ಬಿಜೆಪಿ ಹಣ ಹಂಚಿಕೆ ಬೆನ್ನಹಿಂದೆ ಚುನಾವಣಾ ಆಯೋಗ: ಈಶ್ವರ್ ಖಂಡ್ರೆ

ಬಿಜೆಪಿಯ ಅಕ್ರಮಕ್ಕೆ ಚುನಾವಣಾ ಆಯೋಗ ಸಹ ಬೆನ್ನಿಗೆ ನಿಂತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ. 
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

ಬೆಂಗಳೂರು: ಬಿಜೆಪಿಯ ಅಕ್ರಮಕ್ಕೆ ಚುನಾವಣಾ ಆಯೋಗ ಸಹ ಬೆನ್ನಿಗೆ ನಿಂತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ. 

ನಗರದ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಭೀತಿಯಿಂದ 150 ಕೋಟಿ ರೂ. ಹಣ ಖರ್ಚು ಮಾಡುತ್ತಿದ್ದು,ಇದು ಚುನಾವಣಾ ನೀತಿ ಸಂಹಿತೆ ಉಲಂಘನೆಯಾಗಿದ್ದೂ ಆಯೋಗ ಸುಮ್ಮನಿದೆ. ಹೀಗಾಗಿ ಈ ಬಗ್ಗೆ ಸುಪ್ರಿಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಶಾಸಕರ ಖರೀದಿ ಆಯಿತು. ಅಕ್ರಮವಾಗಿ ಸರ್ಕಾರ ರಚನೆ ಮಾಡಿದ್ದು ಆಯಿತು. ಇದೀಗ ಮತಗಳ ಖರೀದಿ ಮಾಡುತ್ತಿದ್ದಾರೆ‌. ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ  ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ. ಹಾಗಾಗಿ ಒಂದೊಂದು ಕ್ಷೇತ್ರದಲ್ಲಿ 150 ಕೋಟಿ ಹಣ ಹಂಚಿಕೆ ಮಾಡುತ್ತಿದ್ದಾರೆ. ಈ ಅಕ್ರಮ ನಡೆಸಲು ಬಿಜೆಪಿ ಬೆನ್ನಿಗೆ ಚುನಾವಣಾ ಆಯೋಗ ನಿಂತಿದೆ. ಚುನಾವಣಾ ವೀಕ್ಷಕರು, ಜಿಲ್ಲಾಡಳಿಗಳು ಎಲ್ಲರೂ ಬಿಜೆಪಿ ಬೆನ್ನಿಗಿವೆ. ಹಾಗಾಗಿ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ  ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com