ಹತಾಶೆ, ನಾಯಕರ ನಡುವಿನ ಸಮನ್ವಯದ ಕೊರತೆ: ಸತತ ಸೋಲಿನಿಂದ ಕಂಗೆಟ್ಟಿರುವ ಕರ್ನಾಟಕ ಕಾಂಗ್ರೆಸ್ ಗೆ ಖರ್ಗೆ ಬೂಸ್ಟರ್ ಡೋಸ್!

ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕರ್ನಾಟಕದಲ್ಲಿ 2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷಕ್ಕೆ ದೊಡ್ಡ ಬೂಸ್ಟರ್ ಡೋಸ್ ಆಗಲಿದೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕರ್ನಾಟಕದಲ್ಲಿ 2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷಕ್ಕೆ ದೊಡ್ಡ ಬೂಸ್ಟರ್ ಡೋಸ್ ಆಗಲಿದೆ.

ದೇಶಾದ್ಯಂತ ಕಾಂಗ್ರೆಸ್ ಅನ್ನು ಪುನರುಜ್ಜೀವನಗೊಳಿಸುವತ್ತ ಗಮನಹರಿಸುತ್ತಾರೆ, ಅದರಲ್ಲೂ ವಿಶೇಷವಾಗಿ ಹಿಂದಿ ಹೃದಯಭಾಗದಲ್ಲಿ ಮತ್ತು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳ ನಡುವೆ ಒಗ್ಗಟ್ಟನ್ನು ರೂಪಿಸುತ್ತಾರೆ, ಅವರ ತವರು ರಾಜ್ಯದಲ್ಲಿನ ವಿಧಾನಸಭಾ ಚುನಾವಣೆಯು ಅವರ ನಾಯಕತ್ವದ ಪ್ರಮುಖ ಪರೀಕ್ಷೆಯಾಗಿದೆ.

ದೇಶಾದ್ಯಂತ ಕಾಂಗ್ರೆಸ್  ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನಗೊಳಿಸುವತ್ತ ಗಮನಹರಿಸುತ್ತಾರೆ,  2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳ ನಡುವೆ ಒಗ್ಗಟ್ಟನ್ನು ರೂಪಿಸುತ್ತಾರೆ, ಅವರ ತವರು ರಾಜ್ಯದಲ್ಲಿನ ವಿಧಾನಸಭಾ ಚುನಾವಣೆಯು ಅವರ ನಾಯಕತ್ವದ ಪ್ರಮುಖ ಪರೀಕ್ಷೆಯಾಗಿದೆ.

ಖರ್ಗೆ ಅವರ ವಿನಮ್ರ ಹಿನ್ನೆಲೆ ಮತ್ತು ನಾಯಕತ್ವದ ಗುಣ ಆತ್ಮ ವಿಶ್ವಾಸ ನೀಡುತ್ತಿದೆ.  ಅಪಾರ ಅನುಭವ ಮತ್ತು ಕರ್ನಾಟಕ ರಾಜಕೀಯದ ಬಗ್ಗೆ ಆಳವಾದ  ತಿಳುವಳಿಕೆ, ಕಳಂಕವಿಲ್ಲದ ವರ್ಚಸ್ಸು, ಹಾಗೂ ರಾಜಿಯಾಗದ ಮನೋಭಾವ, ಎಲ್ಲಾ ಸಮುದಾಯಗಳ ನಾಯಕರೊಂದಿಗೆ ಉತಮತ್ ಸಂಬಂಧ ಕಾಂಗ್ರೆಸ್ ನ ಭವಿಷ್ಯ ಹೆಚ್ಚಿಸುವ ಸಾಧ್ಯತೆಯಿದೆ. ಖರ್ಗೆಯವರು ತಮ್ಮ ಆಡಳಿತ ಚಾತುರ್ಯ ಮತ್ತು ಪಕ್ಷ ನಿಷ್ಠೆಗಗೆ ಹೆಸರಾದವರು.

ಪಕ್ಷದ ಅಧ್ಯಕ್ಷರಾಗಿ, ರಾಜ್ಯದಲ್ಲಿ ಪಕ್ಷದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅವರದ್ದೇ ಮಾತು ಫೈನಲ್ ಆಗಿರುತ್ತದೆ.  ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್‌ನಿಂದ ದೂರ ಸರಿದಿರುವ ದಲಿತ ಮತದಾರರ ಬೆಂಬಲವನ್ನು ಪಕ್ಷವು ಮರಳಿ ಪಡೆಯಲು ಆಶಿಸುತ್ತಿರುವುದರಿಂದ ಅವರ ಖರ್ಗೆ ಅಧ್ಯಕ್ಷರಾಗಿರುವ ಪರಿಪೂರ್ಣ ಸಾಮಾಜಿಕ ಎಂಜಿನಿಯರಿಂಗ್‌ನಂತೆ ಕಂಡುಬರುತ್ತಾರೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಕ್ಕಲಿಗ ನಾಯಕರಾಗಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಒಬಿಸಿಗಳ ಬೆಂಬಲವನ್ನು ಹೊಂದಿದ್ದಾರೆ ಮತ್ತು ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರಚಾರ ಸಮಿತಿ ಮುಖ್ಯಸ್ಥರಾಗಿದ್ದು ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ.

