ಹಿಂದೂ ಮತಗಳ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ: 2023ರ ಚುನಾವಣೆಗೆ ಮುನ್ನ ದೇವಸ್ಥಾನ, ಮಠಗಳಿಗೆ ಭೇಟಿ!

2023 ಚುನಾವಣೆಯಲ್ಲಿ ಹಿಂದೂ ಮತಗಳ ಮೇಲೆ ಕಣ್ಣಿಟ್ಟಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮಠ ಮತ್ತು ದೇವಸ್ಥಾನಗಳಿಗೆ ನಿರಂತರ ಭೇಟಿ ನೀಡುತ್ತಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: 2023 ಚುನಾವಣೆಯಲ್ಲಿ ಹಿಂದೂ ಮತಗಳ ಮೇಲೆ ಕಣ್ಣಿಟ್ಟಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮಠ ಮತ್ತು ದೇವಸ್ಥಾನಗಳಿಗೆ ನಿರಂತರ ಭೇಟಿ ನೀಡುತ್ತಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ಮಡಿಕೇರಿ, ಚಿಕ್ಕಮಗಳೂರು, ಬಾದಾಮಿಯ ದೇವಸ್ಥಾನಗಳು ಮತ್ತು ರಂಭಾಪುರಿ ಮಠ ಹಾಗೂ ಇತರ ಮಠಗಳಿಗೆ ಭೇಟಿ ನೀಡಿದ್ದಾರೆ.

ಬಹುಸಂಖ್ಯಾತ ಹಿಂದೂ ಸಮುದಾಯದ ಬೆಂಬಲದಿಂದ ಹೆಚ್ಚಾಗಿ ಚುನಾವಣೆಗಳನ್ನು ಗೆಲ್ಲುವ ಬಿಜೆಪಿಗೆ, ಸಿದ್ದರಾಮಯ್ಯನವರ ದೇವಸ್ಥಾನಗಳು ಮತ್ತು ಮಠಗಳ ಭೇಟಿ ಆತಂಕಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಅವರು ಇತ್ತೀಚೆಗೆ ದೇವಸ್ಥಾನಗಳಿಗೆ ಹೆಚ್ಚು ಭೇಟಿ ನೀಡುತ್ತಿರುವುದು ನಿಜ. ಅವುಗಳಲ್ಲಿ ಹಲವು ಲಿಂಗಾಯತ-ವೀರಶೈವ ದೇವಾಲಯಗಳಾಗಿವೆ. ರಂಭಾಪುರಿ ಸ್ವಾಮೀಜಿ ಮತ್ತು ಲಿಂಗಾಯತ ಪ್ರಮುಖ ದೇವಸ್ಥಾನವಾದ ಕೊಡ್ಲಿಪೇಟೆ ದೇವಸ್ಥಾನಕ್ಕೂ ಭೇಟಿ ನೀಡಿದ್ದರು. ಇದು ಕಾಂಗ್ರೆಸ್‌ನಿಂದ ದೂರ ಹೋಗಿದ್ದಾರೆ ಎಂದು ಭಾವಿಸಲಾದ ಲಿಂಗಾಯತ ಮತದಾರರನ್ನು ಮರಳಿ ಗೆಲ್ಲಿಸುವ ಪ್ರಯತ್ನ ಎಂದು ಬಿಜೆಪಿ ಮಾಜಿ ಎಂಎಲ್ ಸಿ .ಗೋ ಮಧುಸೂದನ್ ತಿಳಿಸಿದ್ದಾರೆ.

ತಿರುಪತಿ, ಚಾಮುಂಡಿ ಬೆಟ್ಟ, ಮಲೈಮಹದೇಸ್ವರ ಬೆಟ್ಟ ಹಾಗೂ ನನ್ನ ಹಳ್ಳಿಯ ದೇವಸ್ಥಾನಗಳಿಗೆ ಹೋಗಿದ್ದೇನೆ, ಆದರೆ ಎಲ್ಲಾ ಕಡೆ ಇರುವುದು ಒಬ್ಬನೇ ದೇವರು  ಎಂದು ನಂಬಿದ್ದೇನೆ ಎಂದು ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಚುನಾವಣೆಗೂ ಮುನ್ನ ನಾಮಪತ್ರ ಸಲ್ಲಿಸಿದಾಗಲೆಲ್ಲ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. 2018ರಲ್ಲಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿದ್ದರು.  2006ರಲ್ಲಿ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿ ವಿರುದ್ಧ 258 ಮತಗಳ ಅಂತರದಿಂದ ಗೆದ್ದಿದ್ದರು.

ತಮ್ಮ ಹುಟ್ಟುಹಬ್ಬದ ಸಂಭ್ರಮದಿಂದ ಹಿಡಿದು ಕಳೆದ ನಾಲ್ಕು ವಾರಗಳಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಮಠಗಳಿಗೆ ಭೇಟಿ ನೀಡಿದ್ದು, ನಾವು ಈಗ ನೋಡುತ್ತಿರುವುದು ಹೊಸ ಸಿದ್ದರಾಮಯ್ಯ ಎಂದು ರಾಜಕೀಯ ವಿಶ್ಲೇಷಕ ಬಿಎಸ್ ಮೂರ್ತಿ ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ಅವಧಿಗೆ ಹೋಲಿಸಿದರೆ, ಸಿದ್ದರಾಮಯ್ಯನವರು ಲಿಂಗಾಯತ ಮಠಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡುತ್ತಿರುವುದು ಹೆಚ್ಚಾಗಿದೆ.

ಲಿಂಗಾಯತ ಮತದಾರರನ್ನು ಸೆಲೆಯಲು ಸಿದ್ದರಾಮಯ್ಯನವರು ಮುಂದಾಗಿರುವುದು ಬಿಜೆಪಿಯನ್ನು ಕೆರಳಿಸಿದೆ. ತನಗೆ ಹಿನ್ನಡೆ ಉಂಟಾಗಬಹುದೆಂಬ ಆತಂಕದಲ್ಲಿ ಬಿಜೆಪಿ ಕೋಳಿ ರಾಜಕೀಯ ಆರಂಭಿಸಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಕೂಡ 2014 ರಿಂದ ದೇವಸ್ಥಾನ ಭೇಟಿಯನ್ನು ಹೆಚ್ಚಿಸುವ ಮೂಲಕ ಮೃದು ಹಿಂದುತ್ವವನ್ನು ಮೆರೆದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ.  ದಿನೇಶ್ ಗುಂಡೂರಾವ್, ಡಾ ಜಿ ಪರಮೇಶ್ವರ ಮತ್ತು ಆರ್ ವಿ ದೇಶಪಾಂಡೆ ಅವರಿಗಿಂತ ಹೆಚ್ಚು ಬಾರಿ  ದೇವಾಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com