
ದಲಿತರ ಮನೆಯಲ್ಲಿ ಊಟ ಮಾಡುತ್ತಿರುವ ಸಿಎಂ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ 'ದಲಿತರ ಮನೆಯ ಊಟ' ಪ್ರಹಸನದಲ್ಲಿ ಸಂಘಪರಿವಾರದ ಅಸಲಿ ಮನಸ್ಥಿತಿ ಅನಾವರಣವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ದಲಿತರ ಮನೆಯಲ್ಲಿ ಊಟದ ಹೆಸರಿನಲ್ಲಿ ಬ್ರಾಂಡೆಡ್ ನೀರು, ಟೀ ಪೌಡರ್ ತರಿಸುವ ಮೂಲಕ ಅವರಿಗೆ ಅವರಿಗೆ ಅವಮಾನಿಸಲಾಗಿದೆ. ಇದಕ್ಕಾಗಿಯೇ ಪೇ ಸಿಎಂ ದಲಿತರ ಮನೆಗೆ ಹೋದ್ರ ಎಂದು ಪ್ರಶ್ನಿಸಲಾಗಿದೆ.
ಇದನ್ನೂ ಓದಿ: ದಲಿತರ ಮನೆಯಲ್ಲಿ ಸಿಎಂ, ಬಿಜೆಪಿ ನಾಯಕರ ಉಪಹಾರ ಸೇವನೆ ಇಂದು ಮುಂದುವರಿಕೆ; ಸಿದ್ದರಾಮಯ್ಯ ಟೀಕೆ
ಮುಖ್ಯಮಂತ್ರಿಗಳ 'ದಲಿತರ ಮನೆಯ ಊಟ' ಪ್ರಹಸನದಲ್ಲಿ ಸಂಘಪರಿವಾರದ ಅಸಲಿ ಮನಸ್ಥಿತಿ ಅನಾವರಣವಾಗಿದೆ.
— Karnataka Congress (@INCKarnataka) October 13, 2022
ಬಿಜೆಪಿಗೆ ದಲಿತರ ಮನೆಯ ಊಟ ಅವಮಾನಕರವಾಗಿತ್ತು, ಈಗ ಅನುಮಾನಕರವಾಗಿದೆ.
ದಲಿತರನ್ನು ಅವಮಾನಿಸಲೆಂದೇ ದಲಿತರ ಮನೆಗೆ ಹೋದ್ರ #PayCM @BSBommai ಅವರೇ?
ದಲಿತರೆಂದರೆ ಅಷ್ಟೊಂದು ಅನುಮಾನವೇ ಬಿಜೆಪಿಗೆ?#BharatJodoYatra pic.twitter.com/2T5yeXovua
ಬಿಜೆಪಿಗೆ ದಲಿತರ ಮನೆಯ ಊಟ ಅವಮಾನಕರವಾಗಿತ್ತು, ಈಗ ಅನುಮಾನಕರವಾಗಿದೆ. ಬಿಜೆಪಿಗೆ ದಲಿತರೆಂದರೆ ಅಷ್ಟೊಂದು ಅನುಮಾನವೇ? ಎಂದು ಕೇಳಿದೆ. ದಲಿತರ ಹಿತಬೇಡ, ಅವರ ಏಳಿಗೆ, ಸಮಾನತೆ, ಅಧಿಕಾರ, ದಲಿತರ ನಿಗಮಗಳಿಗೆ ಹಣ, ಶಿಕ್ಷಣ, ರಕ್ಷಣೆ, ವಿದ್ಯಾರ್ಥಿ ವೇತನ ಬೇಡ. ದಲಿತರ ಮತ ಮಾತ್ರ ಬೇಕೆ? ಎಂದು ಮತ್ತೊಂದು ಟ್ವೀಟ್ ನಲ್ಲಿ ಪ್ರಶ್ನೆ ಮಾಡಲಾಗಿದೆ.