ಜಿ. ಮಾದೇಗೌಡ, ಸಿದ್ದಲಿಂಗಯ್ಯ, ನಟಿ ಜಯಂತಿಗೆ ವಿಧಾನಸಭೆ ಶ್ರದ್ದಾಂಜಲಿ

ಹೆಸರಾಂತ ಚಿತ್ರ ನಟಿ ಜಯಂತಿ, ಮಂಡ್ಯ ಜಿಲ್ಲೆಯ ಉನ್ನತ ರಾಜಕಾರಣಿಯಾಗಿದ್ದ, ಅಗ್ರಗಣ್ಯ ರೈತ ಹೋರಾಟಗಾರ, ಜಿ. ಮಾದೇಗೌಡ, ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ, ಹಾಲಿ ಶಾಸಕರಾಗಿದ್ದ ಸಿಎಂ ಉದಾಸಿ, ದಲಿತ ಕವಿ ಸಿದ್ದಲಿಂಗಯ್ಯ ಸೇರಿದಂತೆ ಇತ್ತೀಚಿಗೆ ಆಗಲಿದ ಗಣ್ಯರಿಗೆ ವಿಧಾನಸಭೆ ಇಂದು ಶ್ರದ್ಧಾಂಜಲಿ ಸಲ್ಲಿಸಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಹೆಸರಾಂತ ಚಿತ್ರ ನಟಿ ಜಯಂತಿ, ಮಂಡ್ಯ ಜಿಲ್ಲೆಯ ಉನ್ನತ ರಾಜಕಾರಣಿಯಾಗಿದ್ದ, ಅಗ್ರಗಣ್ಯ ರೈತ ಹೋರಾಟಗಾರ, ಜಿ. ಮಾದೇಗೌಡ, ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ, ಹಾಲಿ ಶಾಸಕರಾಗಿದ್ದ ಸಿಎಂ ಉದಾಸಿ, ದಲಿತ ಕವಿ ಸಿದ್ದಲಿಂಗಯ್ಯ ಸೇರಿದಂತೆ ಇತ್ತೀಚಿಗೆ ಆಗಲಿದ ಗಣ್ಯರಿಗೆ ವಿಧಾನಸಭೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿತು.

ವಿಧಾನಸಭೆಯ ಕಾರ್ಯಕಲಾಪ ಆರಂಭವಾಗುತ್ತಿದ್ದಂತೆಯೇ ಒಂದೇ ಮಾತರಂ ಧ್ವನಿ ಸದನವನ್ನು ಆವರಿಸಿಕೊಂಡಿತು. ನಂತರ ಪ್ರದೇಶ ಸಭಾಧ್ಯಕ್ಷ ವಿಶ್ವೇಶ್ವರ ಹೆಗವೆ ಕಾಗೇರಿ ಇತ್ತಿಚೆಗೆ ಆಗಲಿದೆ ಗಣ್ಯರಿಗೆ ಸಂತಾಪ ಸೂಚಿಸುವ ನಿರ್ಣಯ ಮಾಡಿದರು.

ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ , ಮಾಜಿ ಸಚಿವರಾಗಿದ್ದ ಮುಮ್ತಾಜ್ ಅಲಿಖಾನ್, ಎ ಕೆ. ಅಬ್ದುಲ್ ಸಮದ್, ಹೆಸರಾಂತ ಕ್ರೀಡಾಪಟು ಮಿಲ್ಕಾ ಸಿಂಗ್, ಮಾಜಿ ಸಂಸದ ಸಿದ್ನಾಳ್ , ಶಾಣಪ್ಪ ಸೇರಿದಂತೆ ಗಣ್ಯರು ನಾಡು-ನುಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.

ಮೊದಲನ ದಿನವೇ ಶಾಸಕರ ಗೈರು ಹಾಜರಾತಿ ..!
ಸುಮಾರು ಆರು ತಿಂಗಳ ಬಳಿಕ ವಿಧಾನಸಭೆ ಅಧಿವೇಶನ ಇದು ಆರಂಭವಾಗಿದ್ದು ಮೊದಲೇ ದಿನವೇ ಬಹಳಷ್ಟು ಶಾಸಕರ ಗೈರು ಹಾಜರಿ ಸದನದಲ್ಲಿ ಎದ್ದು ಕಾಣುತ್ತಿತ್ತು.

ವಿಧಾನಸಭೆ ಕಲಾಪ ನಿಗದಿಯಂತೆ ಆರಂಭವಾಯಿತು, ಮೊದಲಿಗೆ ಸದನದಲ್ಲಿ ಒಂದೇ ಮಾತರಂ ದ್ವನಿ ಮೊಳಗಿತು. ಈ ಸಮಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸಾಲಿನಲ್ಲಿ ಬಹಳಷ್ಟು ಆಸನಗಳು ಖಾಲಿಯಾಗಿದ್ದವು, ಅದರಲ್ಲೂ ವಿರೋಧಪಕ್ಷಗಳ ಸಾಲಿನಲ್ಲಿ ಬಹುತೇಕ ಆಸನಗಳು ಖಾಲಿಯಾಗಿತ್ತು.

ಸ್ಪೀಕರ್ ಕಾಗೇರಿಯವರು ಸಂತಾಪ ನಿರ್ಣಯವನ್ನು ಓದುತ್ತಿದ್ದಂತೆಯೇ ನಿಧಾನವಾಗಿಬಹಳಷ್ಟು ಶಾಸಕರು ಸನದದ ಒಳಗಡೆ ಪ್ರವೇಶ ಮಾಡುತ್ತಿದ್ದ ದೃಶ್ಯ ಕಂಡುಬಂತು. ಒಟ್ಟಾರೆ ಮೊದಲ ದಿನದ ಕಲಾಪದಲ್ಲಿ ಶಾಸಕರ ಗೈರು ಹಾಜರಿ ಎದ್ದು ಕಾಣುತ್ತಿತ್ತು . ವಿಧಾನಸಭೆಯ ಕಾರ್ಯಕಲಾಪ ಆಗಲಿದೆ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ಕೆ ಸೀಮಿತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com