ಕಿಲ್ಲರ್ ರಸ್ತೆ ಗುಂಡಿಗೆ 24 ತಿಂಗಳುಗಳಲ್ಲಿ 12 ಮಂದಿ ಬಲಿ: ಬಿಜೆಪಿ ವಿರುದ್ಧ ಗುಡುಗಿದ ಕಾಂಗ್ರೆಸ್

ಬೆಂಗಳೂರಿನ ಕಿಲ್ಲರ್ ರಸ್ತೆ ಗುಂಡಿ ಮತ್ತೊಂದು ಜೀವವನ್ನು ಬಲಿಪಡೆದುಕೊಂಡಿದ್ದು, ಈ ಮೂಲಕ ಕಳೆದ 24 ತಿಂಗಳಿನಲ್ಲಿ 12 ಮಂದಿ ರಸ್ತೆ ಗುಂಡಿಗಳಿಂದಾಗಿ ಸಾವನ್ನಪ್ಪಿದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರಿನ ಕಿಲ್ಲರ್ ರಸ್ತೆ ಗುಂಡಿ ಮತ್ತೊಂದು ಜೀವವನ್ನು ಬಲಿಪಡೆದುಕೊಂಡಿದ್ದು, ಈ ಮೂಲಕ ಕಳೆದ 24 ತಿಂಗಳಿನಲ್ಲಿ 12 ಮಂದಿ ರಸ್ತೆ ಗುಂಡಿಗಳಿಂದಾಗಿ ಸಾವನ್ನಪ್ಪಿದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯುತ್ತಿದೆ. 

ಇಷ್ಟು ದಿನ ಪೇ ಸಿಎಂ ಎಂದು ಹ್ಯಾಷ್ ಟ್ಯಾಗ್ ಬಳಸಿ ಬಿಜೆಪಿ ವಿರುದ್ಧ ಟ್ವೀಟ್ ಮಾಡುತ್ತಿದ್ದ ಕಾಂಗ್ರೆಸ್ ಇದೀಗ ಬೆಂಗಳೂರಿನ ಹದಗೆಟ್ಟ ರಸ್ತೆಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.

ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೇವಾಲಾ ಅವರು ಈ ಸಂಬಂಧ ಟ್ವೀಟ್ ಮಾಡಿದ್ದು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ನಗರದ ರಸ್ತೆಗಳು ಸಾವಿನ ಕುಣಿಕೆಯಾಗಿ ಪರಿವರ್ತನೆಗೊಂಡಿವೆ. ರಸ್ತೆಗಳಿಂದ ಸಾವು-ನೋವುಗಳು ಸಂಭವಿಸುತ್ತಿವೆ. ಇದಕ್ಕೆ ಸರ್ಕಾರವೇ ಹೊಣೆಯಾಗಿದೆ. ಜನಸಾಮಾನ್ಯರಂತೆ ಬಿಂಬಿಸಿಕೊಳ್ಳುವ ಬೊಮ್ಮಾಯಿಯವರು ಮೊದಲು ರಸ್ತೆ ಗುಂಡಿಗಳಿಂದ ಜನಸಾಮಾನ್ಯರು ಎಂತಹ ಕಷ್ಟ ಅನುಭವಿಸುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕಿದೆ. ನಿಮ್ಮ ಧಮ್, ತಾಕತ್ತನ್ನು ರಸ್ತೆ ಗುಂಡಿ ಮುಚ್ಚುವುದರಲ್ಲಿ ತೋರಿಸಿ ಎಂದು ಸವಾಲು ಹಾಕಿದ್ದಾರೆ. 

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಸರಕಾರಕ್ಕೆ ಲಂಚ ಮತ್ತು ಭ್ರಷ್ಟಾಚಾರದಲ್ಲಿ ಮಾತ್ರ ಆಸಕ್ತಿ ಇದೆಯೇ ಹೊರತು ಅಭಿವೃದ್ಧಿಯ ಬಗ್ಗೆ ಅಲ್ಲ. “ಜನರ ಪ್ರಾಣಕ್ಕಿಂತ ಅವರಿಗೆ ಲಂಚ ಮುಖ್ಯ. ಗುಂಡಿಗಳಿಂದ ಜನ ಸಾಯುತ್ತಿದ್ದರೂ ಅದನ್ನು ತುಂಬಲು ಪ್ರಾಮುಖ್ಯತೆ ನೀಡುತ್ತಿಲ್ಲ’ ಎಂದು ಹೇಳಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಸರ್ಕಾರದ ವೈಫಲ್ಯದ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆಯನ್ನು ಅಂತಿಮಗೊಳಿಸಲು ಶನಿವಾರ ಹಿರಿಯ ನಾಯಕರ ಸಭೆ ನಡೆಸುವುದಾಗಿ ಹೇಳಿದ್ದಾರೆ. 

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿದ್ದು, ಸರ್ಕಾರಕ್ಕೆ ನಾಚಿಕೆ ಇದ್ದರೆ ಆದಷ್ಟು ಬೇಗ ಗುಂಡಿಗಳನ್ನು ತುಂಬಿಸಬೇಕು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com