 
ರಣದೀಪ್ ಸಿಂಗ್ ಸುರ್ಜೇವಾಲಾ
ರಣದೀಪ್ ಸಿಂಗ್ ಸುರ್ಜೇವಾಲಾ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮೂರು ರೈತ ಹಾಗೂ ಜನವಿರೋಧಿ ಕಪ್ಪು ಕಾನೂನುಗಳ ವಿರುದ್ಧ ಡಿ.8ರಂದು ಕರೆ ನೀಡಿರುವ ಭಾರತ್ ಬಂದ್ ಪರವಾಗಿ ಕಾಂಗ್ರೆಸ್ ನಿಲ್ಲಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹೇಳಿದ್ದಾರೆ. 

ವಿಧಾನಮಂಡಲ ಅಧಿವೇಶನ, ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಸುರ್ಜೇವಾಲಾ ಅವರು ಸರಣಿ ಸಭೆಗಳನ್ನು ನಡೆಸುತ್ತಿದ್ದು, ಪಕ್ಷದ ಬಲವನ್ನು ಹೆಚ್ಚಿಸಲು ತಂತ್ರಗಳನ್ನು ರೂಪಿಸುತ್ತಿದ್ದಾರೆ. ಇದರಂತೆ ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮುಂದಿನ ಚುನಾವಣೆಗೆ ನಡೆಸುತ್ತಿರುವ ಸಿದ್ಧತೆಗಳು ಹಾಗೂ ರೈತರ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ. 

ರಾಜ್ಯದಲ್ಲಿರುವ ರೈತರು ಮಂಗಳವಾರ ಪ್ರತಿಭಟನೆ ನಡೆಸುವುದಾಗಿ ಹಾಗೂ ಭಾರತ್ ಬಂದ್‌ನಲ್ಲಿ ಭಾಗವಹಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ...?
ಡಿಸೆಂಬರ್ 8 ರಂದು ಬಂದ್'ಗೆ ಕರೆ ನೀಡಿರುವ ರೈತರೊಂದಿಗೆ ಕಾಂಗ್ರೆಸ್ ನಿಲ್ಲಲಿದೆ. ಅಧಿಕಾರದ ಅಮಲಿನಲ್ಲಿರುವ, ಸೊಕ್ಕಿನಲ್ಲಿರುವ ಬಿಜೆಪಿಯವರಿಗೆ ಅನ್ನದಾತರ ನೋವು ಅರ್ಥವಾಗುತ್ತಿಲ್ಲ. ಭೂ ಸುಧಾರಣಾ ತಿದ್ದುಪಡಿ ಮಸೂದೆಯ ಮೂಲಕ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಬಂಡವಾಳಶಾಹಿಗಳಿಗೆ ಹಸ್ತಾಂತರಿಸಲು ಮುಂದಾಗಿರುವ ಮೋದಿ ಹಾಗೂ ಯಡಿಯೂರಪ್ಪ ಅವರ ದುರಹಂಕಾರಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಡಲಿದೆ.

ಸೋಮವಾರದಿಂದ ವಿಧಾನಮಂಡಲ ಚಳಿಗಾಲ ಅಧಿವೇಶನ ಪ್ರಾರಂಭವಾಗಲಿದೆ...? ಕಾಂಗ್ರೆಸ್ ತಂತ್ರಗಳೇನು?
ಅಸಮರ್ಪಕ ಆಡಳಿತ ಮತ್ತು ದುರ್ಬಳಕೆ ಬಿಜೆಪಿ ಸರ್ಕಾರದ ತತ್ತ್ವಶಾಸ್ತ್ರವೆಂದು ತೋರುತ್ತದೆ. ಇದರಿಂದಾಗಿ ಭೂ ಸುಧಾರಣಾ ಮಸೂದೆ ಮತ್ತು ರೈತ ವಿರೋಧಿ ಕಾನೂನುಗಳನ್ನು ತರಲು ಬಯಸುತ್ತಿದೆ. ಸಿದ್ದರಾಮಯ್ಯ (ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ) ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿವೇಶನದಲ್ಲಿ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲಿದೆ. 

ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ರಂತಹ ಹಿರಿಯ ನಾಯಕರಿರುವಾಗ ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಸಾಕಷ್ಟು ಮತ್ತಷ್ಟು ಬಣಗಳೇಕೆ ಹುಟ್ಟಿಕೊಂಡಿವೆ...?
ನಮ್ಮಲ್ಲಿ ಇರುವುದು ಒಂದೇ ಬಣ, ಅದು ಕಾಂಗ್ರೆಸ್ ಅಷ್ಟೇ. ಪಕ್ಷವು ಅಂತರ್ಗತವಾಗಿ ಪ್ರಜಾಪ್ರಭುತ್ವವಾಗಿದೆ ಮತ್ತು ಪಕ್ಷದ ಹಿತಾಸಕ್ತಿಗಳು ಮತ್ತು ಶಿಸ್ತಿನ ‘ಲಕ್ಷ್ಮಣ ರೇಖೆ’ ಒಳಗಿರುವವರ ವೈಯಕ್ತಿಕ ಆಕಾಂಕ್ಷೆಗಳನ್ನು ತಡೆಯುವುದಿಲ್ಲ. ಇದೇ ಸರ್ವಾಧಿಕಾರಿ ಬಿಜೆಪಿ-ಆರ್ಎಸ್ಎಸ್'ಗೂ ನಮಗೂ ಇರುವ ವ್ಯತ್ಯಸವಾಗಿದೆ. ಅಭಿವ್ಯಕ್ತಿ ಮತ್ತು ಧ್ವನಿ ಮತ್ತು ಕೆಲವೊಮ್ಮೆ ಸಮಂಜಸವಾದ ಭಿನ್ನಾಭಿಪ್ರಾಯವನ್ನು ಕೊನೆಗೊಳಿಸುವುದು ಪ್ರಜಾಪ್ರಭುತ್ವವನ್ನು ಕೊನೆಗೊಳಿಸಿದಂತಾಗುತ್ತೆ. ಇದನ್ನು ಬಣ ರಾಜಕೀಯ ಎಂದು ಹೇಳುವುದು ಸರಿಯಲ್ಲ. 

ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಪುನರ್ನಿರ್ಮಿಸಲಾಗಿಲ್ಲವೇಕೆ? 
ಕೆಪಿಸಿಸಿಯನ್ನು ಪುನರ್ ನಿರ್ಮಾಣ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ನಮ್ಮ ನಾಯಕರೊಂದಿಗೆ ಹಾಗೂ ಎಲ್ಲಾ ಮಟ್ಟದ ಕಾರ್ಯಕರ್ತರೊಂದಿಗೆ ಮಾತುಕತೆಗಳೂ ನಡೆಯುತ್ತಿವೆ, ಶೀಘ್ರದಲ್ಲೇ ಈ ಕಾರ್ಯ ಪೂರ್ಣಗೊಳ್ಳಲಿದೆ. 

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಯನ್ನು ಕಡಿದುಕೊಂಡಿತು. ಇದರಿಂದ ಪಕ್ಷದ ಏಳಿಗೆ ಕಡಿಮೆಯಾಗುತ್ತಿದೆಯೇ? 
ಕಲ್ಪನೆಗಳು ತಪ್ಪಾಗಿದೆ ಎಂದು ನಾನು ಭಾವಿಸುತ್ತೇವೆ. ಬಿಹಾರ ರಾಜ್ಯದಲ್ಲಿ ಬಹುಮತವನ್ನು ಮೋಸದಿಂದ ಕಸಿದುಕೊಳ್ಳಲಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಬಿಹಾರ ಸರ್ಕಾರ ಕುಸಿದು ಬೀಳಲಿದೆ ಎಂಬ ವಿಶ್ವಾಸ ನಮಗಿದೆ.

ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಗೆ ಪಕ್ಷದ ತಂತ್ರಗಳೇನು?
ನಮ್ಮ ಪಕ್ಷದ ನಾಯಕರು, ಸಂಸದರು, ಶಾಸಕರು ಹಾಗೂ ಎಂಎಲ್'ಸಿಗಳು ಹಾಗೂ ಅಭ್ಯರ್ಥಿಗಳು ಬುಡದಿಂದ ಪಕ್ಷವನ್ನು ಮೇಲೆತ್ತಲು ಶ್ರಮ ಪಡುತ್ತಿದ್ದಾರೆ. ಈಗಾಗಲೇ ನಾವು ಈ ಕುರಿತು ಆರೋಗ್ಯಕರವಾದ ಚರ್ಚೆಗಳನ್ನು ನಡೆಸಿದ್ದೇವೆ. ಚುನಾವಣೆಗೆ ಪ್ರತೀ ವಿಭಾಗದಲ್ಲಿ ಕರ್ತವ್ಯವವನ್ನು ಹಂಚಲಾಗಿದೆ. 

ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಉಪಚುನಾವಣೆಗೆ ಯಾವೆಲ್ಲಾ ಯೋಜನೆಗಳನ್ನು ರೂಪಿಸಿದ್ದೀರಿ? 
ನಮ್ಮ ಸಂಪೂರ್ಣ ಬಲದಿಂದ ನಾವು ಚುನಾವಣೆಯಲ್ಲಿ ಹೋರಾಟ ಮಾಡುತ್ತೇವೆ. ಪಕ್ಷ ಈ ಬಾರಿ ಗೆಲುವು ಸಾಧಿಸುವುದು ಖಚಿತ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com