'ತ್ರಿವೇಣಿ ಸಂಗಮ'ದಲ್ಲಿ ತ್ರಿಕೋನ ಹೋರಾಟ: 29 ವರ್ಷಗಳ ನಂತರ ಟಿ. ನರಸೀಪುರ ಕಸಿಯಲು ಬಿಜೆಪಿ ನಾಗಲೋಟ!

ತ್ರಿವೇಣಿ ಸಂಗಮದಿಂದ ಜನಪ್ರಿಯವಾಗಿರುವ ಟಿ. ನರಸೀಪುರದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ ಜೆಡಿಎಸ್‌ನಿಂದ ಕ್ಷೇತ್ರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, 29 ವರ್ಷಗಳ ನಂತರ ಈ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಮತ್ತೆ ಅರಳಲು ಬಿಜೆಪಿ ಬಯಸಿದೆ.
ಮಹಾದೇವಪ್ಪ, ಅಶ್ವಿನ್ ಮತ್ತು ಡಾ.ರೇವಣ್ಣ
ಮಹಾದೇವಪ್ಪ, ಅಶ್ವಿನ್ ಮತ್ತು ಡಾ.ರೇವಣ್ಣ

ಮೈಸೂರು: ಕಾವೇರಿ, ಕಪಿಲಾ, ಸ್ಪಟಿಕ ನದಿಗಳ ಸಂಗಮ ಕ್ಷೇತ್ರ ತಿರುಮಕೂಡಲು ನರಸೀಪುರ. ಜೊತೆಗೆ ಐತಿಹಾಸಿಕ ತಲಕಾಡು, ಸೋಮನಾಥಪುರದಂತಹ ಸ್ಥಳಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿರುವ ಈ ತಾಲ್ಲೂಕು, ವರುಣಾ ಮತ್ತು ಟಿ.ನರಸೀಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿಹೋಗಿದೆ.

ತ್ರಿವೇಣಿ ಸಂಗಮದಿಂದ ಜನಪ್ರಿಯವಾಗಿರುವ ಟಿ. ನರಸೀಪುರದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ ಜೆಡಿಎಸ್‌ನಿಂದ ಕ್ಷೇತ್ರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, 29 ವರ್ಷಗಳ ನಂತರ ಈ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಮತ್ತೆ ಅರಳಲು ಬಿಜೆಪಿ ಬಯಸಿದೆ.

ಸಿದ್ದರಾಮಯ್ಯ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಮಹದೇವಪ್ಪ ಅವರು ಸಚಿವರಾಗಿ ಕೈಗೆತ್ತಿಕೊಂಡ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ಮತ ಕೇಳುತ್ತಿದ್ದಾರೆ. ಕಾವೇರಿಗೆ ಅಡ್ಡಲಾಗಿ ನಾಲ್ಕು ಸೇತುವೆಗಳು ಮತ್ತು ನದಿಯುದ್ದಕ್ಕೂ ತಡೆಗೋಡೆ ನಿರ್ಮಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಕೊನೆ ಕ್ಷಣದ ಹೊಂದಾಣಿಕೆಯಿಂದ  ಮಹಾದೇವಪ್ಪ 28,000 ಮತಗಳ ಅಂತರದಿಂದ ಸೋಲನುಭವಿಸಿದ್ದರು.  ಲಿಂಗಾಯತ -ವೀರಶೈವರಿಗೆ ಸ್ಥಾನಮಾನದ ಬಗ್ಗೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಲಿಂಗಾಯತರು ಸಿಟ್ಟಿಗೆದ್ದ ಕಾರಣ ಮಹಾದೇವಪ್ಪನವರ ಸೋಲಿಗೂ ಕಾರಣವಾಯಿತು ಎನ್ನಲಾಗಿದೆ.

