'ಬಿಜೆಪಿಯಲ್ಲಿನ ಲಿಂಗಾಯತ ನಾಯಕತ್ವ' ನಾಶಪಡಿಸಲು ಪಟ್ಟಭದ್ರ ಹಿತಾಸಕ್ತಿಗಳ ಯತ್ನ: ಸಮುದಾಯದಲ್ಲಿ ಆತಂಕ!

ಬಿಜೆಪಿಯಲ್ಲಿನ ಲಿಂಗಾಯತ ನಾಯಕತ್ವ' ನಾಶಪಡಿಸಲು ಪಟ್ಟಭದ್ರ ಹಿತಾಸಕ್ತಿಗಳು ಯತ್ನ ನಡೆಸುತ್ತಿದ್ದು, ಈ ಬೆಳವಣಿಗೆಯು ಲಿಂಗಾಯತರಲ್ಲಿ ಆತಂಕವನ್ನು ಸೃಷ್ಟಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 'ಬಿಜೆಪಿಯಲ್ಲಿನ ಲಿಂಗಾಯತ ನಾಯಕತ್ವ' ನಾಶಪಡಿಸಲು ಪಟ್ಟಭದ್ರ ಹಿತಾಸಕ್ತಿಗಳು ಯತ್ನ ನಡೆಸುತ್ತಿದ್ದು, ಈ ಬೆಳವಣಿಗೆಯು ಲಿಂಗಾಯತರಲ್ಲಿ ಆತಂಕವನ್ನು ಸೃಷ್ಟಿಸಿದೆ.

ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ಮಾತನಾಡಿ, ‘ಬಿಜೆಪಿಯೊಳಗಿನ ಲಿಂಗಾಯತ ನಾಯಕತ್ವವನ್ನು ನಾಶಪಡಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮುಂದಾಗಿವೆ. ಚುನಾವಣೆಯಲ್ಲಿ ಲಿಂಗಾಯತರಿಗೆ 68 ಸ್ಥಾನಗಳನ್ನು ನೀಡಿರುವುದೇನೋ ನಿಜ, ಆದರೆ, ಲಿಂಗಾಯತ ನಾಯಕತ್ವದ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಪ್ರಶ್ನಿಸಿದ್ದಾರೆ.

ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಮಾತನಾಡಿ, ರೇಣುಕಾ ಪ್ರಸನ್ನ ಅವರ ಮಾತಿಗೆ ನನ್ನ ಸಹಮತವಿದೆ. ಸಮುದಾಯದ ಗ್ರಹಿಕೆಯು ಬಿಜೆಪಿ ವಿರುದ್ಧವಾಗುತ್ತಿದೆ. ಆದರೆ, ಪಕ್ಷದ ನಾಯಕರು ಮಾತ್ರ ಎಲ್ಲವೂ ಸರಿಯಿದೆ ಎಂಬು ಭರವಸೆ ನೀಡುತ್ತಿದ್ದಾರೆಂದು ಹೇಳಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರನ್ನು ಹಿಂದಿನಿಂದ ಕೇಂದ್ರ ಸ್ಥಾನಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರು  ಧೈರ್ಯವಂತರಂತೆ, ಅಸಹಾಯಕರಾಗಿ ಎಲ್ಲೆಡೆ ಓಡಾಡುತ್ತಿದ್ದಾರೆ. ಆರೆಸ್ಸೆಸ್-ಬಿಜೆಪಿ ‘ಯೂಸ್ ಅಂಡ್ ಥ್ರೋ’ ತತ್ವವನ್ನು ಅನುಸರಿಸುತ್ತಿದ್ದು, ಇದೀಗ ಬಿಜೆಪಿಯಲ್ಲಿನ ಎಲ್ಲಾ ಲಿಂಗಾಯತ ನಾಯಕರು ತಮ್ಮ ಭವಿಷ್ಯದ ಬಗ್ಗೆ ಚಿಂತಿಸುವಂತಾಗಿದೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಬಿ.ಬಿ.ಶಿವಪ್ಪ ಅವರನ್ನು ಪಕ್ಷ ನಡೆಸಿಕೊಂಡ ರೀತಿಯಲ್ಲಿಯೇ ಎಲ್ಲರಿಗೂ ಪರಿಸ್ಥಿತಿ ಎದುರಾಗುವಂತೆ ಕಾಣುವಂತಿದೆ. ಮೊದಲಿನಿಂದಲೂ ಪಕ್ಷವನ್ನು ಕಟ್ಟಿದ ಜನರಿಗೆ ಈ ರೀತಿ ನಡೆಸಿಕೊಂಡರೆ, ಇನ್ನು ಸಾಮಾನ್ಯ ನಾಯಕರ ಕತೆ ಏನಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಈ ನಡುವೆ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ಗಳು ಬಿಜೆಪಿಯೊಳಗಿನ “ಲಿಂಗಾಯತ ನಾಯಕತ್ವ”ವನ್ನು ತಟಸ್ಥಗೊಳಿಸುವ ಹಾಗೂ “ಬ್ರಾಹ್ಮಣ ನಾಯಕತ್ವ” ಕುರಿತು ಮಾತನಾಡುತ್ತಿರುವುದು ಕಂಡು ಬರುತ್ತಿದೆ.

ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಎಂಎಲ್‌ಸಿ ಗೋ ಮಧುಸೂಧನ್ ಮಾತನಾಡಿ, ಲಿಂಗಾಯತರು ದೊಡ್ಡ ಸಮುದಾಯವಾಗಿರುವುದರಿಂದ ಅದನ್ನು ಗುರುತಿಸಿದ ಬಿಜೆಪಿ ಚುನಾವಣೆಯಲ್ಲಿ 68 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಹೆಚ್ಚು ಜನ ಗೆದ್ದರೆ ಸಂಪುಟದಲ್ಲಿ ಹೆಚ್ಚು ಪ್ರಾತಿನಿಧ್ಯ ಸಿಗುವ ಸಾಧ್ಯತೆ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕುರುಬ ಅಥವಾ ಒಕ್ಕಲಿಗ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಒಕ್ಕಲಿಗ ಸಿಎಂ ಆಗಬಹುದು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಲಿಂಗಾಯತರೊಬ್ಬರು ಮತ್ತೆ ಸಿಎಂ ಆಗುತ್ತಾರೆ. ಅದು ಉನ್ನತ ಮಟ್ಟದ ನಾಯಕತ್ವವಾಗಿದೆ ಎಂದು ಹೇಳಿದ್ದಾರೆ.

ವೀರಶೈವ ಮಹಾಸಭಾ ಮತ್ತು ಇತರ ಲಿಂಗಾಯತ ಗುಂಪಿನ ನಾಯಕರು ಮಾತನಾಡಿ, ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಆದರೆ, ಅವರಿಗೆ ಮುಕ್ತ ಹಸ್ತವನ್ನು ನೀಡಿಲ್ಲ. ಆರ್'ಎಸ್ಎಸ್ ನಾಯಕರು ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com