ರಾಜ್ಯದಲ್ಲಿ ಚುನಾವಣಾ ಜ್ವರ: ಮತದಾರರ ಸೆಳೆಯಲು ರಾಜಕೀಯ ಮುಖಂಡರಿಂದ ಧಾರ್ಮಿಕ ಪ್ರವಾಸ ಆಯೋಜನೆ!

ರಾಜ್ಯದಲ್ಲಿ ಚುನಾವಣಾ ಜ್ವರ ಶುರುವಾಗಿದ್ದು, ಮತದಾರರ ಸೆಳೆಯರು ರಾಜಕೀಯ ಮುಖಂಡರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಪ್ರಯತ್ನದಲ್ಲಿ ತೀರ್ಥಯಾತ್ರೆಗಳ ಆಯೋಜನೆ ಕೂಡ ಒಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಜ್ವರ ಶುರುವಾಗಿದ್ದು, ಮತದಾರರ ಸೆಳೆಯರು ರಾಜಕೀಯ ಮುಖಂಡರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಪ್ರಯತ್ನದಲ್ಲಿ ತೀರ್ಥಯಾತ್ರೆಗಳ ಆಯೋಜನೆ ಕೂಡ ಒಂದಾಗಿದೆ.

ಜನವರಿ ತಿಂಗಳಿನಲ್ಲಿ ತಮಿಳುನಾಡಿನ     ಮೇಲ್ಮರುವತ್ತೂರಿನ ಪರಾಶಕ್ತಿ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬರುತ್ತದೆ. ಹೀಗಾಗಿ ಇದೇ ಸಮಯವನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿರುವ ರಾಜಕೀಯ ಮುಖಂಡರು ತಮಿಳು ಜನಸಂಖ್ಯೆ ಹೆಚ್ಚಿರುವ ಕ್ಷೇತ್ರಗಳಿಗೆ ಬಸ್‌ಗಳನ್ನು ಬುಕ್ ಮಾಡಿ, ದೇವಸ್ಥಾನಕ್ಕೆ ಜನರಿಗೆ ಕಳುಹಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ವಾರದ ಹಿಂದೆ ಕೆಆರ್ ಪುರಂ ವಿಧಾನಸಭಾ ಕ್ಷೇತ್ರದ ಎಚ್ ಎಎಲ್ ವಾರ್ಡ್ ನಿಂದ ಆರು ಬಸ್ ಗಳನ್ನು ಕಳುಹಿಸಲಾಗಿದ್ದು, ವಾಹನಗಳಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ಪೋಸ್ಟರ್ ಗಳು ಹಾಕಿರುವುದು ಕಂಡು ಬಂದಿತ್ತು.

ಶಾಸಕರನ್ನು ಮರೆಯಬಾರದು ಹಾಗೂ ಅವರ ಸಂಬಂಧಿಕರಿಗೆ ಮತ ಹಾಕುವಂತೆ ಭಕ್ತರಿಗೆ ಬೈರತಿ ಬಸವರಾಜ್ ಅವರ ಬೆಂಬಲಿಗರು ಮನವಿ ಮಾಡಿಕೊಂಡಿದ್ದಾರೆ.

ಈ ಇದರ ಜೊತೆಗೆ ಡಿ.31ರಂದು 250ಕ್ಕೂ ಹೆಚ್ಚು ಜನರನ್ನು ವಿಮಾನದ ಮೂಲಕ ಶಿರಡಿಗೆ ಕರೆದೊಯ್ಯಲಾಯಿತು ಎಂದು ಭೈರತಿ ಬಸವರಾಜ್ ಅವರ ಬೆಂಬಲಿಗರು ತಿಳಿಸಿದ್ದಾರೆ.

ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲೂ ಬೈರತಿ ಸುರೇಶ್ ಬೆಂಬಲಿಗರು ಇದೇ ರೀತಿಯ ಪ್ರವಾಸಗಳನ್ನು ಹಮ್ಮಿಕೊಂಡಿದ್ದರು.

ಚಿಕ್ಕಪೇಟೆ ಭಾಗದ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ನಲ್ಲಿ ಮಾಜಿ ಕಾರ್ಪೊರೇಟರ್ ಧನರಾಜ್ ಅವರು ಮೇಲ್ಮರುವತ್ತೂರಿಗೆ ಪ್ರವಾಸ ಹಮ್ಮಿಕೊಂಡಿದ್ದರು. ಈ ಎಲ್ಲಾ ವ್ಯವಸ್ಥೆಗಳನ್ನು ಶಾಸಕ ಉದಯ್ ಗರುಡಾಚಾರ್ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ತಮಿಳು ಮತದಾರರೇ ನಿರ್ಣಾಯಕವಾಗಿರುವ ಶಾಂತಿನಗರದಲ್ಲಿ ಶಾಸಕ ಎನ್.ಎ.ಹ್ಯಾರೀಸ್ ಅವರಿಂದ ಓಂ ಶಕ್ತಿ ಭಕ್ತರಿಗಾಗಿ ಪ್ರವಾಸ ಏರ್ಪಡಿಸಲಾಗಿತ್ತು. "ನಮ್ಮ ಶಾಸಕ ಮುಸ್ಲಿಂ ಆಗಿದ್ದರೂ, ಅವರು ಭಕ್ತರು ಧಾರ್ಮಿಕ ಸ್ಥಳಕ್ಕೆ ಹೋಗುವಂತೆ ನೋಡಿಕೊಂಡರು" ಎಂದು ಅವರ ಬೆಂಬಲಿಗ ಬಾದರ್ ಖಾನ್ ಹೇಳಿದ್ದಾರೆ.

ಮಾಜಿ ಮೇಯರ್ ಜಿ ಪದ್ಮಾವತಿ ಅವರು ಕಳೆದ ಎರಡು ವಾರಗಳಿಂದ 14 ಬಸ್‌ಗಳಲ್ಲಿ ರಾಜಾಜಿನಗರದಿಂದ ಓಂ ಶಕ್ತಿ ದೇವಸ್ಥಾನಕ್ಕೆ ಭಕ್ತರನ್ನು ಕಳುಹಿಸಿದ್ದಾರೆ. ಇಂತಹ ಪ್ರವಾಸಗಳು ವಾರ್ಷಿಕ ಕಾರ್ಯಕ್ರಮವಾಗಿದ್ದರೂ, ಇದು ಚುನಾವಣಾ ಸಮಯವಾಗಿರುವುದರಿಂದ ಮತದಾರರ ಸೆಳೆಯಲು ಹೆಚ್ಚೆಚ್ಚು ಜನರನ್ನು ದೇವಸ್ಥಾನಗಳಿಗೆ ಉಚಿತವಾಗಿ ಕಳುಹಿಸಿಕೊಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com