ಬೆಂಗಳೂರು ಆಳಲು ಜಿದ್ದಿಗೆ ಬಿದ್ದ ಕೇಸರಿ ಪಡೆಗಳು: 'ಮಿಷನ್ 20' ಗುರಿಗೆ ಮೋದಿ ರೋಡ್ ಶೋ ನೆರವಾಗುವ ವಿಶ್ವಾಸ!

ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರೋಡ್‌ಶೋ ನಗರದ ಅರ್ಧದಷ್ಟು ಭಾಗವನ್ನು ಆವರಿಸಿದ್ದು, ಬೆಂಗಳೂರಿನಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವ ಮತ್ತು ರಾಜ್ಯ ರಾಜಧಾನಿಯ 28ರ ಪೈಕಿ 20 ಸ್ಥಾನಗಳನ್ನು ಗೆಲ್ಲುವ ಗುರಿ ಮುಟ್ಟುವ ನಿರೀಕ್ಷೆಯಲ್ಲಿದೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಬೆಂಗಳೂರು: ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರೋಡ್‌ಶೋ ನಗರದ ಅರ್ಧದಷ್ಟು ಭಾಗವನ್ನು ಆವರಿಸಿದ್ದು, ಬೆಂಗಳೂರಿನಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವ ಮತ್ತು ರಾಜ್ಯ ರಾಜಧಾನಿಯ 28ರ ಪೈಕಿ 20 ಸ್ಥಾನಗಳನ್ನು ಗೆಲ್ಲುವ ಗುರಿ ಮುಟ್ಟುವ ನಿರೀಕ್ಷೆಯಲ್ಲಿದೆ.

ಈ ಬಾರಿಯ ವಿಧಾನಸಭಾ ಚುನಾವಣೆಗೆ ಬಿಜೆಪಿ ವಿಭಿನ್ನ ರೀತಿಯ ಲೆಕ್ಕಾಚಾರವನ್ನು ಹೊಂದಿದ್ದು, ಮಿಷನ್ 20 ಆರಂಭಿಸಿದೆ. ಇದಕ್ಕೆ ಮೋದಿಯವರ ರೋಡ್ ಶೋ ಸಹಾಯ ಮಾಡುತ್ತಿದೆ.

2008 ರಲ್ಲಿ, ಅತಿ ಹೆಚ್ಚು 17 ಸ್ಥಾನಗಳನ್ನು ಗೆದ್ದುಕೊಂಡಿದ್ದ ಬಿಜೆಪಿ, 2013ರಲ್ಲಿ ಕೆಲವು ಸ್ಥಾನಗಳನ್ನು ಕಳೆದುಕೊಂಡಿತ್ತು. 17 ಸ್ಥಾನಗಳಲ್ಲಿದ್ದ ಬಿಜೆಪಿ 12 ಸ್ಥಾನಗಳಲ್ಲಷ್ಟೇ ಗೆಲವು ಸಾಧಿಸಿತ್ತು. ಕಳೆದ ಚುನಾವಣೆಯಲ್ಲಿ 11 ಸ್ಥಾನಗಳಲ್ಲಿ ಮಾತ್ರವೇ ಗೆಲುವು ಸಾಧಿಸಿತ್ತು. ಆದರೆ, ಉಪ ಚುನಾವಣೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರು ತಮ್ಮ ಪಕ್ಷಗಳು ತೊರೆದು ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಈ ಸಂಖ್ಯೆ 15ಕ್ಕೆ ಏರಿಕೆಯಾಗಿತ್ತು.

