ಕನ್ಹಯ್ಯ ಕುಮಾರ್
ಕನ್ಹಯ್ಯ ಕುಮಾರ್

ದ್ವೇಷ ಆಧಾರಿತ ರಾಜಕಾರಣ ದೇಶದ ಅಭಿವೃದ್ಧಿಗೆ ನೆರವಾಗುವುದಿಲ್ಲ: ಕನ್ಹಯ್ಯಾ ಕುಮಾರ್

ಜನರಲ್ಲಿ ಕೋಪ ಮತ್ತು ಹತಾಶೆ ಇರುತ್ತದೆ, ಅವರು ತಮ್ಮ ಜೀವನದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಬಯಸುತ್ತಾರೆ. ದ್ವೇಷಾಧಾರಿತ ರಾಜಕಾರಣ ನಮಗೆ ಸಹಾಯ ಮಾಡುವುದಿಲ್ಲ .
Published on

ಬಳ್ಳಾರಿ: ಜನರಲ್ಲಿ ಕೋಪ ಮತ್ತು ಹತಾಶೆ ಇರುತ್ತದೆ, ಅವರು ತಮ್ಮ ಜೀವನದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಬಯಸುತ್ತಾರೆ. ದ್ವೇಷಾಧಾರಿತ ರಾಜಕಾರಣ ನಮಗೆ ಸಹಾಯ ಮಾಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು, ಭಾರತೀಯರನ್ನು ವಿಭಜಿಸುತ್ತಿರುವುದು ಸಮಸ್ಯೆಯಲ್ಲ, ಆದರೆ ಸಮಸ್ಯೆಗಳಿಂದ ಅವರ ಗಮನವನ್ನು ಬೇರೆಡೆಗೆ ತಿರುಗಿಸುತ್ತಿರುವುದು ನಿಜವಾದ ಸಮಸ್ಯೆ, ಅಧಿಕಾರದಲ್ಲಿರುವವರು ತಮ್ಮ ಸಿದ್ಧಾಂತದ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಭೌಗೋಳಿಕವಾಗಿ ದೇಶ ಒಂದಾಗಿದ್ದರೂ, ಅಧಿಕಾರದಲ್ಲಿರುವವರು ಜನರನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟಿದ್ದಾರೆ, ಆದರೆ ನೈಜ ಸಮಸ್ಯೆಗಳನ್ನು ಮುಚ್ಚಿಡುತ್ತಿದ್ದಾರೆ. 200 ಹುದ್ದೆಗಳಿಗೆ 35 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ. ಇದು ನಿರುದ್ಯೋಗ ದರವನ್ನು ತೋರಿಸುತ್ತದೆ, ಇದು 35 ವರ್ಷಗಳಲ್ಲಿ ಅತ್ಯಧಿಕವಾಗಿದೆ ಎಂದಿದ್ದಾರೆ.

ಸರ್ಕಾರವು ವಿಲ್ಲಾಗಳಿಗೆ 20,000 ಕೋಟಿ ರೂಪಾಯಿ ಮತ್ತು ಜೆಟ್‌ಗೆ 8,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ, ಆದರೆ ಜನರ ಕಲ್ಯಾಣಕ್ಕೆ ಹಣವಿಲ್ಲ. ಅದೇ ಸಮಯದಲ್ಲಿ, ಸಂಸದರು ಮತ್ತು ಅಧಿಕಾರದಲ್ಲಿರುವವರ ವೇತನಗಳು ಏರುತ್ತಲೇ ಇರುತ್ತವೆ. ನಮ್ಮಿಂದ ಹಣ ಪಡೆದು ತಮ್ಮ ಸ್ನೇಹಿತರಿಗೆ ನೀಡುತ್ತಿದ್ದಾರೆ. ಈ ಲೂಟಿಯನ್ನು ಕಾಪಾಡಲಪ ಅವರು ದ್ವೇಷ ಆಧಾರಿತ ರಾಜಕೀಯವನ್ನು ಉತ್ತೇಜಿಸುತ್ತಿದ್ದಾರೆ. ಜನರು ಇಂತಹ ರಾಜಕೀಯದಲ್ಲಿ ನಿರತರಾದಾಗ ಯಾರೂ ಏನನ್ನೂ ಕೇಳುವುದಿಲ್ಲ.

ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿರುವ ಈ ಕಷ್ಟದ ಸಮಯದಲ್ಲಿ ಜನಸಾಮಾನ್ಯರೊಂದಿಗೆ ನಿಲ್ಲಬೇಕು ಎಂದು ಹೇಳಿದರು. “ರಾಹುಲ್ ಈ ನಡಿಗೆಯೊಂದಿಗೆ ತಮ್ಮ ವೃತ್ತಿಜೀವನವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಲವರು ಭಾವಿಸುತ್ತಾರೆ, ಅದು ತಪ್ಪು, ಯಾತ್ರೆಯು ಭಾರತದ ಯುವಕರ ವೃತ್ತಿಜೀವನದ ಬಗ್ಗೆ ನಡೆಯುತ್ತಿದೆ.

ತಮಿಳುನಾಡಿನಲ್ಲಿ ಯಾತ್ರೆ ಆರಂಭವಾದಾಗ ದಕ್ಷಿಣ ಕಾಂಗ್ರೆಸ್ ಸ್ನೇಹಿ ಪ್ರದೇಶ ಎಂದು ಹೇಳಲಾಗಿತ್ತು. ಆದರೆ ಕರ್ನಾಟಕದಲ್ಲಿ ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿತ್ತು. ಇಲ್ಲಿ ಭಾರತ್ ಜೋಡೋ ಯಾತ್ರೆಗೆ ಅಪಾರ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

"ನನ್ನ ಸಿದ್ಧಾಂತದ ಬಗ್ಗೆ ಜನರು ನನ್ನನ್ನು ಕೇಳಿದಾಗ, ನಾನು ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು, ಬಹುಸಂಸ್ಕೃತಿಯನ್ನು ಪ್ರವರ್ಧಮಾನಕ್ಕೆ ತರಲು ಮತ್ತು ನಮ್ಮ ಸಾಂವಿಧಾನಿಕತೆಯ ನೀತಿಯನ್ನು ರಕ್ಷಿಸಲು ನಾನು ಹೋರಾಡುತ್ತಿದ್ದೇನೆ ಎಂದು ನಾನು ಅವರಿಗೆ ಹೇಳುತ್ತೇನೆ" ಎಂದು ರಾಜಕೀಯ ಪ್ರವೇಶದ ಬಗ್ಗೆ ಕೇಳಿದ ಪ್ರಶ್ನೆಗೆ ಕನ್ಹಯ್ಯಕುಮಾರ್ ಉತ್ತರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com