'ಕಾಂಗ್ರೆಸ್ ಗ್ಯಾರಂಟಿ ಸೈಡ್ ಎಫೆಕ್ಟ್'; ಬೆಲೆ ಏರಿಕೆ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
ಒಂದೆಡೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ 5 ಗ್ಯಾರಂಟಿ ಯೋಜನೆ ಬಿಡುಗಡೆಯಲ್ಲಿ ತಲ್ಲೀನವಾಗಿದ್ದರೆ ಇತ್ತ ಬಿಜೆಪಿ ಸೈಲೆಂಟ್ ಆಗಿಯೇ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಪಟ್ಟಿ ಬಿಡುಗಡೆ ಮಾಡಿದೆ.
Published: 09th June 2023 02:24 PM | Last Updated: 09th June 2023 06:43 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಒಂದೆಡೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ 5 ಗ್ಯಾರಂಟಿ ಯೋಜನೆ ಬಿಡುಗಡೆಯಲ್ಲಿ ತಲ್ಲೀನವಾಗಿದ್ದರೆ ಇತ್ತ ಬಿಜೆಪಿ ಸೈಲೆಂಟ್ ಆಗಿಯೇ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಪಟ್ಟಿ ಬಿಡುಗಡೆ ಮಾಡಿದೆ.
ಹೌದು.. ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬರುತ್ತಲೇ ತಾವು ನೀಡಿದ್ದ 5 ಗ್ಯಾರಂಟಿಗಳನ್ನು (Guarantee) ಅನುಷ್ಠಾನಗೊಳಿಸುವಲ್ಲಿ ನಿರತವಾಗಿದೆ. ಆದರೆ ಇದರ ಬೆನ್ನಲ್ಲೇ ಮದ್ಯ ಹಾಗೂ ವಿದ್ಯುತ್ ದರದಲ್ಲಿ ಏರಿಕೆಯಾಗುವಂತಹ ಮಾತುಗಳು ಕೇಳಿಬಂದಿರುವ ಹಿನ್ನಲೆ ಇದೀಗ ಬಿಜೆಪಿ (BJP) ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಬೆಲೆ ಏರಿಕೆ (Price rise) ಪಟ್ಟಿ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಇವೆಲ್ಲದರ ಬೆಲೆ ಹೆಚ್ಚಾಗಲಿದ್ದು, ಕಾಂಗ್ರೆಸ್‌ನ ಗ್ಯಾರಂಟಿಗಳ ಸೈಡ್ ಎಫೆಕ್ಟ್ ಎಂದು ಕಾಲೆಳೆದಿದೆ.
ನದಿ ದಾಟಿದ ಮೇಲೆ ಅಂಬಿಗ ಯಾಕೆಂಬ ಧೋರಣೆಯಲ್ಲೀಗ @siddaramaiah ಸರ್ಕಾರವಿದೆ!
— BJP Karnataka (@BJP4Karnataka) June 9, 2023
ನಗರ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡ ಹೆಚ್ಚಿನವರು ಬಾಡಿಗೆ ಮನೆಗಳಲ್ಲಿ ವಾಸವಾಗಿರುತ್ತಾರೆ, ಅವರ ಪಾಲಿಗೆ ಉಚಿತ ವಿದ್ಯುತ್ ಗಗನ ಕುಸುಮ!
ಅಷ್ಟೇ ಅಲ್ಲ ಹೊಸದಾಗಿ ಮನೆ ಕಟ್ಟಿದವರಿಗೆ ಈ ಯೋಜನೆ ಅಸ್ಪೃಶ್ಯ! ಉಚಿತ ವಿದ್ಯುತ್ ಬಿಡಿ, ಮೊದಲಿಗೆ ವಿದ್ಯುತ್ ಪೂರೈಸಿ… pic.twitter.com/JGnrLhviLL
ಇದನ್ನೂ ಓದಿ: ಬಿಜೆಪಿಯವರು RSS ಸೇರಿದಂತೆ ತಮ್ಮ ಸಂಸ್ಥೆಗಳಿಗೆ ಸರ್ಕಾರಿ ಭೂಮಿ ನೀಡಿದ್ದಾರೆ: ಸಚಿವ ದಿನೇಶ್ ಗುಂಡೂರಾವ್ ಗಂಭೀರ ಆರೋಪ
ಇಷ್ಟಕ್ಕೂ ಬಿಜೆಪಿ ಟ್ವೀಟ್ ನಲ್ಲೇನಿದೆ?
