ಯತ್ನಾಳ್ ಬಿಜೆಪಿ ಭವಿಷ್ಯ ಹೇಳುವ ನಾಸ್ಟ್ರಾಡಾಮಸ್; ಡಾ. ಕೆ.ಸುಧಾಕರ್ 'ಸ್ವಿಮ್ಮಿಂಗ್ ಸ್ಟಾರ್: ಕಾಂಗ್ರೆಸ್ ಲೇವಡಿ
ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣ ವಿದ್ದು, 3ನೇ ಸಿಎಂ' ಸೀಟು ಹತ್ತುವ ಕಾಲ ಸನ್ನಿಹಿತ ಎಂಬ ಕಾಂಗ್ರೆಸ್ ಟ್ವೀಟ್ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Published: 10th August 2022 12:13 AM | Last Updated: 10th August 2022 12:58 PM | A+A A-

ಬಿಜೆಪಿ ಶಾಸಕ ಯಾತ್ನಾಳ್
ಬೆಂಗಳೂರು: ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣ ವಿದ್ದು, 3ನೇ ಸಿಎಂ' ಸೀಟು ಹತ್ತುವ ಕಾಲ ಸನ್ನಿಹಿತ ಎಂಬ ಕಾಂಗ್ರೆಸ್ ಟ್ವೀಟ್ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ತನ್ನ ಟ್ವೀಟ್ ನ್ನು ಪುನರುಚ್ಚರಿಸಿರುವ ಕಾಂಗ್ರೆಸ್ ಯತ್ನಾಳ್ ಬಿಜೆಪಿ ಭವಿಷ್ಯ ಹೇಳುವ ನಾಸ್ಟ್ರಾಡಾಮಸ್ ಇದ್ದಂಗೆ, ಬಿಎಸ್ ಯಡಿಯೂರಪ್ಪ ಅವರ ಪದಚ್ಯುತಿಯ ಬಗ್ಗೆ ಹೇಳಿದ್ದು ನಿಜವಾಗಿತ್ತು, ಈಗ ಬೊಮ್ಮಾಯಿಯವರ ಬಗ್ಗೆ ಹೇಳುವುದೂ ನಿಜವಾಗುವಂತಿದೆ! ಅವರು ಹೇಳುವಂತೆ ಅಮಿತ್ ಶಾ PuppetCM ಬದಲಾವಣೆಯ ನಿರ್ಣಯ ತೆಗೆದುಕೊಳ್ಳುವ 'ಕಾಲ' ಸನ್ನಿಹಿತವಾಗಿದೆ ಅಲ್ಲವೇ ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ.
ಶಾಸಕ ಯತ್ನಾಳ್ ಅವರು ಬಿಜೆಪಿಯ ಭವಿಷ್ಯ ಹೇಳುವ ನಾಸ್ಟ್ರಾಡಾಮಸ್ ಇದ್ದಂಗೆ!@BSYBJP ಅವರ ಪದಚ್ಯುತಿಯ ಬಗ್ಗೆ ಹೇಳಿದ್ದು ನಿಜವಾಗಿತ್ತು, ಈಗ ಬೊಮ್ಮಾಯಿಯವರ ಬಗ್ಗೆ ಹೇಳುವುದೂ ನಿಜವಾಗುವಂತಿದೆ!
