ಬೆಂಗಳೂರು: ಗುರುವಾರ ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲ್ಪಟ್ಟ ಮತಾಂತರ ವಿರೋಧಿ ಮಸೂದೆ ಎಂದೂ ಕರೆಯಲ್ಪಡುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ರಕ್ಷಣೆ ಮಸೂದೆ 2022 ನ್ನು ಕಾನೂನುಬದ್ಧವಾಗಿ ಪ್ರಶ್ನಿಸಲು ಕಾಂಗ್ರೆಸ್ ಯೋಜಿಸುತ್ತಿದೆ.
ಹೊಸ ಕಾನೂನಿನ ವಿರುದ್ಧ ಕಾಂಗ್ರೆಸ್ ಕಾನೂನು ಘಟಕವು ಹೈಕೋರ್ಟ್‌ನ ಮೊರೆ ಹೋಗಲಿದೆ ಎಂದು ಮಾಜಿ ಸಚಿವ ಮತ್ತು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮತಾಂತರ ಮತ್ತು ಗೋಹತ್ಯೆ ವಿರೋಧಿ ಕಾನೂನು ಸೇರಿದಂತೆ ಎಲ್ಲಾ ಅಸಂವಿಧಾನಿಕ ಕಾನೂನನ್ನು ಶಾಸನದ ಮೂಲಕ ರದ್ದುಗೊಳಿಸಲಾಗುವುದು ಎಂದು ಅವರು ಹೇಳಿದರು.
ಬಲವಂತದ ಮತಾಂತರ ತಡೆಯಲು ಕಾನೂನು ಜಾರಿಗೆ ತರಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಅದು ತನ್ನ ನಿಲುವನ್ನು ಬೆಂಬಲಿಸಲು ಯಾವುದೇ ಅಂಕಿಅಂಶಗಳನ್ನು ತಿಳಿಸಿಲ್ಲ. ಆರು ತಿಂಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ಹೊಂದಿದ್ದ ಬೊಮ್ಮಾಯಿ ಅವರ ಸಂಪುಟ ಸಹೋದ್ಯೋಗಿ ಗೋವಿಂದ ಕಾರಜೋಳ ಈ ವಿಚಾರದ ಬಳಿ ಸರ್ಕಾರದ ಬಳಿ ಯಾವುದೇ ವಿವರಗಳು ಇಲ್ಲ ಎಂದು ಹೇಳಿದ್ದರು. ಹಲವು ನ್ಯಾಯಾಲಯಗಳು ತಡೆಯಾಜ್ಞೆ ನೀಡಿರುವುದನ್ನು ನಿರ್ಲಕ್ಷಿಸಿ ಕಾನೂನು ಇಲಾಖೆ ಹೊಸ ಬಿಲ್ ತಂದಿದೆ. ಭ್ರಷ್ಟಾಚಾರ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ತಂತ್ರವಾಗಿದೆ ಎಂದು ಅವರು ಹೇಳಿದರು.
ಬಿಲ್ ನ ಕಾನೂನುಬದ್ಧತೆಯ ಬಗ್ಗೆ ಮನಗೆ ಕಳವಳವಿದೆ. ಗುಜರಾತ್, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳು ಅಂಗೀಕರಿಸಿದ ಮಸೂದೆಗಳನ್ನು ಇಲ್ಲಿ ಪುನರಾವರ್ತಿಸಲಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ಆ ಎಲ್ಲಾ ಬಿಲ್ ಗಳನ್ನು ಆಯಾ ಹೈಕೋರ್ಟ್‌ಗಳು ಮತ್ತು ಕೆಲವೊಂದನ್ನು ಸುಪ್ರೀಂಕೋರ್ಟ್ ತಡೆಹಿಡಿದಿವೆ. ಇದು ಹಾದಿಯಾ ಪ್ರಕರಣದಲ್ಲಿ (2017-18) ಸುಪ್ರಿಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದ ಪ್ರಿಯಾಂಕ್ ಖರ್ಗೆ, ಧರ್ಮವನ್ನು ಪ್ರತಿಪಾದಿಸುವ ಮತ್ತು ಆಚರಿಸುವ ಹಕ್ಕಿನ ಬಗ್ಗೆ ಕಾಪಿ ಪೇಸ್ಟ್ ಮಾಡುವ ಬದಲು ಸರ್ಕಾರ ಸ್ಪಷ್ಟತೆಯೊಂದಿಗೆ ಹೊರಬರಲಿ. ಇದು ಸಂವಿಧಾನದ 25 ನೇ ವಿಧಿಯ ಉಲ್ಲಂಘನೆ ಎಂದರು.
Advertisement