ವಂಚಕ ಅದಾನಿ ಕಂಪನಿಯಲ್ಲಿ ಸರ್ಕಾರಿ ಸ್ವಾಮ್ಯದ LIC ಹಣ ಹೂಡಿಕೆಗೆ ಒತ್ತಡ ಹೇರಿದವರು ಯಾರು?

ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ರಿಸರ್ಚ್‌ನ ವರದಿಯ ಬಳಿಕ ಅದಾನಿ ಸಮೂಹಕ್ಕೆ ಸೇರಿದ ಕಂಪನಿಗಳ ಷೇರುಗಳು ಒಂದೇ ಸಮನೆ ಕುಸಿತ ಕಾಣುತ್ತಿದ್ದು,...
ಗೌತಮ್ ಅದಾನಿ
ಗೌತಮ್ ಅದಾನಿ

ಬೆಂಗಳೂರು: ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ರಿಸರ್ಚ್‌ನ ವರದಿಯ ಬಳಿಕ ಅದಾನಿ ಸಮೂಹಕ್ಕೆ ಸೇರಿದ ಕಂಪನಿಗಳ ಷೇರುಗಳು ಒಂದೇ ಸಮನೆ ಕುಸಿತ ಕಾಣುತ್ತಿದ್ದು, ಈ ಕಂಪನಿಗಳಲ್ಲಿ ಹೂಡಿಕೆ ಮಾಡಿದವರೂ ಇದೀಗ ಭಾರೀ ನಷ್ಟ ಅನುಭವಿಸುತ್ತಿದ್ದಾರೆ.

ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವೂ (ಎಲ್‌ಐಸಿ)ಅದಾನಿ ಕಂಪನಿಯಲ್ಲಿ ಹೂಡಿಕೆ ಮಾಡಿದ್ದು, ಭಾರೀ ನಷ್ಟ ಅನುಭವಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್, ವಂಚನೆಯ ಆರೋಪಕ್ಕೆ ಸಿಲುಕಿರುವ ಅದಾನಿ ಸಮೂಹದಿಂದ LICಯ ಸಾವಿರಾರು ಕೋಟಿ ಹಣ ಗುಳುಂ ಆಗಿದೆ ಎಂದು ಆರೋಪಿಸಿದೆ.

ಮಧ್ಯಮ ವರ್ಗದ ಶ್ರಮದ ದುಡಿಮೆಯ ಹಣವನ್ನು ವಂಚಕ ಅದಾನಿ ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಸರ್ಕಾರಿ ಸ್ವಾಮ್ಯದ LIC ಮೇಲೆ ಒತ್ತಡ ಹೇರಿದವರು ಯಾರು? ಎಂದು ಪ್ರಶ್ನಿಸಿದೆ. ಅಲ್ಲದೆ ಜನಸಾಮಾನ್ಯರ ಹಣಕ್ಕೆ ಈ ಸರ್ಕಾರದಲ್ಲಿ ರಕ್ಷಣೆ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com