ಕಾಂಗ್ರೆಸ್, ಬಿಜೆಪಿಗೆ ತಿರುಗೇಟು ನೀಡಲು ಜೆಡಿಎಸ್'ನಿಂದ ಜಲಧಾರೆ ಅಭಿಯಾನ

2023ರ ವಿಧಾನಸಭೆ ಚುನಾವಣೆ ಹತ್ತಿರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಚುನಾವಣಗೆ ತಂತ್ರ ರೂಪಿಸಲು ಜೆಡಿಎಸ್ ಮುಂದಾಗಿದೆ. ಈಗಾಗಲೇ ನೀರಾವರಿ ಯೋಜನೆಗಳ ಕುರಿತು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ವಾಗ್ದಾಳಿಗಳ ನಡೆಸುತ್ತಿದ್ದು, ಇದಕ್ಕೆ ತಿರುಗೇಟು ನೀಡುವ ಸಲುವಾಗಿ ಜೆಡಿಎಸ್ ಜಲಧಾರೆ ಅಭಿಯಾನವನ್ನು ಆರಂಭಿಸಿದೆ.
ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಇತರೆ ನಾಯಕರು ಹಾಜರಿರುವುದು.
ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಇತರೆ ನಾಯಕರು ಹಾಜರಿರುವುದು.
Updated on

ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಹತ್ತಿರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಚುನಾವಣಗೆ ತಂತ್ರ ರೂಪಿಸಲು ಜೆಡಿಎಸ್ ಮುಂದಾಗಿದೆ. ಈಗಾಗಲೇ ನೀರಾವರಿ ಯೋಜನೆಗಳ ಕುರಿತು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ವಾಗ್ದಾಳಿಗಳ ನಡೆಸುತ್ತಿದ್ದು, ಇದಕ್ಕೆ ತಿರುಗೇಟು ನೀಡುವ ಸಲುವಾಗಿ ಜೆಡಿಎಸ್ ಜಲಧಾರೆ ಅಭಿಯಾನವನ್ನು ಆರಂಭಿಸಿದೆ.

ಜನತಾ ಪರ್ವ 1.0 ಎರಡನೇ ಹಂತ ' ಜನತಾ ಸಂಗಮ 'ದ ಐದನೇ ದಿನ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾತನಾಡಿರುವ ಜೆಡಿಎಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, 2022 ಜನವರಿ ತಿಂಗಳಿನಲ್ಲಿ ಈ ಅಭಿಯಾನ ಆರಂಭವಾಗಲಿದ್ದು, ಜೆಡಿಎಸ್ ಮಹಿಳಾ ಕಾರ್ಯಕರ್ತರು ಕರ್ನಾಟಕದಾದ್ಯಂತ 38 ನದಿಗಳು ಮತ್ತು ಉಪನದಿಗಳಿಂದ ಸಾಂಪ್ರದಾಯಿಕ ‘ಕಲಶ’ಗಳಲ್ಲಿ ನೀರನ್ನು ಸಂಗ್ರಹಿಸುತ್ತಾರೆ, ಬಳಿಕ ತಾಲ್ಲೂಕು ಪದಾಧಿಕಾರಿಗಳು ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಇದು ಪ್ರಾದೇಶಿಕ ಪಕ್ಷದ ಬದ್ಧತೆಯನ್ನು ಕರ್ನಾಟಕದ ಜನತೆಗೆ ಎತ್ತಿ ತೋರಿಸಲು ಮತ್ತು ಅಧಿಕಾರಕ್ಕೆ ಬಂದರೆ, ಎಲ್ಲಾ ಅಂತರರಾಜ್ಯ ನದಿ ವಿವಾದಗಳನ್ನು ಆದ್ಯತೆಯ ಮೇಲೆ ಇತ್ಯರ್ಥಪಡಿಸುವ ಸಂದೇಶವನ್ನು ರವಾನಿಸುತ್ತದೆ ಎಂದು ಜೆಡಿಎಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

"ಕೇಂದ್ರ ಅಥವಾ ನೆರೆಯ ರಾಜ್ಯಗಳು ನಮ್ಮ ಪಾಲಿನ ನೀರಿನ ಮೇಲಿನ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ನಾನು ಸಿಎಂ ಆಗಿದ್ದಾಗ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಸಲಹೆಯಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಕರ್ನಾಟಕಕ್ಕೆ 14.5 ಟಿಎಂಸಿ ನೀರು ಕೊಡಿಸಿದ್ದೇನೆ. ಕಾವೇರಿ, ಕೃಷ್ಣಾ ಸಮಸ್ಯೆ ಏನೇ ಇದ್ದರೂ ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇವೇಗೌಡರ ಬದ್ಧತೆ ನಿರ್ವಿವಾದವಾಗಿದೆ ಎಂದು ತಿಳಿಸಿದ್ದಾರೆ.

