ಪರಿಷತ್​ ಚುನಾವಣೆ: ಬಿಜೆಪಿ-ಜೆಡಿಎಸ್​ ಮೈತ್ರಿ ಗ್ಯಾರಂಟಿ!: ಪ್ರಧಾನಿ ಮೋದಿ ಜೊತೆ ಸಭೆ ಬಳಿಕ ದೇವೇಗೌಡ ಹೇಳಿದ್ದೇನು?

ವಿಧಾನ ಪರಿಷತ್​ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಕುರಿತು, ಪ್ರಧಾನಿ ಮೋದಿಯವರ ಬಳಿ ಚರ್ಚಿಸಲಾಗಿದೆ ಎಂದು ಜೆಡಿಎಸ್ ಪರಮೋಚ್ಚ ನಾಯಕ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ಪ್ರಧಾನಿ ಮೋದಿ-ಎಚ್ ಡಿ ದೇವೇಗೌಡ
ಪ್ರಧಾನಿ ಮೋದಿ-ಎಚ್ ಡಿ ದೇವೇಗೌಡ

ನವದೆಹಲಿ: ವಿಧಾನ ಪರಿಷತ್​ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಕುರಿತು, ಪ್ರಧಾನಿ ಮೋದಿಯವರ ಬಳಿ ಚರ್ಚಿಸಲಾಗಿದೆ ಎಂದು ಜೆಡಿಎಸ್ ಪರಮೋಚ್ಚ ನಾಯಕ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

ದೆಹಲಿಯಲ್ಲಿಂದು ಪ್ರಧಾನಿ ಬಳಿಕ ಸುದ್ದಿಗಾರರೊಂದಿಗೆ ಮಾಡಿದ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆ ಮಾಡುವುದಾಗಿ ಹೇಳಿದ್ದಾರೆ. ಇದಾದ ನಂತರ ಎಚ್. ಡಿ. ಕುಮಾರಸ್ವಾಮಿ ಮತ್ತು ಬಿಜೆಪಿಯ ನಾಯಕ ಬಿ. ಎಸ್. ಯಡಿಯೂರಪ್ಪ ಪರಿಷತ್ ಚುನಾವಣೆಯಲ್ಲಿ ಮೈತ್ತಿ ಬಗ್ಗೆ ಮಾತುಕತೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ ಎಂದರು. 

ಮೈತ್ರಿ ಕುರಿತು ಒತ್ತಾಯವಿಲ್ಲ
ಈ ಬೆಳವಣಿಗೆ ನಂತರ ಮೈತ್ರಿ ಮಾಡಿಕೊಳ್ಳುವುದು ಪಕ್ಕವಾಗಿದೆ. ಮುಂದಿನ ಚುನಾವಣೆಯ ವೇಳೆ ಮೈತ್ರಿ ಬಗ್ಗೆ ಮಾತುಕತೆ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆಗೆ ಜೆಡಿಎಸ್​ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಸಿದೆ. ಆದರೆ ಕಾಂಗ್ರೆಸ್​ನ ಇತರ ನಾಯಕರಿಗೆ ಇದರ ಬಗ್ಗೆ ಮನಸ್ಸಿಲ್ಲ. ಹೀಗಾಗಿ ನಾವಾಗಿಯೇ ಮೈತ್ರಿಗೆ ಒತ್ತಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಾಸನದಲ್ಲಿ ಐಐಟಿ ವಿಚಾರ ಪ್ರಸ್ತಾಪ
ಹಾಸನದಲ್ಲಿ ಐಐಟಿ ಸ್ಥಾಪನೆ ಮಾಡುವ ಬಗ್ಗೆ ಈ ಹಿಂದೆ ಸಚಿವ ಧರ್ಮೇಂದ್ರ ಪ್ರಧಾನ್​ ಅವರಿಗೆ ಮನವಿ ಮಾಡಲಾಗಿತ್ತು ಅವರು ಸಾಧ್ಯವಿಲ್ಲ ಎಂದು ಪತ್ರ ಬರೆದಿದ್ದರು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಿಷಯ ಚರ್ಚೆ ಮಾಡಿರುವುದಾಗಿ ದೇವೇಗೌಡರು ಹೇಳಿದರು.

ಪ್ರಧಾನಿ ಮೋದಿಯವರು ಬಹಳ ಆತ್ಮೀಯವಾಗಿ ಮಾತನಾಡಿದ್ದಾರೆ. ಮಂಡಿ ನೋವಿದ್ದ ಕಾರಣ ಕೈ ಹಿಡಿದು ಬಾಗಿಲವರೆಗೂ ಬಿಟ್ಟು ಬಂದಿದ್ದಾರೆ ಎಂದರು. ಮೋದಿ ಮತ್ತು ದೇವೇಗೌಡರು ಕೈ ಹಿಡಿದುಕೊಂಡಿರುವ, ಕುರ್ಚಿಯಲ್ಲಿ ಕೂರಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com