
ಕೆಂಗೇರಿ ಮೆಟ್ರೋ ಮಾರ್ಗ ಉದ್ಘಾಟನೆ ಸಮಾರಂಭದ ಚಿತ್ರ
ಬೆಂಗಳೂರು: ನೂತನ ಕೆಂಗೇರಿವರೆಗಿನ ಮೆಟ್ರೋ ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ ಕನ್ನಡ ನಿರ್ಲಕ್ಷ್ಯ ಧೋರಣೆ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಕಿಡಿಕಾರಿದೆ.
ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ ಹಂತ -2 ರ ಅಡಿಯಲ್ಲಿ 7.5 ಕಿ.ಮೀ ಉದ್ದದ ನಮ್ಮ ಮೆಟ್ರೋ ಪಶ್ಚಿಮ ವಿಸ್ತರಣಾ ಮಾರ್ಗವನ್ನು (ನೇರಳೆ ಮಾರ್ಗ) ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರ ದಂಡೇ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಆದರೆ, ಈ ಸಮಾರಂಭದಲ್ಲಿ ಕನ್ನಡದ ಒಂದೇ ಒಂದು ಅಕ್ಷರಕ್ಕೂ ಜಾಗ ನೀಡದಿರುವ ಮೂಲಕ ನಾಡವಿರೋಧಿ ಬಿಜೆಪಿ ಸರ್ಕಾರ ಕನ್ನಡಕ್ಕೆ ದ್ರೋಹ ಬಗೆಯುವ ಕೆಲಸ ಮುಂದುವರೆಸಿದೆ ಎಂದು ಕೆಪಿಸಿಸಿ ಟ್ವೀಟರ್ ಖಾತೆಯಲ್ಲಿ ಆರೋಪಿಸಲಾಗಿದೆ.
ರಾಜ್ಯ ಬಿಜೆಪಿ ಸರ್ಕಾರ ಕನ್ನಡವನ್ನು ಕೊಲ್ಲುವ ನಾಗಪುರದ ಆದೇಶವನ್ನ ಪಾಲಿಸುತ್ತಿದೆ ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಕನ್ನಡಿಗನೂ ಅನಾಥ, ಕನ್ನಡವೂ ಅನಾಥವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಕಿಡಿಕಾರಿದೆ.
ಕೆಂಗೇರಿ ಮಾರ್ಗದ ಮೆಟ್ರೋ ಉದ್ಘಾಟನೆ ಸಮಾರಂಭದಲ್ಲಿ ಕನ್ನಡದ ಒಂದೇ ಒಂದು ಅಕ್ಷರಕ್ಕೂ ಜಾಗ ನೀಡದಿರುವ ಮೂಲಕ ನಾಡವಿರೋಧಿ ಬಿಜೆಪಿ ಸರ್ಕಾರ ಕನ್ನಡಕ್ಕೆ ದ್ರೋಹ ಬಗೆಯುವ ಕೆಲಸ ಮುಂದುವರೆಸಿದೆ.
— Karnataka Congress (@INCKarnataka) August 29, 2021
ಕನ್ನಡವನ್ನು ಕೊಲ್ಲುವ ನಾಗಪುರದ ಆದೇಶವನ್ನ ಪಾಲಿಸುತ್ತಿದೆ @BJP4Karnataka
ಬಿಜೆಪಿ ಆಡಳಿತದಲ್ಲಿ ಕರ್ನಾಟಕದಲ್ಲಿ ಕನ್ನಡಿಗನೂ ಅನಾಥ, ಕನ್ನಡವೂ ಅನಾಥ.