
ಬೆಂಗಳೂರು: ಸರ್ಕಾರದ ಕಾರ್ಯವೈಖರಿ ಕುರಿತಂತೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾಗಿರುವುದರಿಂದ ಪೇ ಸಿಎಂ ನಂತರ Saycm ಅಭಿಯಾನ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
ರಾಜ್ಯ ಬಿಜೆಪಿ ಸರ್ಕಾರಕ್ಕೆ 50 ಪ್ರಶ್ನೆಗಳನ್ನು ಕೇಳಲು 'ನಿಮ್ಮ ಹತ್ತಿರ ಇದೆಯೇ ಉತ್ತರ' ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಿದೆ. 2018ರಲ್ಲಿ ನೀಡಲಾದ ಚುನಾವಣಾ ಪ್ರಣಾಳಿಕೆಯಲ್ಲಿ ಶೇ. 90 ರಷ್ಟು ಭರವಸೆ ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಆರೋಪಿಸಿ ಅಭಿಯಾನ ಆರಂಭಿಸಲಾಗಿತ್ತು. ಆದರೆ, ಈವರೆಗೂ ಅವರು ಒಂದು ಪ್ರಶ್ನೆಗೂ ಉತ್ತರಿಸಿಲ್ಲ. ಜನರ ಪರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸದಿದ್ದರೆ Saycm ಅಭಿಯಾನ ಆರಂಭಿಸುವುದಾಗಿ ಪಕ್ಷ ತಿಳಿಸಿದೆ.
ಕಳೆದ ಮೂರು ವರ್ಷಗಳಲ್ಲಿ ಆಡಳಿತದಲ್ಲಿ ವಿಫಲತೆ ಕುರಿತು ಬಿಜೆಪಿ ಉತ್ತರಿಸಲು Saycm ಅಭಿಯಾನ ಆರಂಭಿಸಲಾಗುತ್ತಿದೆ. 2023 ವಿಧಾನಸಭಾ ಚುನಾವಣೆವರೆಗೂ ಬಿಜೆಪಿಯನ್ನು ಪ್ರಶ್ನೆ ಕೇಳುವುದನ್ನು ಮುಂದುವರೆಸಲಾಗುವುದು ಎಂದು ಹೇಳಿಕೆಯಲ್ಲಿ ಕಾಂಗ್ರೆಸ್ ಹೇಳಿದೆ.
Advertisement