ಭಾರತ್ ಜೋಡೋ ಯಾತ್ರೆ ನಂತರ ಹೊಸ ಅವತಾರದಲ್ಲಿ ರಾಹುಲ್ ಗಾಂಧಿ: ದಿಗ್ವಿಜಯ್ ಸಿಂಗ್
ರಾಹುಲ್ ಗಾಂಧಿ ಅವರು "ಭಾರತ್ ಜೋಡೋ" ಸಂಕೇತವಾಗಿದ್ದಾರೆ ಮತ್ತು ಕಾಂಗ್ರೆಸ್‌ನ ಪ್ಯಾನ್-ಇಂಡಿಯಾ ಮಾರ್ಚ್ ನಂತರ ಅವರನ್ನು ಹೊಸ ಅವತಾರದಲ್ಲಿ ನೋಡಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್....
Published: 10th October 2022 12:29 AM | Last Updated: 08th November 2022 03:29 PM | A+A A-

ದಿಗ್ವಿಜಯ್ ಸಿಂಗ್
ಬೆಂಗಳೂರು: ರಾಹುಲ್ ಗಾಂಧಿ ಅವರು "ಭಾರತ್ ಜೋಡೋ" ಸಂಕೇತವಾಗಿದ್ದಾರೆ ಮತ್ತು ಕಾಂಗ್ರೆಸ್‌ನ ಪ್ಯಾನ್-ಇಂಡಿಯಾ ಮಾರ್ಚ್ ನಂತರ ಅವರನ್ನು ಹೊಸ ಅವತಾರದಲ್ಲಿ ನೋಡಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಭಾನುವಾರ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆಯು ಕನ್ಯಾಕುಮಾರಿಯಿಂದ ಪ್ರಾರಂಭವಾದಾಗಿನಿಂದ ಅದರ ಭಾಗವಾಗಿರುವ ದಿಗ್ವಿಜಯ್ ಸಿಂಗ್ ಅವರು ಇಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಈ ಯಾತ್ರೆಯು ಖಂಡಿತವಾಗಿಯೂ ಕಾಂಗ್ರೆಸ್ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಏಕೆಂದರೆ ಹಲವು ವರ್ಷಗಳ ನಂತರ ಮೊದಲ ಬಾರಿಗೆ ಹಳೆಯ ಪಕ್ಷದ ಬಗ್ಗೆ ಚರ್ಚಿಸಲಾಗುತ್ತಿದೆ ಎಂದಿದ್ದಾರೆ.
ಇದನ್ನು ಓದಿ: ಗಾಂಧಿ ಕುಟುಂಬ ಯಾವುದೇ ಪಕ್ಷಪಾತ ಮಾಡುತ್ತಿಲ್ಲ: ಶಶಿ ತರೂರ್
ಪಕ್ಷವನ್ನು ಬಲಪಡಿಸಲು ಈ ಯಾತ್ರೆ ಸಹಕಾರಿಯಾಗಲಿದೆ. ರಾಹುಲ್ ಗಾಂಧಿ ಅವರು ಹಳ್ಳಿ ಹಳ್ಳಿಗೂ ತೆರಳಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದು, ಜನರ ಹೆಚ್ಚು ಪ್ರಭಾವಿತರಾಗಿದ್ದಾರೆ ಎಂದ ಅವರು, ಪ್ರಸ್ತುತ ಕಾಂಗ್ರೆಸ್ ಸಿದ್ಧಾಂತ ಮತ್ತು ನಾಯಕತ್ವದ ಕೊರತೆ ಎದುರಿಸುತ್ತಿದೆ. ಆದರೆ ಖಂಡಿತವಾಗಿಯೂ ನಾಯಕತ್ವ ಉಗಮವಾಗಲಿದೆ ಎಂದಿದ್ದಾರೆ.
ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ. ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು 3,500 ಕಿ.ಮೀ ನಡೆಯಲಿದ್ದಾರೆ.