ಇತ್ತೀಚಿನ ವಿಧಾನಸಭಾ ಉಪಚುನಾವಣೆ ಮತ್ತು ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಕಾಂಗ್ರೆಸ್ ಉತ್ಸುಕವಾಗಿದೆ ಮತ್ತು ರಾಜ್ಯದ ಪಕ್ಷದ ನಾಯಕರು ಬಿಜೆಪಿಯನ್ನು ಹಿಮ್ಮೆಟ್ಟಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಅವರನ್ನು ಮತ್ತಷ್ಟು ಹುರಿದುಂಬಿಸಿದೆ. ಈ ಯಾತ್ರೆಯು ಕರ್ನಾಟಕದಲ್ಲಿ ನಿಧಾನವಾಗಿ ಕಾಂಗ್ರೆಸ್ ಪರ ಅಲೆ  ಹುಟ್ಟುಹಾಕಲು ಸಹಾಯ ಮಾಡಿದೆ.

ಖರ್ಗೆಯವರ ಆಯ್ಕೆ ಚುನಾವಣೆಯವರೆಗೂ ಅದನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ರಾಜಕೀಯ ವಿಶ್ಲೇಷಕ ಎಂ.ಕೆ.ಭಾಸ್ಕರ್ ರಾವ್  ಅಭಿಪ್ರಾಯ ಪಟ್ಟಿದ್ದಾರೆ.  ದಲಿತ ನಾಯಕನನ್ನು ಸಿಎಂ ಮಾಡಬೇಕೆಂಬ ಕಾಂಗ್ರೆಸ್‌ನ ಬೇಡಿಕೆಗೂ ಇದು ಮರುಜೀವ ನೀಡುವ ಸಾಧ್ಯತೆಯಿದೆ.

ಖರ್ಗೆ ಅವರು ದೇಶದ ಅತ್ಯಂತ ಹಿರಿಯ ಕಾಂಗ್ರೆಸ್ ನಾಯಕ. ಅವರ ಜೀವನವೇ ಒಂದು ಯಶೋಗಾಥೆಯಾಗಿದ್ದು, ಅವರಿಗೆ ಯಾವುದೇ ಜವಾಬ್ದಾರಿ ನೀಡಿದ್ದರೂ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆ ಹೊರತುಪಡಿಸಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಎಲ್.ಶಂಕರ್ ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಇತರ ಕಾಂಗ್ರೆಸ್ಸೇತರ ಬಿಜೆಪಿ ವಿರೋಧಿ ನಾಯಕರೊಂದಿಗೆ ಖರ್ಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮಹಾರಾಷ್ಟ್ರದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಅವರು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಒಕ್ಕೂಟವನ್ನು ರಚಿಸುವಲ್ಲಿ ಯಶಸ್ವಿಯಾದರು.

ಖರ್ಗೆಯವರ ಉನ್ನತಿಯು ರಾಜಕೀಯದಲ್ಲಿ ಒಂದು ಮಾದರಿ ಬದಲಾವಣೆಯನ್ನು ತರುತ್ತದೆ ಎಂದು ರಾಜಕೀಯ ವಿಶ್ಲೇಷಕ ಪ್ರೊ.ಮುಜಾಫರ್ ಅಸಾದಿ ಹೇಳಿದ್ದಾರೆ.  ಪಕ್ಷವು ಆಕ್ರಮಣಕಾರಿ ಪ್ರಚಾರವನ್ನು ಪ್ರಾರಂಭಿಸಿದೆ ಮತ್ತು  ನಾಯಕರು ಲಿಂಗಾಯತರಲ್ಲಿ ಬೆಂಬಲವನ್ನು ಮರುಸಂಗ್ರಹಿಸುವ ವಿಶ್ವಾಸವನ್ನು ಹೊಂದಿದ್ದಾರೆ.

ಎಸ್ ಸಿ ಎಸ್ ಟಿ ಸಮುದಾಯಗಳಿಗೆ ಮೀಸಲಾತಿಯನ್ನು ಹೆಚ್ಚಿಸುವ ಸರ್ಕಾರದ ನಿರ್ಧಾರದಿಂದ ಹೆಚ್ಚಿನದನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೇಗೆ ಮತ್ತೆ ಸಂಘಟನಾತ್ಮಕವಾಗಿ ಹೊರ ಹೊಮ್ಮುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com