ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

2023 ವಿಧಾನಸಭಾ ಚುನಾವಣೆ: ಜಾತಿವಾರು ಸಮಾವೇಶಗಳ ಬಳಿಕ ವೃತ್ತಿಪರರ ಓಲೈಸಲು ಬಿಜೆಪಿ ಮುಂದು!

ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿದ್ದು, ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಟ್ಟುಕೊಂಡು ಸಮಾವೇಶಗಳನ್ನು ಆಯೋಜಿಸುತ್ತಿರುವ ರಾಜ್ಯ ಬಿಜೆಪಿ, ಇದೀಗ ವಿವಿಧ ವೃತ್ತಿಪರರನ್ನು ಓಲೈಸಲು ಮುಂದಾಗಿದೆ.
Published on

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿದ್ದು, ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಟ್ಟುಕೊಂಡು ಸಮಾವೇಶಗಳನ್ನು ಆಯೋಜಿಸುತ್ತಿರುವ ರಾಜ್ಯ ಬಿಜೆಪಿ, ಇದೀಗ ವಿವಿಧ ವೃತ್ತಿಪರರನ್ನು ಓಲೈಸಲು  ಮುಂದಾಗಿದೆ.

ರಾಜ್ಯ ಬಿಜೆಪಿ 24 ಪ್ರಕೋಷ್ಠಗಳನ್ನು ಹೊಂದಿದ್ದು, ಪ್ರತಿಯೊಂದು ಪ್ರಕೋಷ್ಠಕಕ್ಕೂ ವೈದ್ಯರು, ವಕೀಲರು, ಮೀನುಗಾರರು, ರೈತರು, ನೇಕಾರರು, ಉದ್ಯಮದ ಕಾರ್ಮಿಕರು, ಸೈನಿಕರು, ಶಿಕ್ಷಕರು ಮತ್ತು ಇತರ ವೃತ್ತಿಪರರ ಓಲೈಸುವ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ಡಿಸೆಂಬರ್ 18 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಪ್ರಕೋಷ್ಟಗಳ ರಾಜ್ಯ ಮಟ್ಟದ 'ಶಕ್ತಿ ಸಂಗಮ' ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಸುಮಾರು 20,000 ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಸಮಾವೇಶವನ್ನು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಅವರು ಉದ್ಘಾಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಅವರು ಮಾತನಾಡಿ, ಇದೇ ಮೊದಲ ಬಾರಿಗೆ ವೈದ್ಯರು ಮತ್ತು ವಕೀಲರಂತಹ ವೃತ್ತಿಪರರಿಗೆ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

“ಪ್ರತಿ ಕ್ಷೇತ್ರವನ್ನು ಸಂಘಟಿಸುವ ಮೂಲಕ, ನಾವು ಹೆಚ್ಚಿನ ಸಂಖ್ಯೆಯ ಮತದಾರರನ್ನು ತಲುಪಲು ಸಾಧ್ಯವಾಗುತ್ತದೆ. ಉದಾಹರಣೆಗೆ, ನಾವು ಉದ್ಯಮ ಆಧಾರಿತ ಅಥವಾ ಕಾರ್ಮಿಕ ಆಧಾರಿತ ಸಭೆಗಳನ್ನು ಆಯೋಜಿಸಿದರೆ, ನಾವು ಕನಿಷ್ಠ ಎರಡು ಲಕ್ಷ ಸದಸ್ಯರೊಂದಿಗೆ ಸಂವಹನ ನಡೆಸಬಹುದು. ಈ ವಿಷಯಗಳ ಕುರಿತು ಡಿಸೆಂಬರ್ 18ರ ಸಭೆಯಲ್ಲಿ ಚರ್ಚಿಸಿ ಇಂತಹ ಸಮಾವೇಶಗಳಿಗೆ ಮಾರ್ಗಸೂಚಿ ರೂಪಿಸಲಾಗುವುದು ಎಂದು ತಿಳಿಸಿದರು.

“ಯಾವುದೇ ವಿಧಾನಸಭಾ ಕ್ಷೇತ್ರವಾಗಿದ್ದರೂ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ನಾವು ಈ ವೃತ್ತಿಪರರಿಗೆ ಮನವಿ ಮಾಡುತ್ತೇವೆ. ಇದರೊಂದಿಗೆ, ನಾವು ಈ ವೃತ್ತಿಪರರ ಕುಟುಂಬದ ಸದಸ್ಯರ ಮನಸ್ಸನ್ನೂ ಗೆಲ್ಲಬಹುದು ಎಂದರು.

ಕೆಲವು ವೃತ್ತಿಗಳು ಕೆಲವು ಜಾತಿಗಳೊಂದಿಗೆ ಸಂಬಂಧ ಹೊಂದಿದ್ದರೂ, ವೈದ್ಯರು ಮತ್ತು ವಕೀಲ ವೃತ್ತಿಗಳು ಜಾತಿಗಳೊಂದಿಗೆ ಸಂಬಂಧ ಹೊಂದಿಲ್ಲ."ನಾವು ಅವರೊಂದಿಗೆ ಸಂವಹನ ನಡೆಸಲು ಮತ್ತು ಅವರ ಬೇಡಿಕೆಗಳನ್ನು ನಮ್ಮ ಪ್ರಣಾಳಿಕೆಯಲ್ಲಿ ಸೇರಿಸಲು ಬಯಸುತ್ತೇವೆ. ಇದು ನಮ್ಮ ಸಮಗ್ರ ತಲುಪುವ ಕಾರ್ಯಕ್ರಮವೂ ಹೌದು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಈ ಕೆಲವು ವೃತ್ತಿಪರರು ಇತರ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುತ್ತಾರೆ ಮತ್ತು ಈ ಸಮಾವೇಶಗಳ ಗಮನವು ಅವರನ್ನು ಕೇಸರಿ ಪಕ್ಷಕ್ಕೆ ಹತ್ತಿರವಾಗುವಂತೆ ಮಾಡುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com