ಒಂದು ವರ್ಷದವರೆಗೆ, ಐದು ವಾಹನಗಳು ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ನಮ್ಮ ‘ಪಂಚರತ್ನ’ ಯೋಜನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳೊಂದಿಗೆ ಸಂಚರಿಸಲಿವೆ. ಎಲ್ಇಡಿ ಪ್ರೊಜೆಕ್ಟರ್ ಹೊಂದಿರುವ ಮತ್ತೊಂದು ವಾಹನವು ಕರ್ನಾಟಕಕ್ಕಾಗಿ ನಮ್ಮ ಸಾಧನೆಗಳು ಮತ್ತು ಯೋಜನೆಗಳನ್ನು ಪ್ರದರ್ಶಿಸುತ್ತದೆ. ರಾಜ್ಯದಲ್ಲಿ ಪೂರ್ಣಾವಧಿ ಆಡಳಿತ ನಡೆಸಿದರೆ ಇನ್ನು 20 ವರ್ಷಗಳ ಕಾಲ ಯಾವ ಪಕ್ಷವೂ ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ’ ಎಂದು ಪಕ್ಷದ ಶ್ರೇಯಸ್ಸಿಗಾಗಿ ಆಯೋಜಿಸಿದ್ದ ಒಂದು ವರ್ಷದವರೆಗೆ, ಐದು ವಾಹನಗಳು ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ನಮ್ಮ ‘ಪಂಚರತ್ನ’ ಯೋಜನೆಗಳನ್ನು ಬಿಂಬಿಸುವ ಟ್ಯಾಬ್ಲೋಗಳೊಂದಿಗೆ ಪ್ರಯಾಣಿಸುತ್ತವೆ.

ಎಲ್ಇಡಿ ಪ್ರೊಜೆಕ್ಟರ್ ಹೊಂದಿರುವ ಮತ್ತೊಂದು ವಾಹನವು ಕರ್ನಾಟಕಕ್ಕಾಗಿ ನಮ್ಮ ಸಾಧನೆಗಳು ಮತ್ತು ಯೋಜನೆಗಳನ್ನು ಪ್ರದರ್ಶಿಸುತ್ತದೆ. ರಾಜ್ಯದಲ್ಲಿ ಪೂರ್ಣಾವಧಿ ಆಡಳಿತ ನಡೆಸಿದರೆ ಇನ್ನು 20 ವರ್ಷಗಳ ಕಾಲ ಯಾವ ಪಕ್ಷವೂ ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ’ ಎಂದು ಪಕ್ಷದ ಶ್ರೇಯಸ್ಸಿಗಾಗಿ ಆಯೋಜಿಸಿದ್ದ ಜನತಾ ಪರ್ವ 1.0ರ ‘ಜನತಾ ಸಂಗಮ’ ಕಾರ್ಯಾಗಾರದಲ್ಲಿ ವಿವರಿಸಿದರು. ಒಂದು ವರ್ಷದವರೆಗೆ, ಐದು ವಾಹನಗಳು ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ನಮ್ಮ ‘ಪಂಚರತ್ನ’ ಯೋಜನೆಗಳನ್ನು ಬಿಂಬಿಸುವ ಟ್ಯಾಬ್ಲೋಗಳೊಂದಿಗೆ ಪ್ರಯಾಣಿಸುತ್ತವೆ; ಎಲ್ಇಡಿ ಪ್ರೊಜೆಕ್ಟರ್ ಹೊಂದಿರುವ ಮತ್ತೊಂದು ವಾಹನವು ಕರ್ನಾಟಕಕ್ಕಾಗಿ ನಮ್ಮ ಸಾಧನೆಗಳು ಮತ್ತು ಯೋಜನೆಗಳನ್ನು ಪ್ರದರ್ಶಿಸುತ್ತದೆ. ರಾಜ್ಯದಲ್ಲಿ ಪೂರ್ಣಾವಧಿ ಆಡಳಿತ ನಡೆಸಿದರೆ ಇನ್ನು 20 ವರ್ಷಗಳ ಕಾಲ ಯಾವ ಪಕ್ಷವೂ ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಸೋಲನ್ನು ಸೋಲು ಎಂದು ಪರಿಗಣಿಸಬೇಡಿ. ಏಕೆಂದರೆ ನಿಖಿಲ್'ಗೆ ಆರು ಲಕ್ಷಕ್ಕೂ ಹೆಚ್ಚು ಜನರು ಮತ ಹಾಕಿದ್ದಾರೆ. ನಾವು ಪ್ರಬಲವಾದ ಒಗ್ಗಟ್ಟಿನಿಂದ ಇದ್ದೇವೆ. 2023 ರಲ್ಲಿ ಎಲ್ಲಾ ಏಳು ಸ್ಥಾನಗಳನ್ನು ಗೆಲ್ಲುವ ಮೂಲಕ ಮಂಡ್ಯವನ್ನು ವೈಟ್‌ವಾಶ್ ಮಾಡಬಹುದು ಎಂದು ಇದೇ ವೇಳೆ ಮಂಡ್ಯದ ನಾಯಕರಿಗೆ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com