'ಬಿಜೆಪಿ ನಾಯಕರ ಮನೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ, ಒಬ್ಬೊಬ್ಬರದ್ದು ಒಂದೊಂದು ಇತಿಹಾಸವಿದೆ': ವೈಯಕ್ತಿಕ ಟೀಕೆಗೆ ಕುಮಾರಸ್ವಾಮಿ ತಿರುಗೇಟು

ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರಿಗೆ ಇಬ್ಬರು ಹೆಂಡತಿಯರು ಎಂದು ವೈಯಕ್ತಿಕವಾಗಿ ಟ್ವೀಟ್ ಮೂಲಕ ಟೀಕಿಸಿರುವ ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ
Updated on: 

ಬೆಂಗಳೂರು: ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರಿಗೆ ಇಬ್ಬರು ಹೆಂಡತಿಯರು ಎಂದು ವೈಯಕ್ತಿಕವಾಗಿ ಟ್ವೀಟ್ ಮೂಲಕ ಟೀಕಿಸಿರುವ ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ವಿಜಯಪುರದ ರಾಮಪುರದಲ್ಲಿ ಸುದ್ದಿಗಾರರ ಜೊತೆ ಇಂದು ಮಾತನಾಡಿದ ಅವರು, ನನ್ನ ವಿರುದ್ಧ ವೈಯಕ್ತಿಕವಾಗಿ ಏನೇ ಟೀಕೆ ಮಾಡಿದರೂ ನಾನು ವಿಚಲಿತನಾಗುವುದಿಲ್ಲ, ನನ್ನ ಮೇಲೆ ಕೆಸರು ಎರಚಲು ನೋಡಿದರೆ ಅದರ ಹತ್ತರಷ್ಟು ಪಾಲು ಕೆಸರನ್ನು ಬಿಜೆಪಿಯವರ ಮೇಲೆ ಎರಚುತ್ತೇನೆ. ನನ್ನನ್ನು ಕೆಣಕಲು ಬರಬೇಡಿ, ನಮ್ಮ ಪಕ್ಷದ ಬೆಳವಣಿಗೆಯನ್ನು ಎರಡೂ ಪಕ್ಷದವರಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿ ನಾಯಕರ ಮನೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ, ಮೊದಲು ಅದನ್ನು ನೋಡಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

ನಾನು ಕದ್ದುಮುಚ್ಚಿ ಏನೂ ಮಾಡಿಲ್ಲ, ಜೀವನದಲ್ಲಿ ಕೆಲವೊಮ್ಮೆ ತಪ್ಪು ನಡೆಯುವುದು, ಎಡವುದು ಸಹಜ, ನಾನು ಕೂಡ ತಪ್ಪು ಮಾಡಿ ತಿದ್ದಿಕೊಂಡಿದ್ದೇನೆ, ಆದರೆ ನಾನು ಯಾವತ್ತೂ ಯಾರ ಜೊತೆಯೂ ರಾಜಿ ಮಾಡಿಕೊಂಡಿಲ್ಲ, ನನ್ನ ವೈಯಕ್ತಿಕ ಜೀವನದಿಂದಾಗಿ ಸಮಾಜಕ್ಕೆ ಏನೂ ತೊಂದರೆಯಾಗಿಲ್ಲ. ಬಿಜೆಪಿಯವರದ್ದು ಒಬ್ಬೊಬ್ಬರದ್ದು ಕೆದಕುತ್ತಾ ಹೋದರೆ ಒಂದೊಂದು ಇತಿಹಾಸವಿದೆ, ವೈಯಕ್ತಿಕ ವಿಚಾರಗಳನ್ನು ತೆಗೆದರೆ ಯಾರಿಗೆ ಏನು ಉಪಯೋಗ ಎಂದು ಪ್ರಶ್ನಿಸಿದರು.

ಬೈಗಮಿ ಪದ ಬಳಕೆ ಬಿಜೆಪಿಯವರಿಗೂ ಅನ್ವಯವಾಗುತ್ತದೆ. ಪ್ರತಿನಿತ್ಯ ಅದರ ಆಧಾರದ ಮೇಲೆ ಅವರ ಜೀವನ ನಡೆಯೋದು ಬಿಜೆಪಿಯವರ ಮನೆಯಲ್ಲಿ ಹೆಗ್ಗಣವೇ ಸತ್ತು ಬಿದ್ದಿದೆ, ನನ್ನ ವೈಯಕ್ತಿಕ ಜೀವನದಲ್ಲಿ ಒಮ್ಮೆ ತಪ್ಪು ಘಟನೆ ನಡೆದು ಹೋಗಿ ಅದರಿಂದ ಹೊರಬಂದಿದ್ದೇನೆ. ಈ ಬಗ್ಗೆ ವಿಧಾನಸೌಧದಲ್ಲಿ ಕೂಡ ಮಾತನಾಡಿದ್ದೇನೆ, ನನ್ನ ಜೀವನ ತೆರೆದ ಪುಸ್ತಕವಿದ್ದಂತೆ ಎಂದು ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com