ಕೇಂದ್ರವನ್ನು ಪ್ರಶ್ನಿಸಲಾಗದೆ ಅಡಗಿ ಕುಳಿತಿರುವ ಬಿಜೆಪಿ ಸಂಸದರು ಕರ್ನಾಟಕವನ್ನು ಪ್ರತಿನಿಧಿಸಲು ಅನರ್ಹರು: ಸಿದ್ದರಾಮಯ್ಯ
ಕೋವಿಡ್ ನಿರ್ವಹಣೆ ವಿಚಾರವಾಗಿ ಮತ್ತೆ ಕರ್ನಾಟಕ ಬಿಜೆಪಿಯನ್ನು ಟೀಕಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಕೇಂದ್ರವನ್ನು ಪ್ರಶ್ನಿಸಲಾಗದೇ ಅಡಗಿಕುಳಿತಿರುವ ಬಿಜೆಪಿ ಸಂಸದರು ಕರ್ನಾಟಕವನ್ನು ಪ್ರತಿನಿಧಿಸಲು ಅನರ್ಹರು ಎಂದು ಹೇಳಿದ್ದಾರೆ.
Published: 07th May 2021 01:08 AM | Last Updated: 07th May 2021 12:15 PM | A+A A-
ಸಿದ್ದರಾಮಯ್ಯ
ಬೆಂಗಳೂರು: ಕೋವಿಡ್ ನಿರ್ವಹಣೆ ವಿಚಾರವಾಗಿ ಮತ್ತೆ ಕರ್ನಾಟಕ ಬಿಜೆಪಿಯನ್ನು ಟೀಕಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಕೇಂದ್ರವನ್ನು ಪ್ರಶ್ನಿಸಲಾಗದೇ ಅಡಗಿಕುಳಿತಿರುವ ಬಿಜೆಪಿ ಸಂಸದರು ಕರ್ನಾಟಕವನ್ನು ಪ್ರತಿನಿಧಿಸಲು ಅನರ್ಹರು ಎಂದು ಹೇಳಿದ್ದಾರೆ.
ಹೈಕೋರ್ಟ್ ಸೂಚನೆ ವಿರುದ್ಧ ಕೇಂದ್ರ ಸರ್ಕಾರ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಈ ನಡೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ಖಂಡಿಸಿದ್ದಾರೆ.
Karnataka has elected 25 @BJP4India MPs to Lok Sabha.
— Siddaramaiah (@siddaramaiah) May 6, 2021
Where are they hiding? Have they lost their spine to stand up against @narendramodi?
Shame on them!!
They are unfit to represent Karnataka and a blot to mankind.
3/3#BJPMosa
'ಕೇಂದ್ರ ಸರ್ಕಾರವನ್ನು ಪ್ರಶ್ನಿಸಲು ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ 25 ಸಂಸದರು ತಮ್ಮ ಬೆನ್ನು ಮೂಳೆ ಕಳೆದುಕೊಂಡಿದ್ದಾರೆಯೇ ಎಂದಿದ್ದಾರೆ. ಕರ್ನಾಟಕಕ್ಕೆ 1600-1700 ಮೆ.ಟನ್ ಗಿಂತ ಹೆಚ್ಚಿನ ಆಮ್ಲಜನಕ ಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರವು ಕೇವಲ 675 ಮೆ.ಟನ್ ಆಮ್ಲಜನಕವನ್ನು ಹಂಚಿಕೆ ಮಾಡಿದೆ, ಇದು ಬೇಡಿಕೆಯ ಶೇ.60 ಕ್ಕಿಂತ ಕಡಿಮೆ. ಇದೆ. ಆದರೆ ಹೈಕೋರ್ಟ್ ಕರ್ನಾಟಕದ ಪರ ನೀಡಿರುವ ನಿರ್ದೇಶನವನ್ನು ವಿರೋಧಿಸಿ ಕೇಂದ್ರ ಸರ್ಕಾರ ಸುಪ್ರೀ ಕೋರ್ಟ್ ಮೆಟ್ಟಿಲೇರಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಕರ್ನಾಟಕ ಸರ್ಕಾರವಾಗಲೀ ಅಥವಾ ಸಿಎಂ ಯಡಿಯೂರಪ್ಪ ಹೋರಾಟ ಮಾಡಲಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
Karnataka needs more than 1600-1700 MT of oxygen but Central govt has allocated just 675 MT of oxygen which is less than 60% of the demand.
— Siddaramaiah (@siddaramaiah) May 6, 2021
Is @narendramodi blind to Karnataka's need?
2/3#BJPMosa
ಕರ್ನಾಟಕದಿಂದ ಬಿಜೆಪಿಯ 25 ಮಂದಿ ಸಂಸದರು ಆಯ್ಕೆಯಾಗಿದ್ದಾರೆ. ಈ ಎಲ್ಲ 25 ಮಂದಿ ಸಂಸದರು ಎಲ್ಲಿ ಅಡಗಿ ಕುಳಿತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಮಾತನಾಡುವ ಧೈರ್ಯವನ್ನೇ ಈ ಸಂಸದರು ಕಳೆದುಕೊಂಡಿದ್ದಾರೆ. ನಾಚಿಕೆಯಾಗಬೇಕು ಅವರಿಗೆ.. ಅವರಾರೂ ಕರ್ನಾಟಕವನ್ನು ಪ್ರತಿನಿಧಿಸಲು ಯೋಗ್ಯರೇ ಅಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
Shocked to know that @BJP4India Central govt has approached Supreme Court against Karnataka High Court's direction to allocate 1200 MT of liquid oxygen to Karnataka.
— Siddaramaiah (@siddaramaiah) May 6, 2021
Will @CMofKarnataka & @BJP4Karnataka ever fight against this decision?
1/3#BJPMosa pic.twitter.com/tcNmxo2Ef9






