ಮೊದಲ ಪಟ್ಟಿ ಸಿದ್ದವಾದ್ರೂ ತಪ್ಪಿಲ್ಲ ಕಾಂಗ್ರೆಸ್ ಗೆ ಸಂಕಷ್ಟ: 40-45 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಮುಂದುವರಿದ ಹಗ್ಗಜಗ್ಗಾಟ!
ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ 125 ರಿಂದ 130 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಿದೆ, ಆದರೆ ಎಲ್ಲಾ 224 ಕ್ಷೇತ್ರಗಳಿಗೂ ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡುವ ಸಂಬಂಧ ಕೈ ಪಕ್ಷಕ್ಕೆ ಸಂಕಷ್ಟ ಎದುರಾಗಿದೆ.
Published: 18th March 2023 10:33 AM | Last Updated: 18th March 2023 10:33 AM | A+A A-

ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ
ಬೆಂಗಳೂರು : ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ 125 ರಿಂದ 130 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಿದೆ, ಆದರೆ ಎಲ್ಲಾ 224 ಕ್ಷೇತ್ರಗಳಿಗೂ ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡುವ ಸಂಬಂಧ ಕೈ ಪಕ್ಷಕ್ಕೆ ಸಂಕಷ್ಟ ಎದುರಾಗಿದೆ.
ಮೊದಲ 125-130 ಟಿಕೆಟ್‌ಗಳಿಗೆ ಯಾವುದೇ ತೊಂದರೆ ಇಲ್ಲ, ಏಕೆಂದರೆ ಇವರೆಲ್ಲಾ ನಮ್ಮಲ್ಲಿ ಹಾಲಿ ಶಾಸಕರು ಮತ್ತು ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಾಗಿದ್ದಾರೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಬ್ಲಾಕ್ ಮತ್ತು ಸ್ಥಳೀಯ ಜಿಲ್ಲಾ ಘಟಕಗಳಿಂದ ಅನೇಕ ಸಮೀಕ್ಷೆಗಳು ಮತ್ತು ವರದಿಗಳು ಈ ಕ್ಷೇತ್ರಗಳಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಖಚಿತಪಡಿಸಿದೆ.
ಇತ್ತೀಚಿನ ಸದಸ್ಯತ್ವ ಅಭಿಯಾನದಲ್ಲಿ ಪಕ್ಷದ ಸದಸ್ಯತ್ವ ಸಂಖ್ಯೆ ಏರಿಸಲು ಅಭ್ಯರ್ಥಿಗಳ ಸಾಮರ್ಥ್ಯವನ್ನು ಪಕ್ಷವು ಪರಿಗಣನೆಗೆ ತೆಗೆದುಕೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಉಳಿದಿರುವ ಸುಮಾರು 45 ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಮೀಕ್ಷೆಗಳು ವರದಿ ನೀಡಿವೆ. ಬ್ಲಾಕ್ ಮತ್ತು ಜಿಲ್ಲಾ ಘಟಕಗಳಿಂದ ಸಂಗ್ರಹಿಸಿದ ಅಭಿಪ್ರಾಯಗಳಲ್ಲಿ ಈ ಕ್ಷೇತ್ರಗಳು ಸವಾಲಿನ ವಿಷಯವಿಲ್ಲ ಎಂದು ತಿಳಿದು ಬಂದಿದೆ.
ಇನ್ನು ಉಳಿದ 45-49 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್‌ಗೆ ಸವಾಲು ಎದುರಾಗಿದೆ ಎಂದು ಮೂಲಗಳು ತಿಳಿಸಿವೆ.
ಏಕೆಂದರೆ ಈ ಕ್ಷೇತ್ರಗಳಿಗೆ ಸ್ಪಷ್ಟ ಅಭ್ಯರ್ಥಿಗಳಿಲ್ಲ, ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಇಲ್ಲಿ ಸತತವಾಗಿ ಸೋಲುತ್ತಿದ್ದಾರೆ. ಹೀಗಾಗಿ ಅವರಿಗೆ ನೆರವು ನೀಡಲು ಪಕ್ಷವು ಕ್ಷೇತ್ರವಾರು ಸಮೀಕ್ಷೆಗಳನ್ನು ನಡೆಸಿದ್ದು, ವೈಯಕ್ತಿಕವಾಗಿ ಕ್ಷೇತ್ರದಲ್ಲಿ ಯಾರು ಪ್ರಬಲರು ಮತ್ತು ಸ್ವೀಕಾರಾರ್ಹರು ಎಂಬುದಕ ಬಗ್ಗೆ ಚಿಂತಿಸುತ್ತಿದೆ ಎಂದು ಹೇಳಲಾಗಿದೆ.
ಅಭ್ಯರ್ಥಿಯ ಗೆಲುವಿನ ಬಗ್ಗೆ ವಿವರಗಳನ್ನು ಸಂಗ್ರಹಿಸಿದ್ದಾರೆ, ಅಂದರೆ ಆಡಳಿತಾರೂಢ ಬಿಜೆಪಿಯ ಶಕ್ತಿಯ ವಿರುದ್ಧ ಪ್ರಬಲ ಅಭ್ಯರ್ಥಿಗೆ ಅವಕಾಶ ನೀಡಬೇಕಾಗಿದೆ, ಹೀಗಾಗಿ ಅಭ್ಯರ್ಥಿಗೆ ಇರುವ ಸುಮದಾಯದ ಬೆಂಬಲ ಮತ್ತು ಆರ್ಥಿಕ ಬೆಂಬಲವನ್ನು ಹಾಗೂ ಸಾಮರ್ಥ್ಯವನ್ನು ಪರಿಗಣನೆಗೆತೆಗದುಕೊಳ್ಳಲಾಗುತ್ತಿದೆ.
ಇದರೊಂದಿಗೆ ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳ ಅಲ್ಪಸಂಖ್ಯಾತ ಸಮುದಾಯದಂತಹ ಮುಸ್ಲಿಮರು ತಮ್ಮ ಸಮುದಾಯಗಳಿಗೆ ಪ್ರಾತಿನಿಧ್ಯದ ಬಗ್ಗೆ ಈಗಾಗಲೇ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ , ಹೀಗಾಗಿ ಅದನ್ನು ಪರಿಗಣಿಸಲಾಗುವುದು.
ಇದನ್ನೂ ಓದಿ: ಮಹಿಳೆಯ ಅಳಲಿಗೆ ಸ್ಪಂದಿಸದ, ಕಾಮನ್ ಸೆನ್ಸ್ ಇಲ್ಲದ ಸಿಎಂ ಬೊಮ್ಮಾಯಿ- ಕಾಂಗ್ರೆಸ್ ಟೀಕೆ
ಮೂಲಗಳು ಹೇಳುವಂತೆ ಕೆಲವು ಪ್ರಮುಖ ನಾಯಕರು ತಮ್ಮ ಬೆಂಬಲಿಗರನ್ನು ಅಭ್ಯರ್ಥಿಗಳನ್ನಾಗಿಸಲು ಪ್ರಯತ್ನಿಸುತ್ದಿದ್ದರು, ಆದರೆ ಈ ಬಾರಿ ಸಮೀಕ್ಷೆಗಳು ಹಿನ್ನೆಲೆಯಲ್ಲಿ ಈ ಬಾರಿ ಆಯ್ಕೆ ಹೆಚ್ಚು ವಸ್ತುನಿಷ್ಠವಾಗಿದೆ ಎಂದು ಹೇಳಲಾಗುತ್ತಿದೆ.