ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ? ಬಿಜೆಪಿ ಟೀಕೆ
ಧರ್ಮ ಹಾಗೂ ಜಾತಿ ಕುರಿತಂತೆ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಗಳನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ.
ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ? ಎಂದು ಬಿಜೆಪಿ ಟ್ವೀಟರ್ ನಲ್ಲಿ ಪ್ರಶ್ನಿಸಿದೆ.
Published: 11th November 2021 07:54 PM | Last Updated: 11th November 2021 08:03 PM | A+A A-

ಸಿದ್ದರಾಮಯ್ಯ
ಬೆಂಗಳೂರು: ಧರ್ಮ ಹಾಗೂ ಜಾತಿ ಕುರಿತಂತೆ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಗಳನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ.
ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ? ಎಂದು ಬಿಜೆಪಿ ಟ್ವೀಟರ್ ನಲ್ಲಿ ಪ್ರಶ್ನಿಸಿದೆ.
ತಲೆಗೆ ಟೋಪಿ ಹಾಕಿದಾಗ ಅಲ್ಪಸಂಖ್ಯಾತ, ಕಂಬಳಿ ಹೊದ್ದುಕೊಂಡರೆ ಒಂದು ಜಾತಿ, ಚುನಾವಣೆ ಬಂದಾಗ ನಾನೂ ಹಿಂದು, ಮುಖ್ಯಮಂತ್ರಿಯಾಗುವ ಆಸೆ ಬಂದಾಗ ದಲಿತ, ಅಧಿಕಾರಕ್ಕಾಗಿ ಎಷ್ಟೊಂದು ವೇಷ, ನಾಟಕ, ಕಪಟ ವೇಷಧಾರಿ ಎಂದು ಟೀಕೆಗಳ ಸುರಿಮಳೆಗೈಯಲಾಗಿದೆ.
ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ?
— BJP Karnataka (@BJP4Karnataka) November 11, 2021
√ ತಲೆಗೆ ಟೋಪಿ ಹಾಕಿದಾಗ ಅಲ್ಪಸಂಖ್ಯಾತ
√ ಕಂಬಳಿ ಹೊದ್ದುಕೊಂಡರೆ ಒಂದು ಜಾತಿ
√ ಚುನಾವಣೆ ಬಂದಾಗ ನಾನೂ ಹಿಂದು
√ ಮುಖ್ಯಮಂತ್ರಿಯಾಗುವ ಆಸೆ ಬಂದಾಗ ದಲಿತ
√ ಅಧಿಕಾರಕ್ಕಾಗಿ ಎಷ್ಟೊಂದು ವೇಷ, ನಾಟಕ#ಕಪಟವೇಷಧಾರಿ pic.twitter.com/KcY4Vxdcm6
ಮತ್ತೊಂದು ಟ್ವೀಟ್ ನಲ್ಲಿ ಸಿದ್ದರಾಮಯ್ಯ ಜೆಡಿಎಸ್ ಕಟ್ಟಿದರಾ? ಕಾಂಗ್ರೆಸ್ ಕಟ್ಟಿದರಾ? ರಾಜ್ಯ ಕಟ್ಟಿದರಾ?ಎಂದು ಪ್ರಶ್ನಿಸಲಾಗಿದೆ.
√ ಸಿದ್ದರಾಮಯ್ಯ ಜೆಡಿಎಸ್ ಕಟ್ಟಿದರಾ?
— BJP Karnataka (@BJP4Karnataka) November 11, 2021
ಇಲ್ಲ, ಪಕ್ಷಾಂತರ ಮಾಡಿದರು.
√ ಸಿದ್ದರಾಮಯ್ಯ ಕಾಂಗ್ರೆಸ್ ಕಟ್ಟಿದರಾ?
ಇಲ್ಲ, ದಲಿತ ನಾಯಕರನ್ನು ತುಳಿದರು.
√ ಸಿದ್ದರಾಮಯ್ಯ ರಾಜ್ಯ ಕಟ್ಟಿದರಾ?
ಇಲ್ಲ, ಧರ್ಮ ವಿಭಜನೆ ಮಾಡಿದರು.#ಕಪಟವೇಷಧಾರಿ