'ದೇಶ ವಿಭಜನೆಯ ಕರಾಳ ನೆನಪು, ಜಾಹೀರಾತಿನಲ್ಲಿ ಬೇಕೆಂದೇ ನೆಹರೂ ಚಿತ್ರ ಕೈಬಿಟ್ಟಿದ್ದೇವೆ': ಎನ್.ರವಿಕುಮಾರ್
ದೇಶ ವಿಭಜನೆಯ ಕರಾಳ ನೆನಪಿನಾರ್ಥವಾಗಿ ಜಾಹೀರಾತಿನಲ್ಲಿ ಬೇಕೆಂದೇ ನೆಹರೂ ಚಿತ್ರ ಕೈಬಿಟ್ಟಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದೇವೆ.
Published: 14th August 2022 07:28 PM | Last Updated: 14th August 2022 07:28 PM | A+A A-

ಎನ್ ರವಿಕುಮಾರ್
ಬೆಂಗಳೂರು: ದೇಶ ವಿಭಜನೆಯ ಕರಾಳ ನೆನಪಿನಾರ್ಥವಾಗಿ ಜಾಹೀರಾತಿನಲ್ಲಿ ಬೇಕೆಂದೇ ನೆಹರೂ ಚಿತ್ರ ಕೈಬಿಟ್ಟಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದೇವೆ.
ರಾಜ್ಯ ಸರ್ಕಾರ ನೀಡಿರುವ ಜಾಹೀರಾತಿನಲ್ಲಿ ನೆಹರು ಅವರಿಗೆ ಅವಮಾನ ಮಾಡಲಾಗಿದೆ ಎಂದು ರಾಜ್ಯದಲ್ಲಿ ಆಕ್ರೋಶ ಹೆಚ್ಚಾಗುತ್ತಿರುವ ಸಮಯದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಬಿಜೆಪಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
"Nehru was responsible for the division of the country,He did not listen to Mahatma Gandhi,Gandhiji said to dissolve the Congress after independence.However, Nehru did not dissolve the Congress. So we dropped Nehru's portrait in the advertisement."
BJP State Gen Sec, N. Ravikumar pic.twitter.com/QOuUM7NKCt— Mohammed Irshad (@Shaad_Bajpe) August 14, 2022
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಉದ್ದೇಶಪೂರ್ವಕವಾಗಿ ನೆಹರು ಫೋಟೋವನ್ನು ಪತ್ರಿಕೆಯಲ್ಲಿ ನೀಡಿದ ಸರ್ಕಾರಿ ಜಾಹೀರಾತಿನಲ್ಲಿ ಕೈ ಬಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೌದು ನಾವು ಉದ್ದೇಶಪೂರ್ವಕವಾಗಿಯೇ ನೆಹರೂ ಭಾವಚಿತ್ರ ಕೈ ಬಿಟ್ಟಿದ್ದೇವೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಗೆ ಇಷ್ಟು ಬೇಗ ನೆಹರು ಮುಖ ಮರೆಯಿತೇ ಅಥವಾ ಇದು ಜಾಣ ಕುರುಡೋ?: ಬಿಜೆಪಿ ತಿರುಗೇಟು
'ಸರ್ಕಾರದ ಜಾಹೀರಾತಿನಲ್ಲಿ ಉದ್ದೇಶಪೂರ್ವಕವಾಗಿಯೇ ನೆಹರೂ ಭಾವಚಿತ್ರ ಕೈಬಿಟ್ಟಿದ್ದೇವೆ. ನೆಹರೂ ದೇಶ ವಿಭಜನೆಗೆ ಕಾರಣರಾದವರು, ಮಹಾತ್ಮ ಗಾಂಧಿಯವರ ಮಾತನ್ನೇ ನೆಹರು ಕೇಳಲಿಲ್ಲ. ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ವಿಸರ್ಜಿಸಿ ಅಂತ ಗಾಂಧೀಜಿ ಹೇಳಿದ್ದರು. ಆದರೆ, ನೆಹರು ಕಾಂಗ್ರೆಸ್ ವಿಸರ್ಜಿಸಲಿಲ್ಲ. ಹಾಗಾಗಿ ನಾವು ಜಾಹೀರಾತಿನಲ್ಲಿ ನೆಹರೂ ಭಾವಚಿತ್ರ ಕೈಬಿಟ್ಟಿದ್ದೇವೆ. ದೇಶ ವಿಭಜನೆಯ ಕರಾಳ ನೆನಪು ಅಂತ ಆಚರಣೆ ಮಾಡುತ್ತಿದ್ದೇವೆ. ಗಾಂಧೀಜಿಯವರ ಮಾತನ್ನು ನೆಹರು ಕೇಳಲಿಲ್ಲ, ಮಹಾತ್ಮ ಗಾಂಧೀಜಿಯವರ ಮಾತನ್ನು ಕೇಳದೆ, ದೇಶ ವಿಭಜನೆಗೆ ಕಾರಣವಾಗಿರುವ ನೆಹರೂರವರ ಫೋಟೋವನ್ನು ನಾವು ಹಾಕುವುದಿಲ್ಲ ಎಂದು ಬಿಜೆಪಿ ಸರ್ಕಾರದ ಕ್ರಮಕ್ಕೆ ಸಮರ್ಥನೆ ನೀಡಿದ್ದಾರೆ.