ಈಗಾಗಲೇ ರಾಜ್ಯದಾದಂಯತ ಪ್ರವಾಸ ಕೈಗೊಂಡಿರುವ ಮೋದಿಯವರು ಚುನಾವಣೆಯ ಅಂತಿಮ ದಿನಗಳಲ್ಲಿ ಬೆಂಗಳೂರಿನತ್ತ ಗಮನ ಹರಿಸಿದ್ದಾರೆ. ನಿನ್ನೆಯಷ್ಟೇ ಮೋದಿಯವರು ನಡೆಸಿದ ರೋಡ್'ಶೋಗೆ ಜನರಿಂದ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ರೋಡ್ ಶೋಗೆ ಭಾರೀ ಸಂಖ್ಯೆಯಲ್ಲಿ ಜನರು ಹರಿದುಬಂದಿದ್ದರು. ಇಂದೂ ಕೂಡ ಮೋದಿಯವರು ರೋಡ್ ಶೋ ನಡೆಸುತ್ತಿದ್ದು, ಈ ಮೂಲಕ ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಪರ ಅಲೆ ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಬೆಂಗಳೂರಿನ ಕೆಲವು ಕ್ಷೇತ್ರಗಳು ಬಿಜೆಪಿ ಪರವಾಗಿದ್ದರೆ, ಇನ್ನೂ ಕೆಲವು ಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ಭದ್ರಕೋಟೆಗಳಾಗಿವೆ. ಈ ಕ್ಷೇತ್ರಗಳಲ್ಲಿ ತಟಸ್ಥ ಮತದಾರರ ಸಂಖ್ಯೆ ಹೆಚ್ಚಾಗಿದೆ. ಈ ಕ್ಷೇತ್ರಗಳಲ್ಲಿ ಮೋದಿಯವರ ರೋಡ್ ಶೋದಿಂದ ಜನರ ಮನವೊಲಿಸರುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ.

ಸಂಸದ ಮತ್ತು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವಕು ಮಾತನಾಡಿ. ನಗರದಲ್ಲಿ ಪಕ್ಷವು 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಜನರಿಂಗ ಅಭೂತಪೂರ್ವ ಪ್ರತಿಕ್ರಿಯೆ, ಪ್ರೀತಿ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

ಉಪನಗರ ರೈಲು, ಮೆಟ್ರೋ ರೈಲು ವಿಸ್ತರಣೆ ಅಥವಾ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಸ್ ನೋಡಿದರೆ, ಯಾವ ಪ್ರಧಾನಿಯೂ ಬೆಂಗಳೂರಿಗಾದಿ ಇಷ್ಟೊಂದು ಕೆಲಸ ಮಾಡಿಲ್ಲ. ಅವರ ದೂರದೃಷ್ಟಿ ಮತ್ತು ಯೋಜನೆಗಳು ಬೆಂಗಳೂರಿನಲ್ಲಿ ಕನಿಷ್ಠ 80 ಲಕ್ಷ ಜನರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರಯೋಜನವನ್ನು ನೀಡಿದೆ ಎಂದು ಹೇಳಿದ್ದಾರೆ.

ರಾಜಕೀಯ ವಿಜ್ಞಾನಿ ಪ್ರೊ.ಸಂದೀಪ್ ಶಾಸ್ತ್ರಿ ಮಾತನಾಡಿ, ಕಳೆದ 40 ವರ್ಷಗಳಲ್ಲಿನ ಬೆಳವಣಿಗೆಯನ್ನು ನೋಡಿದರೆ, ಬೆಂಗಳೂರಿನಲ್ಲಿ ಮತದಾನ ಮಾಡುವ ಮತದಾರರ ಸಂಖ್ಯೆ ಕಡಿಮೆಯಾಗಿಯೇ ಇದೆ. ಆದರೆ, ಈ ಬಾರಿಯ ಮತದಾನದ ಮಾದರಿಯನ್ನು ಗಮನಿಸಿದರೆ, ಮತದಾನ ಪ್ರಮಾಣ ಹೆಚ್ಚಾಗುವ ನಿರೀಕ್ಷೆಗಳಿವೆ. ಬೆಂಗಳೂರಿನಲ್ಲಿ ನಗರವಾಸಿಗಳ ಮತದಾರರ ಸಂಖ್ಯೆ ಮುಖ್ಯವಾಗುತ್ತದೆ. ಈ ಬಗ್ಗೆ ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com