'ಕೆಂಗಲ್ ಹನುಮಂತಯ್ಯ ವಿಧಾನಸೌಧ ನಿರ್ಮಿಸಿದರು, ನಿದ್ದೆಯಲ್ಲಿದ್ದ ಬೆಂಗಳೂರನ್ನು ಎಸ್ ಎಂ ಕೃಷ್ಣ ಸಿಲಿಕಾನ್ ವ್ಯಾಲಿಯಾಗಿಸಿದರು'

ನಾಡಪ್ರಭು ಕೆಂಪೇಗೌಡರು ಬೆಂಗಳೂರಿಗೆ  ಐಡೆಂಟಿಟಿ ನೀಡಿದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು, ಕೆಂಪೇಗೌಡರ ನಿಸ್ವಾರ್ಥ ಸೇವೆಯನ್ನು ಅನುಸರಿಸುವ ಕಾಲ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೆಂಪೇಗೌಡ ಜಯಂತಿಯಲ್ಲಿ ಡಿಕೆ ಶಿವಕುಮಾರ್
ಕೆಂಪೇಗೌಡ ಜಯಂತಿಯಲ್ಲಿ ಡಿಕೆ ಶಿವಕುಮಾರ್

ಹಿರಿಯೂರು: ನಾಡಪ್ರಭು ಕೆಂಪೇಗೌಡರು ಬೆಂಗಳೂರಿಗೆ  ಐಡೆಂಟಿಟಿ ನೀಡಿದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು, ಕೆಂಪೇಗೌಡರ ನಿಸ್ವಾರ್ಥ ಸೇವೆಯನ್ನು ಅನುಸರಿಸುವ ಕಾಲ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನಾಡ ಪ್ರಭು ಕೆಂಪೇಗೌಡ ಜಯಂತೋತ್ಸವ ಮತ್ತು ತಾಲೂಕು ಒಕ್ಕಲಿಗರ ಜಾಗೃತಿ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ನಗರವು ವಿಶ್ವ ದರ್ಜೆಗೆ ಏರಲು ಅವರ ಭವಿಷ್ಯದ ದೃಷ್ಟಿಕೋನವೇ ಕಾರಣ, 

ಕೆಂಪೇಗೌಡರು ಬೆಂಗಳೂರು ನಾಡನ್ನು ಕಟ್ಟಿದ್ದಾರೆ. ಎಲ್ಲಾ ಸಮುದಾಯದ ಜನರಿಗೆ ಜಾಗ ಮಾಡಿಕೊಟ್ಟಿದ್ದಾರೆ. ಇಂತಹ ಹಿನ್ನಲೆ ಹೊಂದಿರುವ ಮಹನಿಯರ ಇತಿಹಾಸವನ್ನು ತಿದ್ದಲು ಬಿಜೆಪಿ ಸರಕಾರ ಪ್ರಯತ್ನ ಮಾಡಿತು. ಕುವೆಂಪು ಅವರ ವಿಶ್ವಮಾನದ ತತ್ವಕ್ಕೂ ಸರಕಾರ ಕೈಯಾಕಿದೆ. ಆದರೆ ಯಾರು ಇತಿಹಾಸ ತಿದ್ದಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕರ್ನಾಟಕದ ಅಭಿವೃದ್ಧಿಯಲ್ಲಿ ಒಕ್ಕಲಿಗರ ಕೊಡುಗೆಯನ್ನು ಶ್ಲಾಘಿಸಿದ ಅವರು, ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ವಿಧಾನಸೌಧ ನಿರ್ಮಿಸಿದರು, ನಿದ್ದೆಯಲ್ಲಿದ್ದ ಬೆಂಗಳೂರನ್ನು ಆಧುನಿಕ ನಗರವನ್ನಾಗಿ ಪರಿವರ್ತಿಸಿ ಅದನ್ನು ತಂತ್ರಜ್ಞಾನದ ಕೇಂದ್ರ ಮತ್ತು ಭಾರತದ ಸಿಲಿಕಾನ್ ವ್ಯಾಲಿಯನ್ನಾಗಿ ಮಾಡುವಲ್ಲಿ ಮಾಜಿ ಸಿಎಂ ಎಸ್‌ಎಂ ಕೃಷ್ಣಕೊಡುಗೆ ಅಪಾರ ಎಂದರು.

ಈ ಹಿಂದೆ ವಿಶ್ವ ನಾಯಕರು ಮತ್ತು ಪ್ರವಾಸಿಗರು ಮೊದಲು ನವದೆಹಲಿಗೆ ಬರುತ್ತಿದ್ದರು. ಆದರೆ ಎಸ್‌ಎಂ ಕೃಷ್ಣ ಅವರ ಅಭಿವೃದ್ಧಿ ನಂತರ ವಿದೇಶಿ ಗಣ್ಯರು ಬೆಂಗಳೂರಿಗೆ ಬರಲು ಪ್ರಾರಂಭಿಸಿದರು ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೇಳಿಕೆಯನ್ನು ಶಿವಕುಮಾರ್ ಸ್ಮರಿಸಿದರು.

ರಾಜ್ಯವನ್ನು ಮುನ್ನಡೆಸಲು ಭವಿಷ್ಯದ ನಾಯಕರನ್ನು ಬೆಳೆಸುವಲ್ಲಿ ಒಕ್ಕಲಿಗರು ಒಂದಾಗಬೇಕು ಎಂದು ಅವರು ಕರೆ ನೀಡಿದರು. ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರೊಂದಿಗೆ ಸರಿಯಾದ ವೇದಿಕೆಯಲ್ಲಿ ವಿಚಾರವನ್ನು ಪ್ರಸ್ತಾಪಿಸಿ, ಅದನ್ನು ಸರಿಪಡಿಸುತ್ತೇವೆ ಎಂದು ಹೇಳಿದರು. "ನನ್ನ ಕಷ್ಟದ ಸಮಯದಲ್ಲಿ, ನೀವು ನನ್ನೊಂದಿಗೆ ನಿಂತಿದ್ದೀರಿ ಮತ್ತು ಭವಿಷ್ಯದಲ್ಲಿ ಸಹ ನನ್ನೊಂದಿಗೆ ನಿಲ್ಲುವಿರಿ ಎಂದು ನಾನು ನಿರೀಕ್ಷಿಸುತ್ತೇನೆ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com