ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಾಸಕಾಂಗ ಸಭೆಯಲ್ಲಿ ನಾಯಕರ ವೈಯಕ್ತಿಕ ವಾಗ್ದಾಳಿ: ಮಧ್ಯಪ್ರವೇಶಿಸಿ ಸಮಾಧಾನಪಡಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರಿನಲ್ಲಿ ಕೋವಿಡ್ 19 ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರ ಸಭೆ ಸೋಮವಾರ ವಿಧಾನಸೌಧದಲ್ಲಿ ನಡೆಯಿತು.

ಬೆಂಗಳೂರು: ಬೆಂಗಳೂರಿನಲ್ಲಿ ಕೋವಿಡ್ 19 ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರ ಸಭೆ ಸೋಮವಾರ ವಿಧಾನಸೌಧದಲ್ಲಿ ನಡೆಯಿತು ಈ ವೇಳೆ ಆಡಳಿತಾರೂಢ ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರು ವೈಯಕ್ತಿಕ ವಾಗ್ದಾಳಿಗೆ ಇಳಿದಿದ್ದು, ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಯಕರನ್ನು ಸಮಾಧಾನಪಡಿಸಿದರು. 

ವರ್ಚುವಲ್ ಲಿಂಕ್ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಭೆಯಲ್ಲಿ ಹಾಜರಿದ್ದರು. ಸಭೆ ವೇಳೆ ವಿಪಕ್ಷ ನಾಯಕರು ಹಾಗೂ ಸಚಿವರ ನಡುವೆ ಮಾತಿನ ಚಕಮಕಿ ಎದುರಾದಾಗೆಲೆಲ್ಲಾ ಯಡಿಯೂರಪ್ಪ ಅವರು ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತಲೇ ಇದ್ದರು. 

ಸರ್ಕಾರದ ಕ್ರಮಗಳ ವಿರುದ್ಧ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಹರಿಹಾಯ್ದಿದ್ದರು. ಊಹಿಸಲು ಸಾಧ್ಯವಾಗದಷ್ಟರ ಮಟ್ಟಿಗೆ ಪರಿಸ್ಥಿತಿ ಕೈಮೀರಿದ್ದು, ಇದೀಗ ಸರ್ಕಾರ ಸಬೆಯನ್ನು ಕರೆದಿದೆ. ಇದು ಕೇವಲ ಕಣ್ಣೊರೆಸುವ ತಂತ್ರವಷ್ಟೇ. ನಮ್ಮ ಯಾವುದೇ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸುತ್ತಿಲ್ಲ. ಸಾಂಕ್ರಾಮಿಕ ರೋಗ ಸಂದರ್ಭವನ್ನು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಸಚಿವರು ನಮ್ಮ ವಿರುದ್ಧ ಆರೋಪ ಮಾಡಿ ಸಮರ್ಥನೆ ಕೊಡುತ್ತಿದೆ ಎಂದು ಹೇಳಿದರು. 

ಸಭೆ ಕೇವಲ ಕಣ್ಣೊರೆಸುವ ತಂತ್ರವಾಗಿತ್ತು ಎಂದು ನನಗನಿಸಿತು. ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಸರ್ಕಾರ ವಿಫರವಾಗಿದೆ. ಹೀಗಾಗಿ ಸಭೆಯಿಂದ ಹೊರನಡೆದೆ. ಸರ್ಕಾರ ಯಾವುದೇ ರೀತಿಯ ನಿರ್ಧಾರ, ಪರಿಹಾರದೊಂದಿಗೆ ಸಭೆಯನ್ನು ನಡೆಸಿಲ್ಲ. ನಮ್ಮ ಮಾತು, ಸಲಹೆಗಳನ್ನೂ ಕೇಳುತ್ತಿಲ್ಲ. ಸಭೆ ಕೇವಲ ವಿರೋಧ ಪಕ್ಷಗಳನ್ನು ದೂಷಿಸುವುದೇ ಆಗಿತ್ತು. ಸಭೆಯಿಂದ ಸರ್ಕಾರದಿಂದ ಯಾವುದೇ ಉತ್ತರವಾಗಲೀ, ಪರಿಹಾರವಾಗಲೀ ಹೊರಬಂದಿಲ್ಲ. ಪರಿಸ್ಥಿತಿ ಈ ಮಟ್ಟಕ್ಕೆ ಹಾಳಾಗುವವರೆಗೂ ಸರ್ಕಾರ ಏನು ಮಾಡುತ್ತಿತ್ತು ಎಂಬುದೇ ನಮ್ಮ ಪ್ರಶ್ನೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಕೃಷ್ಣ ಭೈರೇಗೌಡ ಅವರು ಪ್ರಶ್ನಿಸಿದ್ದಾರೆ. 

