ನಾನಾಗಲೀ, ರಮೇಶ್ ಜಾರಕಿಹೊಳಿಯಾಗಲೀ ಬಿಜೆಪಿ ತೊರೆಯುತ್ತಿಲ್ಲ: ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ
ಬಿಜೆಪಿ ತೊರೆಯುವ ಊಹಾಪೋಹಗಳನ್ನು ತಳ್ಳಿಹಾಕಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ನಾನಾಗಲೀ ನನ್ನ ಸಹೋದರ ರಮೇಶ್ ಜಾರಕಿಹೊಳಿಯಾಗಲೀ ಬಿಜೆಪಿ ಪಕ್ಷವನ್ನು ತೊರೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Published: 02nd December 2022 11:39 AM | Last Updated: 02nd December 2022 01:30 PM | A+A A-

ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ: ಬಿಜೆಪಿ ತೊರೆಯುವ ಊಹಾಪೋಹಗಳನ್ನು ತಳ್ಳಿಹಾಕಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ನಾನಾಗಲೀ ನನ್ನ ಸಹೋದರ ರಮೇಶ್ ಜಾರಕಿಹೊಳಿಯಾಗಲೀ ಬಿಜೆಪಿ ಪಕ್ಷವನ್ನು ತೊರೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗೋಕಾಕ ಬಳಿ ಗುರುವಾರ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅರಭಾವಿ ಮತ್ತು ಗೋಕಾಕದಿಂದ ನಾನು ಮತ್ತು ರಮೇಶ್ ಜಾರಕಿಹೊಳಿ ಸ್ಪರ್ಧಿಸಲಿದ್ದೇವೆಂದು ಹೇಳಿದರು.
2023ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಇಬ್ಬರೂ ಸ್ಪರ್ಧಿಸುತ್ತೇವೆ. ನಮ್ಮ ಪ್ರತಿಸ್ಪರ್ಧಿಗಳು ಕಳೆದ ಕೆಲವು ತಿಂಗಳಿಂದ ನಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ರಮೇಶ್ ಗೋಕಾಕದಿಂದ ಸ್ಪರ್ಧಿಸಲಿದ್ದು, ನಾನು ಅರಭಾವಿಯಿಂದ ಕಣದಲ್ಲಿರುತ್ತೇನೆ ಎಂದು ತಿಳಿಸಿದರು.
2018ರ ಚುನಾವಣೆಗೂ ಮುನ್ನ ನಾನು ಅರಭಾವಿಯಿಂದ ಸುಲಭದಿಂದ ಗೆಲ್ಲುತ್ತೇನೆ ಎಂದು ಹೇಳಿದ್ದೆ. ಆದರೆ ಇಂತಹ ಹೇಳಿಕೆ ನೀಡಲು ನಾನು ದೇವರೇ ಎಂದು ಹಲವರು ಪ್ರಶ್ನಿಸಿದ್ದಾರೆ. ನಾನು ದೇವರಲ್ಲ, ದೇವರ ಮಗ ಎಂದು ಅವರಿಗೆ ಹೇಳಿದ್ದೆ. 2023ರಲ್ಲೂ ನಾನೇ ಗೆಲ್ಲುತ್ತೇನೆಂದು ಈಗಲೂ ಹೇಳುತ್ತಿದ್ದೇನೆಂದು ಹೇಳಿದ್ದಾರೆ.