ತಮ್ಮದೇ ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಶ್ರೀರಾಮುಲು ಪ್ರತಿಭಟಿಸುವ ಸ್ಥಿತಿ ಒದಗಿದ್ದೇಕೆ?: ಕಾಂಗ್ರೆಸ್ ಪ್ರಶ್ನೆ

ಸಾರಿಗೆ ಸಚಿವ ಬಿ. ಶ್ರೀ ರಾಮುಲು ಅವರಿಗೆ ತಮ್ಮದೇ ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸ್ಥಿತಿ ಒದಗಿದ್ದೇಕೆ?' ಎಂದು ಕಾಂಗ್ರೆಸ್ ಬುಧವಾರ ಪ್ರಶ್ನೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾರಿಗೆ ಸಚಿವ ಬಿ. ಶ್ರೀ ರಾಮುಲು ಅವರಿಗೆ ತಮ್ಮದೇ ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸ್ಥಿತಿ ಒದಗಿದ್ದೇಕೆ?' ಎಂದು ಕಾಂಗ್ರೆಸ್ ಬುಧವಾರ ಪ್ರಶ್ನೆ ಮಾಡಿದೆ.

ಬಳ್ಳಾರಿಯ ವೇದಾವತಿ ನದಿ ಸೇತುವೆಯ ಎಲ್‍ಎಲ್‍ಸಿ ಕಾಲುವೆಯ ದುರಸ್ಥಿಗಾಗಿ ಒತ್ತಾಯಿಸಿ ಸಚಿವ ಶ್ರೀರಾಮುಲು ಅವರು ರಾತ್ರಿಯಡೀ ಧರಣಿ ನಡೆಸಿದ್ದರು.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

''ತಾವು ಧರಣಿ ನಡೆಸಿದ್ದು ಯಾರ ವಿರುದ್ಧ? ನಿಮ್ಮದೇ ಸರ್ಕಾರದ ವಿರುದ್ಧವೇ? ನಿಮ್ಮದೇ ಸಿಎಂ ವಿರುದ್ಧವೇ? ನಿಮ್ಮದೇ ಪ್ರಧಾನಿ ವಿರುದ್ಧವೇ? ಕ್ಯಾಬಿನೆಟ್ ಸಚಿವರು ತಮ್ಮದೇ ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸ್ಥಿತಿ ಒದಗಿದ್ದೇಕೆ? ತಮ್ಮ ಮಾತನ್ನು ಯಾರೂ ಕೇಳ್ತಿಲ್ಲವೇ? ಅಥವಾ ಇದು ಕೇವಲ ತಳ್ಳುವ ಸರ್ಕಾರವೇ?'' ಎಂದು ಕಾಂಗ್ರೆಸ್ ಟೀಕಿಸಿದೆ.

ಇದೇ ವೇಳೆ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದ ಮಾಜಿ ಸಚಿವ ಜನಾರ್ಧನ ರೆಡ್ಡಿ ಕುರಿತು ಟ್ವೀಟ್ ಮಾಡಿ, ಬಿಜೆಪಿಯವರೇ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಗೋಳಾಡುತ್ತಿರುವುದು ಯಾರ ವಿರುದ್ಧ? ಗೆಳೆಯನನ್ನು ಬಿಟ್ಟಿರುವ ಶ್ರೀರಾಮುಲು ವಿರುದ್ಧವೇ? ಋಣ ಮರೆತಿರುವ ಯಡಿಯೂರಪ್ಪ ವಿರುದ್ಧವೇ? ಆಪರೇಷನ್ ಕಮಲ ಎಂಬ ಕೊಳಕು ರಾಜಕೀಯಕ್ಕೆ ನಾಂದಿ ಹಾಡಿದವರನ್ನು ತುಳಿದು ಹಾಕಿದ ಬಿಜೆಪಿ ವಿರುದ್ಧವೇ?ಗೋಳಾಡುತ್ತಿರುವುದು ಯಾರ ವಿರುದ್ಧ? ಎಂದು ಪ್ರಶ್ನಿಸಿದೆ.

ರೆಡ್ಡಿ ಬಳಸಿ ಸಿಎಂ ಆದವರೇ ಈಗ ಆತಂತ್ರರಾಗಿದ್ದಾರೆ, ರೆಡ್ಡಿಯವರಿಗೆ ನೆರವು ನೀಡಲು ಸಾಧ್ಯವೇ ಬಸನಗೌಡ ಪಾಟೀಲ್ ಅವರೇ? ಆಪರೇಷನ್ ಮಾಡಿಸಿದವರು, ಆಪರೇಷನ್ ಮಾಡಿದವರು ಇಬ್ಬರನ್ನೂ ಬಿಜೆಪಿ ಕೆಡವಿ ಹಾಕಿದೆ. ಆಪರೇಷನ್ ಆದವರನ್ನೂ ಕೆಡವಲಿದೆ. ಬಿಜೆಪಿ ಎಂದರೆ ಬಸ್ಮಾಸುರ ಇದ್ದಂತೆ ಯಾರ ತಲೆ ಮೇಲೆ ಕೈ ಬಿದ್ದರೂ ಅವರು ಭಸ್ಮವಾಗುತ್ತಾರೆ ಎಂದು ಟೀಕಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com