ಮೋದಿ ವಿದೇಶದಿಂದ ವ್ಯಾಕ್ಸಿನೇಷನ್ ತರಿಸಿ ಕೊರತೆ ನೀಗಿಸಲಿ: ಸಿದ್ದರಾಮಯ್ಯ

ದೇಶಕ್ಕೆ ಅಗತ್ಯವಿರುವಷ್ಟು 1.5 ರಿಂದ 2 ಕೋಟಿ ವ್ಯಾಕ್ಸಿನೇಷನ್ ಇಲ್ಲ. ವ್ಯಾಕ್ಸಿನೇಷನ್ ಕೊರತೆ ಇದೆ. ಪ್ರಧಾನಿ ಮೋದಿ ವಿದೇಶದಿಂದ ವ್ಯಾಕ್ಸಿನೇಷನ್ ತರಿಸಿ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ವ್ಯಾಕ್ಸಿನೇಷನ್ ಹಾಕಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ದೇಶಕ್ಕೆ ಅಗತ್ಯವಿರುವಷ್ಟು 1.5 ರಿಂದ 2 ಕೋಟಿ ವ್ಯಾಕ್ಸಿನೇಷನ್ ಇಲ್ಲ. ವ್ಯಾಕ್ಸಿನೇಷನ್ ಕೊರತೆ ಇದೆ. ಪ್ರಧಾನಿ ಮೋದಿ ವಿದೇಶದಿಂದ ವ್ಯಾಕ್ಸಿನೇಷನ್ ತರಿಸಿ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ವ್ಯಾಕ್ಸಿನೇಷನ್ ಹಾಕಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿಂದು ಸಿದ್ದರಾಮಯ್ಯ ಪಕ್ಷದ ಶಾಸಕರಾದ ಜಮೀರ್ ಅಹ್ಮದ್, ಬೈರತಿ ಸುರೇಶ್ ಹಾಗೂ ರಾಜಶೇಖರ್ ಪಾಟೀಲ್ ಜೊತೆ ಕೋವಿಡ್ ಎರಡನೇ ಹಂತದ ಲಸಿಕೆ ಪಡೆದರು.

ಲಸಿಕೆ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಪ್ರತಿಯೊಬ್ಬರು  ಕಡ್ಡಾಯವಾಗಿ ವ್ಯಾಕ್ಸಿನೇಷನ್ ತಗೆದುಕೊಳ್ಳಬೇಕು. ವ್ಯಾಕ್ಸಿನೇಷನ್ ನಂತರ ಕೊರೋನಾ ಬರುವುದು 0.03 %  ಮಾತ್ರ ಎಂಬ ಮಾಹಿತಿ ಇದೆ. ಕೊರೋನಾ ಸೋಂಕನ್ನು ತಾತ್ಕಾಲಿಕವಾಗಿ ತಡೆಗಟ್ಟದೇ ಶಾಶ್ವತವಾಗಿ ತಡೆಗಟ್ಟಬೇಕು. ತಾತ್ಕಾಲಿಕವಾಗಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಬೇಕು ಎಂದರು.

ವಿಕ್ಟೋರಿಯಾ ಆಸ್ಪತ್ರೆ ವೈದ್ಯರ  ಜೊತೆ ಚರ್ಚೆ ಮಾಡಿದ್ದು, ವಿಕ್ಟೋರಿಯಾದಲ್ಲಿ 750 ಬೆಡ್ ಇದೆ.ಅದರಲ್ಲಿ 65, ಐಸಿಯು ಬೆಡ್ ಇದೆ.
ಆದರೆ ಕನಿಷ್ಠ 200 ಆದರೂ ಐಸಿಯು ಬೆಡ್ ಇರಬೇಕು ಆರೋಗ್ಯ ಸಚಿವರು 100, ಐಸಿಯು ಬೆಡ್ ಮಾಡುವುದಾಗಿ ಹೇಳಿದ್ದಾರೆ. ಆದರೆ ಐಸಿಯು ಬೆಡ್ ಎಲ್ಲಾ ಕಡೆ ಸಮಸ್ಯೆ ಇದೆ.ಕೇವಲ ಐಸಿಯು ಬೆಡ್ ಮಾಡುವುದರ ಜೊತೆಗೆ ಅಗತ್ಯ ಮಾನವ ಸಂಪನ್ಮೂಲವೂ ಇರಬೇಕು. ಪ್ಯಾರಾ ಮೆಡಿಕಲ್ ಹಾಗೂ ಡಾಕ್ಟರ್ ನೇಮಕ ಆಗಬೇಕು.ನಿವೃತ್ತರನ್ನು ಸೇವೆಗೆ ಪಡೆಯಬೇಕು ಎಂದು ಸಲಹೆ ನೀಡಿದರು.

