20 ಶಾಸಕರೊಂದಿಗೆ ಹೈದರಾಬಾದ್ ಗೆ ಹಾರಿದ ಎಚ್ ಡಿ ಕುಮಾರಸ್ವಾಮಿ!
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ 20 ಮಂದಿ ಜೆಡಿಎಸ್ ಶಾಸಕರೊಂದಿಗೆ ಸೇರಿ ಹೈದರಾಬಾದ್ ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಜೆಡಿಎಸ್ ಮೂಲಗಳು ತಿಳಿಸಿರುವಂತೆ ವಿಶೇಷ ವಿಮಾನದಲ್ಲಿ ಕುಮಾರಸ್ವಾಮಿ ಮತ್ತು 20 ಶಾಸಕರು ಹೈದರಾಬಾದ್ ಗೆ ಹಾರಿದ್ದು, ನಾಳೆ ಹೈದರಾಬಾದ್‌ನಲ್ಲೇ ವಾಸ್ತವ್ಯವಿರಲಿದ್ದಾರೆ ಎನ್ನಲಾಗಿದೆ. ತೆಲಂಗಾಣ (Telangana) ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು (K Chandrasekhar Rao) ನವರಾತ್ರಿ ಸಂದರ್ಭದಲ್ಲಿ ನೂತನ ಪಕ್ಷ ಘೋಷಣೆ ಮಾಡುವುದಾಗಿ ಈ ಹಿಂದೆ ಘೋಷಿಸಿದಂತೆ ನಾಳೆ ಹೈದರಾಬಾದ್‌ನಲ್ಲಿ (Hyderabad) ಕಾರ್ಯಕ್ರಮ ಹಮ್ಮಿಕೊಂಡಿದೆ.
ಹೀಗಾಗಿ ಸಿಎಂ ಕೆಸಿಆರ್ ಆಹ್ವಾನದ ಮೇರೆಗೆ ಕುಮಾರಸ್ವಾಮಿ ಮತ್ತು ಅವರ ಶಾಸಕರ ತಂಡ ನಾಳೆ ಆ ಸಮಾರಂಭದಲ್ಲಿ ಭಾಗಿಯಾಗಲಿದೆ ಎನ್ನಲಾಗಿದೆ.
ಸಿಎಂ ಕೆಸಿಆರ್ ನೂತನ ಪಕ್ಷ ಘೋಷಣೆ ಕಾರ್ಯಕ್ರಮದಲ್ಲಿ ಭಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಭಾರತ ರಾಷ್ಟ್ರ ಸಮಿತಿ ಪಕ್ಷವನ್ನು ಅಧಿಕೃತವಾಗಿ ನಾಳೆ ಸ್ಥಾಪನೆ ಮಾಡಲಿದ್ದಾರೆ.
ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಕೆ.ಸಿ.ಆರ್ ಅವರು ಭಾರತದ ಮಾಜಿ ಪ್ರಧಾನಿ, ಜೆಡಿಎಸ್ ಅಧಿನಾಯಕ ಹೆಚ್‌ಡಿ ದೇವೇಗೌಡ ಮತ್ತು ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ್ದರು. ಪಕ್ಷ ಸ್ಥಾಪನೆ ಬಗ್ಗೆಯೂ ಹೆಚ್‌ಡಿ ದೇವೇಗೌಡ ಮತ್ತು ಹೆಚ್‌ಡಿಕೆ ಜತೆ ಚರ್ಚಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