ಕಾಂಗ್ರೆಸ್ 'ಪರಿವಾರವಾದಿ' ಪಕ್ಷ, ಆಂತರಿಕ ಪ್ರಜಾಪ್ರಭುತ್ವ ಇಲ್ಲ: ಅಮಿತ್ ಶಾ
ಕಾಂಗ್ರೆಸ್ 'ಪರಿವಾರವಾದಿ' ಪಕ್ಷವಾಗಿದ್ದು, ಅಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
Published: 23rd February 2023 07:57 PM | Last Updated: 24th February 2023 01:44 PM | A+A A-

ಸಂವಾದದಲ್ಲಿ ಅಮಿತ್ ಶಾ
ಬೆಂಗಳೂರು: ಕಾಂಗ್ರೆಸ್ 'ಪರಿವಾರವಾದಿ' ಪಕ್ಷವಾಗಿದ್ದು, ಅಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿಂದು ಪ್ರಬುದ್ಧರ ಸಂವಾದದಲ್ಲಿ ಮಾತನಾಡಿದ ಅಮಿತ್ ಶಾ, ಎಸ್ಪಿ ಮೊದಲು ಜಾತಿ ಆಧಾರಿತ, ನಂತರ ಕೌಟುಂಬಿಕ ಪಕ್ಷವಾಯಿತು. ಸಿಪಿಐ(ಎಂ) ಆರ್ಥಿಕತೆಯ ಬಗ್ಗೆ ಸಂಕುಚಿತ ಆಲೋಚನೆಗಳನ್ನು ಹೊಂದಿತ್ತು ಮತ್ತು ಅವರು ವಿಶ್ವದ ಬಹುತೇಕ ಭಾಗಗಳಿಂದ ನಾಶವಾಗಿದ್ದಾರೆ ಎಂದರು.
ಇದನ್ನೂ ಓದಿ: ಕರ್ನಾಟಕವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ, ದಕ್ಷಿಣ ಭಾರತದಲ್ಲಿ ನಂಬರ್ ಒನ್ ಮಾಡುತ್ತೇವೆ: ಅಮಿತ್ ಶಾ
Bengaluru, Karnataka| BJP followed its ideology throughout and faced a lot of struggle to become the party it is today. Congress immersed in 'parivaarvad' but not us. We conduct elections. In BJP, speaker’s father won’t become speaker: Union Home Minister Amit Shah pic.twitter.com/nHZmHavW7U
— ANI (@ANI) February 23, 2023
ಬಿಜೆಪಿ ಉದ್ದಕ್ಕೂ ತನ್ನ ಸಿದ್ಧಾಂತವನ್ನು ಅನುಸರಿಸಿತು ಮತ್ತು ಸಾಕಷ್ಟು ಹೋರಾಟವನ್ನು ಎದುರಿಸಿ, ಇಂದು ಪ್ರಮುಖ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಪರಿವಾರದಲ್ಲಿ ಮುಳುಗಿದೆ ಆದರೆ ನಾವು ಹಾಗಲ್ಲ, ನಾವು ಚುನಾವಣೆ ನಡೆಸುತ್ತೇವೆ, ಬಿಜೆಪಿಯಲ್ಲಿ ಸ್ಪೀಕರ್ ತಂದೆ ಸ್ಪೀಕರ್ ಆಗುವುದಿಲ್ಲ ಎಂದು ಅಮಿತ್ ಶಾ ಹೇಳಿದರು.