ಲಾಕ್ಡೌನ್ ಗೆ ನಮ್ಮ ವಿರೋಧವಿಲ್ಲ. ತಜ್ಞರ ಸಲಹೆ ಮೇಲೆಯೇ ಇದನ್ನು ಮಾಡಿದ್ದಾರೆ. ಆದರೆ  ಲಾಕ್ಡೌನ್ ಮಾಡಿದ ಮೇಲೆ ಕೂಲಿ ಕಾರ್ಮಿಕರಿಗೆ  ಆರ್ಥಿಕ ಪ್ಯಾಕೇಜ್ ನೀಡಬೇಕು. ಊರಿಗೆ ಹೋಗುವ ವಲಸಿಗ ಕಾರ್ಮಿಕರಿಗೆ ಉದ್ಯೋಗ ಸಿಗುವಂತೆ ಮಾಡಬೇಕು ಎಂದು  ಸಿಎಂ ಗೆ ಸುದೀರ್ಘ ಪತ್ರ  ಬರೆದಿದ್ದೇನೆ.ಶಾಸಕರು ಮಾಜಿ ಶಾಸಕರಿಗೆ ಪತ್ರ ಬರೆದು  ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಎಷ್ಟು ಸಹಾಯ ಆಗತ್ತೋ ಅಷ್ಟನ್ನು ಮಾಡಿ ಅಂತಾ ಹೇಳಿರುವುದಾಗಿ ತಿಳಿಸಿದರು.

ಹೆಣ ಹೂಳುವುದು ಹಾಗೂ ಸುಡುವುದು ಎರಡು ವ್ಯವಸ್ಥೆಯನ್ನು ಹೆಚ್ಚು ಮಾಡಬೇಕು.  ಶವಸಂಸ್ಕಾರಕ್ಕೂ ಲಂಚ ಕೊಡುವಂತಾಗಬಾರದು. ಸರ್ಕಾರ ಎಚ್ಚರಿಕೆ ಬರಲಿ ಎನ್ನುವ ಕಾರಣಕ್ಕೆ ನಾನು ಟೀಕೆ ಮಾಡುತ್ತೇನೆ. ಸತ್ಯ ಹೇಳಿದಕ್ಕೆ ಟೀಕೆ ಎನ್ನುವುದಲ್ಲ ಎಂದು ಸಿದ್ದರಾಮಯ್ಯ  ಹೇಳಿದರು.

ಆಹಾರ ಖಾತೆ ಸಚಿವ  ಉಮೇಶ್ ಕತ್ತಿ ನೀಡಿರುವ ಅಕ್ಕಿ ಸಿಗದಿದ್ದರೆ ಸಾಯಲಿ ಎಂಬ ಹೇಳಿಕೆಗೆ ಕಿಡಿಕಾರಿದ ಸಿದ್ದರಾಮಯ್ಯ, ಕತ್ತಿ ಒಬ್ಬ ಬೇಜಾವಾಬ್ದಾರಿ ಸಚಿವ. ಸಾಯಿ ಹೋಗು ಎನ್ನುವುದು ಅತ್ಯಂತ ಉದ್ದಟತನದ ಮಾತು. ದುರಹಂಕಾರದ ಮಾತು. ಕತ್ತಿ ಸಂಪುಟದಲ್ಲಿ ಸಚಿವನಾಗಿರುವುದಕ್ಕೆ ಲಾಯಕಲ್ಲ. ಯಡಿಯೂರಪ್ಪ ಕತ್ತಿ ಹೇಳಿಕೆಗೆ ಕೇವಲ ವಿಷಾದ  ವ್ಯಕ್ತಪಡಿಸುವುದಲ್ಲದೇ, ಕೂಡಲೇ ಕತ್ತಿಯನ್ನು ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಸ್ಸಾಂ ಮತ್ತು ಕೇರಳದಲ್ಲಿ ಕಾಂಗ್ರೆಸಿಗೆ ಹಾಗೂ
ತಮಿಳುನಾಡು ಮತ್ತು ಪಾಂಡಿಚೇರಿಯಲ್ಲಿ ಕಾಂಗ್ರೆಸ್ ಒಕ್ಕೂಟಕ್ಕೆ ಗೆಲುವು ಸಿಗಲಿದೆ. ರಾಜ್ಯದಲ್ಲಿ  ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿಯೂ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com