ಕೋವಿಡ್'ನಿಂದ ಸತ್ತವರ ಲೆಕ್ಕವಿಲ್ಲ, ಜನ ಬೈದಿದ್ದು ಮಾತ್ರ ಪ್ರಧಾನಿ ಮೋದಿ ಬಳಿ ಲೆಕ್ಕವಿದೆ: ಕಾಂಗ್ರೆಸ್

ಕೋವಿಡ್ ನಿಂತ ಸತ್ತವರ ಲೆಕ್ಕವಿಲ್ಲ, ಆತ್ಮಹತ್ಯೆ ಮಾಡಿಕೊಂಡ ರೈತರ ಲೆಕ್ಕವಿಲ್ಲ. ಆದರೆ, ಜನರು ಬೈದಿದ್ದು ಮಾತ್ರ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಳಿ ಲೆಕ್ಕವಿದೆ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಕೋವಿಡ್ ನಿಂತ ಸತ್ತವರ ಲೆಕ್ಕವಿಲ್ಲ, ಆತ್ಮಹತ್ಯೆ ಮಾಡಿಕೊಂಡ ರೈತರ ಲೆಕ್ಕವಿಲ್ಲ. ಆದರೆ, ಜನರು ಬೈದಿದ್ದು ಮಾತ್ರ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಳಿ ಲೆಕ್ಕವಿದೆ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಗಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಕೋವಿಡ್ ನಿರ್ವಹಣೆ ಕುರಿತು ಬಿಜೆಪಿ ಸರ್ಕಾರದ ವೈಫಲ್ಯಗಳ ಕುರಿತು ವಾಗ್ದಾಳಿ ನಡೆಸಿದೆ.

ನಮ್ಮ ಪ್ರಧಾನಿ ಬಳಿ ಕರ್ನಾಟಕದ ನೆರೆಯಿಂದ ಸತ್ತವರ ಲೆಕ್ಕ ಇಲ್ಲ, ಕೊರೊನಾದಿಂದ ಸತ್ತವರ ಲೆಕ್ಕ ಇಲ್ಲ, ಆಕ್ಸಿಜನ್ ಸಿಗದೆ ಸತ್ತವರ ಲೆಕ್ಕ ಇಲ್ಲ, ಆತ್ಮಹತ್ಯೆ ಮಾಡಿಕೊಂಡ ರೈತರ ಲೆಕ್ಕ ಇಲ್ಲ, ನಿರುದ್ಯೋಗದಿಂದ ಸತ್ತ ಯುವಕರ ಲೆಕ್ಕ ಇಲ್ಲ, ರಸ್ತೆ ಗುಂಡಿಗೆ ಸತ್ತವರ ಲೆಕ್ಕ ಇಲ್ಲ, ಜನ ಬೈದಿದ್ದು ಮಾತ್ರ ಲೆಕ್ಕವಿದೆ ಎಂದು ಹೇಳಿದೆ.

ಜನರ ನೋವು ಕೇಳದೆ ತನ್ನ ಸಮಸ್ಯೆಗಳನ್ನು ಹೇಳಿ ಮತ ಕೇಳುವ ಮೋದಿ ಅವರೇ, ಪ್ರಧಾನಿ ಹುದ್ದೆ ಇರುವುದು ಜನರ ಸಂಕಷ್ಟಗಳ ಬಗ್ಗೆ ಮಾತನಾಡಲು ಹಾಗೂ ಬಗೆಹರಿಸಲು ಎಂಬುದನ್ನು ಮರೆತಿದ್ದೇಕೆ? ನಮ್ಮ ನಾಯಕರಾದ ಸಿದ್ದರಾಮಯ್ಯ, ಪರಮೇಶ್ವರ್‌ರವರ ಮೇಲೆ ನಿಮ್ಮವರಿಂದ ದೈಹಿಕವಾಗಿ ದಾಳಿಯಾಗಿದೆ, ನಾವೆಂದೂ ಅದನ್ನು ದಾಳ ಮಾಡಿಕೊಂಡಿಲ್ಲ ಎಂದು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com