ರಾಜ್ಯದಲ್ಲಿ ಎಟಿಎಂ ಸರ್ಕಾರದಿಂದ ವರದಿ ಬಿಡುಗಡೆಯಾಗಿದ್ದು, ಅದರಲ್ಲಿ ಇಂದಿನ ಬೆಲೆ ಏರಿಕೆಗಳೆಂದರೆ, ನೀರು- ವಿದ್ಯುತ್ ದರ ಏರಿಕೆ ಬೆನ್ನಲ್ಲೇ ನೀರಿನ ದರ ಹೆಚ್ಚಳ. ಮದ್ಯ – 10 ರಿಂದ 20 ರೂ. ಏರಿಕೆ ಎಂದು ಟ್ವೀಟ್ ಮಾಡಿದೆ. ಅಲ್ಲದೆ ಮುಂದಿನ ಬೆಲೆ ಏರಿಕೆಗಳೆಂದರೆ, ಹಾಲು – ಪ್ರತಿ ಲೀಟರ್‌ಗೆ 5 ರೂ. ಏರಿಕೆ (ಗ್ಯಾರಂಟಿ). ಬಿಎಂಟಿಸಿ – 18% ರಿಂದ 20% ರಷ್ಟು ಏರಿಕೆ (ಖಚಿತ). ಕೆಎಸ್‌ಆರ್‌ಟಿಸಿ – ಸಾಮಾನ್ಯ ಬಸ್ ಕನಿಷ್ಠ 15% ಏರಿಕೆ (ನಿಶ್ಚಿತ). ಪೆಟ್ರೋಲ್/ಡೀಸೆಲ್ – ರಾಜ್ಯದ ತೆರಿಗೆ 5% ರಷ್ಟು ಹೆಚ್ಚಳ (ಖಂಡಿತ) ಎಂದು ಟೀಕಿಸಿದೆ.
ರಾಜ್ಯದಲ್ಲಿ #ATMSarkara ದಿಂದ ವರದಿ ಬಿಡುಗಡೆ!
— BJP Karnataka (@BJP4Karnataka) June 9, 2023
ಇಂದಿನ ಬೆಲೆ ಏರಿಕೆ
ನೀರು - ವಿದ್ಯುತ್ ದರ ಏರಿಕೆ ಬೆನ್ನಲ್ಲೇ ನೀರಿನ ದರ ಹೆಚ್ಚಳ.
ಮದ್ಯ - 10 ರಿಂದ 20 ರೂಪಾಯಿ ಏರಿಕೆ.
ಮುಂದಿನ ಬೆಲೆ ಏರಿಕೆ
ಹಾಲು - ಪ್ರತೀ ಲೀಟರ್‌ಗೆ 5 ರೂ. ಏರಿಕೆ (ಗ್ಯಾರಂಟಿ)
ಬಿಎಂಟಿಸಿ - ಶೇ.18 ರಿಂದ 20 ರಷ್ಟು ಏರಿಕೆ (ಖಚಿತ)
ಕೆಎಸ್ಆರ್…
ಇದನ್ನೂ ಓದಿ: ಉತ್ತಮ ಗುಣಮಟ್ಟದ ಡಯಾಲಿಸಿಸ್ ಕೇಂದ್ರ: ಹೊಸದಾಗಿ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ
ಗ್ಯಾರಂಟಿಗಳ ಹೊರೆಯನ್ನು ಸಮತೋಲನ ಮಾಡೋ ಪ್ರಯತ್ನದಲ್ಲಿ ಬೆಲೆ ಏರಿಕೆಗಳನ್ನು ಮಾಡುತ್ತದೆ. ಇದು ಕಾಂಗ್ರೆಸ್ ಗ್ಯಾರಂಟಿಗಳ ಸೈಡ್ ಎಫೆಕ್ಟ್ ಎಂದು ಕಿಡಿಕಾರಿದೆ.