ಆಗ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಅಶ್ವಿನ್‌ಕುಮಾರ್ ಅವರನ್ನು ಜೆಡಿಎಸ್ ಆಯ್ಕೆ ಮಾಡಿ ಭರ್ಜರಿ ಗೆಲುವು ಸಾಧಿಸಿತು. ಈ ಬಾರಿಯೂ ಅಶ್ವಿನ್  ಜೆಡಿಎಸ್ ನಿಂದ ಕಣಕ್ಕಿಳಿದಿದ್ದು,ಈ ಬಾರಿಯೀ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಬನ್ನೂರು ಹೋಬಳಿಯಲ್ಲಿ ಪ್ರಾಬಲ್ಯ ಹೊಂದಿರುವ ಒಕ್ಕಲಿಗ ಸಮುದಾಯ ಹಾಗೂ ತಲಕಾಡಿನಲ್ಲಿ ನಾಯಕ ಸಮುದಾಯದ ಮತಗಳನ್ನೇ ಜೆಡಿಎಸ್ ಗುರಿಯಾಗಿಟ್ಟುಕೊಂಡಿದೆ. ದಲಿತರಿಂದಲೂ ಲಾಭವನ್ನು ನಿರೀಕ್ಷಿಸುತ್ತದೆ.  ಎಚ್‌ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರನ್ನು ಕ್ಷೇತ್ರಕ್ಕೆ ಕರೆತರುವ ಮೂಲಕ ಪಕ್ಷವು ತನ್ನ ಪ್ರಚಾರವನ್ನು ಹೆಚ್ಚಿಸಿದೆ.

ಜನರು ವೈದ್ಯ ಎಂದೇ ಕರೆಯುವ ವೈದ್ಯ ಡಾ.ರೇವಣ್ಣ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ನಿರ್ಗತಿಕರ ಸೇವೆಯಿಂದಾಗಿ ಅವರು ಇಲ್ಲಿ ಜನಪ್ರಿಯರಾಗಿದ್ದಾರೆ. ಬಹುಪಾಲು ದಲಿತರು ಮತ್ತು ಮೇಲ್ವರ್ಗದ ವಿರಶೈವರ ಮತಗಳು ಅವರನ್ನು ಗೆಲುವಿನ ವೇದಿಕೆಗೆ ಕೊಂಡೊಯ್ಯಲಿವೆ ಎಂದು ಬಿಜೆಪಿ ಭಾವಿಸಿದೆ.

ಟಿ ನರಸೀಪುರವನ್ನು ಅಭಿವೃದ್ಧಿಪಡಿಸಲು ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲು ದೂರದೃಷ್ಟಿ ಹೊಂದಿರುವುದಾಗಿ ರೇವಣ್ಣ ಹೇಳಿದ್ದಾರೆ. SC/ST ಮೀಸಲಾತಿಯನ್ನು ಹೆಚ್ಚಿಸುವ ಸರ್ಕಾರದ ನಿರ್ಧಾರದಿಂದಾಗಿ ದಲಿತ ಮತಗಳ ಸಮೃದ್ಧ ಲಾಭಾಂಶವನ್ನು ಪಕ್ಷವು ನಿರೀಕ್ಷಿಸುತ್ತಿದೆ.

ಶೇ. 40ರಷ್ಟು ಒಕ್ಕಲಿಗರ ಮತಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಕೆ.ಮಹದೇವ್‌, ಮಾಜಿ ಶಾಸಕ ಕೃಷ್ಣಪ್ಪ ಮತ್ತಿತರ ಮುಖಂಡರನ್ನು ಕಾಂಗ್ರೆಸ್‌ ಹೈವೋಲ್ಟೇಜ್‌ ಪ್ರಚಾರಕ್ಕೆ ಕರೆತಂದಿದೆ. ಮಹದೇವಪ್ಪ ಅವರನ್ನು ಸೋಲಿಸಿದ ತಪ್ಪನ್ನು ಜನರು ಅರಿತು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಜನಾದೇಶ ನೀಡಲಿದ್ದಾರೆ ಎಂದು ಹೇಳಲಾಗಿದೆ.  ಬಿಎಸ್‌ಪಿಯ ಪುಟ್ಟಸ್ವಾಮಿ ಮತ್ತು ಎಎಪಿಯ ಸಿದ್ದರಾಜು ಕೂಡ ಕಣದಲ್ಲಿದ್ದಾರೆ. ಈ ಇಬ್ಬರು ದಲಿತ ಮತಗಳ ಪಾಲನ್ನು ಪಡೆಯುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com