ಅವರು ಹೇಳುವಂತೆ ಅಮಿತ್ ಶಾ ಅವರು #PuppetCM ಬದಲಾವಣೆಯ ನಿರ್ಣಯ ತೆಗೆದುಕೊಳ್ಳುವ 'ಕಾಲ' ಸನ್ನಿಹಿತವಾಗಿದೆ ಅಲ್ಲವೇ @BJP4Karnataka? pic.twitter.com/XWDx6KE9yL— Karnataka Congress (@INCKarnataka) August 9, 2022
ಇನ್ನೂ ಕಾಂಗ್ರೆಸ್ ವಿರುದ್ಧ ಟ್ವೀಟ್ ವಾರ್ ನಡೆಸಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರನ್ನು 'ಸ್ವಿಮ್ಮಿಂಗ್ ಸ್ಟಾರ್, ಜಂಪಿಂಗ್ ಸ್ಟಾರ್ ಅಂತಾ ಕಾಂಗ್ರೆಸ್ ಕರೆದಿದೆ. ಜನ ಸಾಯುವಾಗ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮೋಜಿಗೆ ಇಳಿದಿದ್ದ 'ಸ್ವಿಮ್ಮಿಂಗ್ ಸ್ಟಾರ್' ಡಾ. ಕೆ. ಸುಧಾಕರ್ , ಬೆಲ್ಲ ಇರುವಲ್ಲಿ ಇರುವೆ ಎಂಬಂತೆ ಯಾರೇ ಸಿಎಂ ಆದರೂ ಅವರ ಹಿಂದೆ ಸುತ್ತುವುದು ನಿಮ್ಮ ಹಳೆ ಚಾಳಿ! ತಾವೆಷ್ಟೇ ನವರಂಗಿ ನಾಟಕವಾಡಿದರೂ ಬಿಜೆಪಿಯಲ್ಲಿ ತಾವು ಸದಾ 'ವಲಸಿಗ'ನೇ! ಅಂದಹಾಗೆ ಮುಂದೆ ಅಧಿಕಾರಕ್ಕಾಗಿ ಯಾವ ಕಡೆ ನಿಮ್ಮ ಜಂಪ್?! ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣ; '3ನೇ ಸಿಎಂ' ಸೀಟು ಹತ್ತುವ ಕಾಲ ಸನ್ನಿಹಿತ!
ಜನ ಸಾಯುವಾಗ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮೋಜಿಗೆ ಇಳಿದಿದ್ದ 'ಸ್ವಿಮ್ಮಿಂಗ್ ಸ್ಟಾರ್' @mla_sudhakar ಅವರೇ,
— Karnataka Congress (@INCKarnataka) August 9, 2022
ಬೆಲ್ಲ ಇರುವಲ್ಲಿ ಇರುವೆ ಎಂಬಂತೆ ಯಾರೇ ಸಿಎಂ ಆದರೂ ಅವರ ಹಿಂದೆ ಸುತ್ತುವುದು ನಿಮ್ಮ ಹಳೆ ಚಾಳಿ!
ತಾವೆಷ್ಟೇ ನವರಂಗಿ ನಾಟಕವಾಡಿದರೂ ಬಿಜೆಪಿಯಲ್ಲಿ ತಾವು ಸದಾ 'ವಲಸಿಗ'ನೇ!
ಅಂದಹಾಗೆ
ಮುಂದೆ ಅಧಿಕಾರಕ್ಕಾಗಿ ಯಾವ ಕಡೆ ನಿಮ್ಮ ಜಂಪ್?!
ಅಧಿಕಾರಕ್ಕಾಗಿ ಎಲ್ಲಿಗೆ ಬೇಕಾದರೂ ಜಂಪ್ ಮಾಡುವ ಸಿದ್ದಾಂತವಿಲ್ಲದ 'ಜಂಪಿಂಗ್ ಸ್ಟಾರ್' ಡಾ. ಕೆ. ಸುಧಾಕರ್. ಈ ಸರ್ಕಾರದ ಭ್ರಷ್ಟಾಚಾರ ಪರ್ವದಲ್ಲಿ ನಿಮ್ಮದೇ ಸಿಂಹಪಾಲು, ಈ ಸರ್ಕಾರಕ್ಕೆ #ಸೋಂಕಿತಸರ್ಕಾರ ಎಂಬ ಬಿರುದು ಬಂದಿದ್ದು ನಿಮ್ಮಿಂದಲೇ ಅಲ್ಲವೇ? ಕೋವಿಡ್ ಸಂದರ್ಭದಲ್ಲಿ ಹೆಣದ ಮೇಲೆ ಹಣ ಮಾಡಿದ ತಮಗೆ ಪಾಪಪ್ರಜ್ಞೆ ಕಾಡದಿರುವುದು ದುರಂತ! ಎಂದು ಕಾಂಗ್ರೆಸ್ ಟೀಕಿಸಿದೆ. ಕೋವಿಡ್ ಹೆಸರಲ್ಲಿ ಲೂಟಿ ನಡೆಸಿ PAC ಗೆ ಲೆಕ್ಕ ನೀಡದೆ ತಲೆತಪ್ಪಿಸಿಕೊಂಡ ಮಾತ್ರಕ್ಕೆ ತಾವು 'ಸಾಚಾ' ಆಗಲಾರಿರಿ ಎಂದು ಆರೋಪಿಸಿದೆ.