ಡಿಸೆಂಬರ್ 13-24 ರವರೆಗೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಿಧಾನಸಭೆ ಅಧಿವೇಶನ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಡಿಸೆಂಬರ್ 13 ರಿಂದ 24ರವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಸಭಾ ಅಧಿವೇಶನ ನಡೆಯಲಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
Published: 21st November 2021 01:25 PM | Last Updated: 22nd November 2021 01:04 PM | A+A A-

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಬೆಂಗಳೂರು: ಡಿಸೆಂಬರ್ 13 ರಿಂದ 24ರವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಸಭಾ ಅಧಿವೇಶನ ನಡೆಯಲಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್, ಪ್ರವಾಹ ಹಾಗೂ ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಿರಲಿಲ್ಲ. ಇದೀಗ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿರುವುದರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದರು.
Karnataka Assembly session will be held at Suvarna Vidhana Soudha, Belagavi from 13th to 24th December 2021: Karnataka Assembly Speaker Vishweshwara Hegde Kageri
— ANI (@ANI) November 21, 2021
(File photo) pic.twitter.com/SRtoIbSrty
ನ.17,18 ರಂದು ಶಿಮ್ಲಾದಲ್ಲಿ ನಡೆದ ಸಭಾಧ್ಯಕ್ಷರ ಸಮ್ಮೇಳನದಲ್ಲಿ 200ಕ್ಕಿಂತಲೂ ಹೆಚ್ಚು ರಾಜ್ಯಗಳ ಸ್ಪೀಕರ್‌ಗಳು ವಿಧಾನಸಭಾ ಕಾರ್ಯದರ್ಶಿಗಳೊಂದಿಗೆ ಕರ್ನಾಟಕದಿಂದ ನಾನು ಹಾಗೂ ಬಸವರಾಜ ಹೊರಟ್ಟಿ ಭಾಗವಹಿಸಿದ್ದೇವು. ಪ್ರಜಾಪ್ರಭುತ್ವದ ಸಂಸದೀಯ ವಿಚಾರಗಳ ಬಗ್ಗೆ ಚರ್ಚೆ ಆಗಿದೆ ಎಂದರು.
ಶಿಮ್ಲಾ ಅಧಿವೇಶನದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾರವರು ಭಾಗಿಯಾಗಿ, ಭಾಷಣ ಮಾಡಿದರು. ಅಧಿವೇಶನದಲ್ಲಿ ನಮ್ಮ ನಮ್ಮ ಕರ್ತವ್ಯದ ತಳಹದಿ ಹಾಗೂ ಗುರಿಯ ಬಗ್ಗೆ ಮೋದಿ ಸಂದೇಶ ಕಳಿಸಿದ್ದಾರೆ. ಸಂಸದೀಯ ವ್ಯವಸ್ಥೆಗಳ ಬಗ್ಗೆ ಚರ್ಚಿಸಿ ದೇಶದಲ್ಲಿ ಸಮರ್ಪಕವಾದ ವ್ಯವಸ್ಥೆಗಾಗಿ ವರ್ಷಕ್ಕೊಂದು ಸ್ಪೀಕರ್ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.
ಒಂದು ಸಮ್ಮೇಳನ ದೆಹಲಿಯಲ್ಲಿ, ಮತ್ತೊಂದು ಸಮ್ಮೇಳನ ಬೇರೆ ರಾಜ್ಯದಲ್ಲಿ ನಡೆಸಲು ನಿರ್ಣಯ ಅಗಿದೆ. ಸಮ್ಮೇಳನದಲ್ಲಿ ಯುವ ಶಾಸಕರಿಗೆ ತರಬೇತಿ, ಉತ್ತಮ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಪ್ರಶಸ್ತಿ ಕೊಡಲೂ ಚರ್ಚೆ ಆಗಿದೆ ಎಂದು ವಿವರಿಸಿದರು.