ಸರ್ಕಾರ ಪ್ರತಿಕ್ರಿಯೆ ನೀಡುವಲ್ಲಿ ವಿಫಲವಾಗಿದ್ದೇ ಆದರೆ, ನಮ್ಮ ಕ್ಷೇತ್ರದ ಜನರಿಗೆ ಸಹಾಯ ಮಾಡಲು ನನಗೆ ಸಾಧ್ಯವಾಗುವುದಿಲ್ಲ. ಹಾಸಿಗೆ, ಆಕ್ಸಿಜನ್, ವೈದ್ಯಕೀಯ ಸೌಲಭ್ಯಗಳನ್ನು ಕೇಳಿಕೊಂಡು ನನ್ನ ಕ್ಷೇತ್ರದ ಜನರು ನನ್ನ ಬಳಿ ಬರುತ್ತಿದ್ದಾರೆ. ಆದರೆ, ನನಗೆ ಸಹಾಯ ಮಾಡಲು ಸಾಧ್ಯವಾಗಿಲ್ಲ. ಯಾರೊಂದಿಗೆ ಮಾತನಾಡಬೇಕು, ಯಾರು ಉಸ್ತುವಾರಿ ಹೊತ್ತುಕೊಂಡಿದ್ದಾರೆಂಬುದೇ ತಿಳಿಯದಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಏನನ್ನು ಮಾಡಬೇಕು. ಏನನ್ನು ಮಾಡಬಾರದು ಎಂಬ ಮಾಹಿತಿಯೇ ನಮಗಿಲ್ಲ. ಸಹಾಯ ತಲುಪುವುದಷ್ಟರಲ್ಲಿಯೇ ಜನರು ಸಾಯುತ್ತಿದ್ದಾರೆಂದು ತಿಳಿಸಿದ್ದಾರೆ. 

ಸಚಿವ ಸುಧಾಕರ್ ಅವರ ವಿರುದ್ಧ ಕೃಷ್ಣ ಭೈರೇಗೌಡ ಅವರು ಆರೋಪ ಮಾಡುತ್ತಿದ್ದಂತೆಯೇ ಸಚಿವರಿಗೆ ವಿ.ಸೋಮಣ್ಣ ಅವರು ಬೆಂಬಲ ನೀಡಲು ಮುಂದಾದರು. 

ಬಳಿಕ ಮಾತನಾಡಿದ ಸಚಿವ ಅಶೋಕ್ ಅವರು, ವಿರೋಧ ಪಕ್ಷದ ಶಾಸಕರು ಸರ್ಕಾರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಸಲಹೆಗಳನ್ನೂ ನೀಡಿದ್ದಾರೆ. ನಾವು ಅದನ್ನು ಒಪ್ಪಿಕೊಂಡಿದ್ದೇವೆ. ಕೆಲ ವಿಚಾರಗಳ ಬಗ್ಗೆ ದನಿಯೆತ್ತಿದ್ದು, ಅದನ್ನು ನಮ್ಮ ಸರ್ಕಾರ ಪರಿಹರಿಸಲಿದೆ. ಆದರೆ, ವಿರೋಧ ಪಕ್ಷ ಸರ್ಕಾರದ ವಿರುದ್ಧ ಆರೋಪ ಮಾಡುವ ಪ್ರಶ್ನೆಯೇ ಇಲ್ಲ. ಇತರೆ ದೇಶ ಹಾಗೂ ರಾಜ್ಯಗಳು ಅನುಭವಿಸುತ್ತಿರುವ ಪರಿಸ್ಥಿತಿಯನ್ನೇ ನಾವು ಎದುರಿಸುತ್ತಿದ್ದೇವೆ ಎಂದು ಹೇಳಿದರು. 

Related Stories

No stories found.

Advertisement

X
Kannada Prabha
www.kannadaprabha.com