'ಚುನಾವಣೆಗೆ ಸ್ಪರ್ಧಿಸುವಂತೆ ತುಂಬಾ ಹಿಂಸೆ ಕೊಡ್ತಿದ್ದಾರೆ': ರಾಜಕೀಯ ನಿವೃತ್ತಿ ವಾಪಸ್ ಕುರಿತು ಸದಾನಂದಗೌಡ ಹೇಳಿಕೆ!

ಚುನಾವಣೆಗೆ ಸ್ಪರ್ಧಿಸುವಂತೆ ತುಂಬಾ ಹಿಂಸೆ ಕೊಡ್ತಿದ್ದಾರೆ ಎಂದು ಹೇಳುವ ಮೂಲಕ ರಾಜಕೀಯ ನಿವೃತ್ತಿ ವಾಪಸ್ ಕುರಿತು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಡಿವಿ ಸದಾನಂದಗೌಡ
ಡಿವಿ ಸದಾನಂದಗೌಡ

ಬೆಂಗಳೂರು: ಚುನಾವಣೆಗೆ ಸ್ಪರ್ಧಿಸುವಂತೆ ತುಂಬಾ ಹಿಂಸೆ ಕೊಡ್ತಿದ್ದಾರೆ ಎಂದು ಹೇಳುವ ಮೂಲಕ ರಾಜಕೀಯ ನಿವೃತ್ತಿ ವಾಪಸ್ ಕುರಿತು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ (Bengaluru North Lok Sabha Constituency) ಸ್ಪರ್ಧೆಗೆ ಒತ್ತಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಡಿವಿ ಸದಾನಂದ ಗೌಡ (DV Sadananda Gowda) ಅವರು, ನನಗೆ ಚುನಾವಣೆಗೆ (Election) ಸ್ಪರ್ಧಿಸುವಂತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಆದರೆ ಸ್ಪರ್ಧೆ ಮಾಡುವ ಬಗ್ಗೆ ಮುಂದೆ ನೋಡೋಣ ಏನಾಗುತ್ತೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸದಾನಂದ ಗೌಡ ಅವರು, ಬಸವರಾಜ ಬೊಮ್ಮಾಯಿ, ಅಶೋಕ್ ತಮ್ಮ ನಿವಾಸಕ್ಕೆ ಭೇಟಿ ಮಾಡಿದ ಬಗ್ಗೆ ಸ್ಪಷ್ಟನೆ ನೀಡಿದರು. ನಮ್ಮ ನಮಗೆ ಪಕ್ಷದ ಹಿರಿಯ ನಾಯಕರು ಮನೆಗೆ ಬಂದಿದ್ದು ನಿಜ. ಬೆಂಗಳೂರು ಉತ್ತರದಿಂದ ಸ್ಪರ್ಧೆ ಮಾಡಬೇಕು, ನಿಮ್ಮ ಅವಶ್ಯಕತೆ ಇದೇ ನಮಗೆ ಎಂದು ಒತ್ತಾಯಿಸಿದ್ದಾರೆ. ಅವರಷ್ಟೇ ಅಲ್ಲ, ನಮ್ಮ ಎಲ್ಲಾ ಮಾಜಿ ಮಂತ್ರಿಗಳೂ, ಶಾಸಕರೂ ಎಲ್ಲರೂ ಕೂಡ ನಿತ್ಯ ಫೋನ್ ಮಾಡಿ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿಸಿದರು.

ನನ್ನ ಮೇಲೆ ಅವರೆಲ್ಲ ಇಷ್ಟೊಂದು ಪ್ರೀತಿ ಇಟ್ಟುಕೊಂಡಿರುವುದು ಸಂತೋಷ ತಂದಿದೆ. ಆದರೆ ನನ್ನದೇ ಆದ ನಿರ್ಧಾರ, ಹೊಸಬರಿಗೆ ಅವಕಾಶ ಮಾಡಿಕೊಡಬೇಕೆಂಬ ಉದ್ದೇಶ ಇದೆ. ನಿನ್ನೆ ನಮ್ಮ‌ ಮನೆಗೆ ಅವರೆಲ್ಲ ಬಂದಿದ್ದಕ್ಕೆ ಅಭಿನಂದನೆ ಹೇಳುತ್ತೇನೆ. ಪದೇ ಪದೇ ನನಗೆ ಹಿರಿಯರು, ಮುಖಂಡರು ಉತ್ತರದಿಂದ ನಿಲ್ಲಿ ಅಂತ ಹಿಂಸೆ ಕೊಡುತ್ತಿದ್ದಾರೆ ಎಂದರು. ಆದರೆ ಮನಸ್ಸು ಬದಲಾವಣೆ ಮಾಡ್ತೀರಾ ಎಂಬ ಪ್ರಶ್ನೆಗೆ, ನೋಡೋಣ ಏನಾಗುತ್ತೆ ಎಂದಷ್ಟೇ ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com