ಬಿಜೆಪಿ ವಿರುದ್ಧ ಕಾಂಗ್ರೆಸ್‌‌ 'ಕಿವಿಯ ಮೇಲೆ ಹೂವ' ಅಭಿಯಾನ ಆರಂಭ; ಮಂಗಳೂರು-ಬೆಂಗಳೂರಿನಲ್ಲಿ ಕಾಣಿಸಿಕೊಂಡ ಕರಪತ್ರ

ರಾಜ್ಯದಲ್ಲಿ ಚುನಾವಣಾ ಪ್ರಚಾರವನ್ನು ತೀವ್ರಗೊಳಿಸಿರುವ ಕಾಂಗ್ರೆಸ್ ಶನಿವಾರ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಕು 'ಕಿವಿ ಮೇಲೆ ಹೂವ' ಎಂದಿರುವ ಪೋಸ್ಟರ್‌ಗಳನ್ನು ಅಂಟಿಸುವುದರ ಮೂಲಕ ಬಿಜೆಪಿ ವಿರುದ್ಧ 'ಪೋಸ್ಟರ್ ವಾರ್' ಆರಂಭಿಸಿದೆ.
ಬಿಜೆಪಿಯ ಗೋಡೆ ಪೇಂಟಿಂಗ್ ಮೇಲೆ ಕಾಂಗ್ರೆಸ್ ಪೋಸ್ಟರ್ ಅಭಿಯಾನ ಮೇಲೆ
ಬಿಜೆಪಿಯ ಗೋಡೆ ಪೇಂಟಿಂಗ್ ಮೇಲೆ ಕಾಂಗ್ರೆಸ್ ಪೋಸ್ಟರ್ ಅಭಿಯಾನ ಮೇಲೆ

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಪ್ರಚಾರವನ್ನು ತೀವ್ರಗೊಳಿಸಿರುವ ಕಾಂಗ್ರೆಸ್ ಶನಿವಾರ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಕು 'ಕಿವಿ ಮೇಲೆ ಹೂವ' ಎಂದಿರುವ ಪೋಸ್ಟರ್‌ಗಳನ್ನು ಅಂಟಿಸುವುದರ ಮೂಲಕ ಬಿಜೆಪಿ ವಿರುದ್ಧ 'ಪೋಸ್ಟರ್ ವಾರ್' ಆರಂಭಿಸಿದೆ.

ಆಡಳಿತಾರೂಢ ಬಿಜೆಪಿ ನೀಡಿದ ಭರವಸೆಗಳನ್ನು ಈಡೇರಿಸದ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೋರಿಸಲು ಕಾಂಗ್ರೆಸ್ ಶಾಸಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಣೆ ವೇಳೆ ವಿಧಾನಸಭೆಗೂ ಕಿವಿಯ ಮೇಲೆ ಚೆಂಡುಹೂ ಇಟ್ಟುಕೊಂಡು ಬಂದಿದ್ದರು. 

ಇದೀಗ ಬೀದಿಗಿಳಿದು 'ಕಿವಿ ಮೇಲೆ ಹೂವ' ಅಭಿಯಾನವನ್ನು ಕಾಂಗ್ರೆಸ್ ಹೆಚ್ಚಿಸಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಇಂದು ಬೆಳಗ್ಗೆ ಬೆಂಗಳೂರು ನಗರ ಮತ್ತು ಮಂಗಳೂರಿನ ಹಲವೆಡೆ ಬಿಜೆಪಿಯ ಸಾಧನೆಯನ್ನು ತೋರಿಸುವ ಬಿಜೆಪಿಯೇ ಭರವಸೆ ಎಂದಿದ್ದ ಗೋಡೆ ಪೇಂಟಿಂಗ್‌ಗಳ ಮೇಲ್ಭಾಗದಲ್ಲಿ 'ಕಿವಿ ಮೇಲೆ ಹೂವ' ಪೋಸ್ಟರ್‌ಗಳು ಕಂಡುಬರುತ್ತವೆ ಎಂದು ಹೇಳಿದೆ.

2018ರ ಪ್ರಣಾಳಿಕೆಯಲ್ಲಿ ಶೇ 90ರಷ್ಟು ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವ ಬಿಜೆಪಿ ಸರ್ಕಾರ ಹಾಗೂ 2022-2023ರ ಬಜೆಟ್‌ನಲ್ಲಿ ಶೇ 56ರಷ್ಟು ಹಣವನ್ನು ಮಾತ್ರ ಬಳಸಿಕೊಂಡಿದೆ ಎಂದು ಕರ್ನಾಟಕ ಕಾಂಗ್ರೆಸ್ ಶುಕ್ರವಾರ ವಾಗ್ದಾಳಿ ನಡೆಸಿದೆ.

ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಇತರ ಕಾಂಗ್ರೆಸ್ ಶಾಸಕರು ತಮ್ಮ ಕಿವಿಯ ಮೇಲೆ ಹೂವುಗಳನ್ನು ಇಟ್ಟುಕೊಂಡು ಬಿಜೆಪಿ ಜನರನ್ನು 'ಫೂಲ್' ಮಾಡುತ್ತಿದೆ ಎಂದು ಎತ್ತಿ ತೋರಿಸಿದ್ದರು.

'ಕಿವಿ ಮೇಲೆ ಹೂವ' ಎಂಬುದು ಬಿಜೆಪಿ ಪೋಸ್ಟರ್‌ಗಳ ಮೇಲೆ ಅಂಟಿಸಲಾದ ಕಿವಿಯ ಮೇಲೆ ಹೂವುಗಳನ್ನು ತೋರಿಸುವ ಕರಪತ್ರವಾಗಿದೆ.

ಬಿಜೆಪಿ ಪೋಸ್ಟರ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರ ಹಿಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿರುವ ಗೋಡೆ ಪೇಂಟಿಂಗ್ ಮೇಲೆ ಕಾಂಗ್ರೆಸ್ ಪೋಸ್ಟರ್ ಕಾಣಿಸಿಕೊಂಡಿದೆ.

ಬೆಂಗಳೂರಿನ ಜಯಮಹಲ್ ರಸ್ತೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕಂಕನಾಡಿಯಲ್ಲಿ ಈ ಪೋಸ್ಟರ್‌ಗಳು ಕಾಣಿಸಿಕೊಂಡಿವೆ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಬಿಜೆಪಿಯು ಕಾಂಗ್ರೆಸ್ ಅನ್ನು ಭ್ರಷ್ಟ ಪಕ್ಷವೆಂದು ಬಿಂಬಿಸಲು "ಥಟ್ ಅಂತ ಹೇಳಿ' ಎಂಬ ಟ್ವಿಟರ್ ಅಭಿಯಾನವನ್ನು ಪ್ರಾರಂಭಿಸಿತು.

ಬಿಜೆಪಿ ಸರ್ಕಾರವು ಎಲ್ಲಾ ಸಾರ್ವಜನಿಕ ಕೆಲಸಗಳಿಗೆ ಶೇ 40 ರಷ್ಟು ಕಮಿಷನ್ ಕೇಳುತ್ತದೆ ಎಂದು ಆರೋಪಿಸಿ ಕಾಂಗ್ರೆಸ್ ಈ ಹಿಂದೆ 'ಪೇಸಿಎಂ' ಅಭಿಯಾನವನ್ನು ಪ್ರಾರಂಭಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com