ಚುನಾವಣಾ ಕಣದಲ್ಲಿದ್ದವರು 7 ಮಾಜಿ ಕಾರ್ಪೋರೇಟರ್ಸ್: ವಿಧಾನಸಭೆಗೆ ಆಯ್ಕೆಯಾಗಿದ್ದು ಮಾತ್ರ ಏಕಮೇವ ಸದಸ್ಯ!
ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಏಳು ಮಾಜಿ ಬಿಬಿಎಂಪಿ ಕಾರ್ಪೊರೇಟರ್‌ಗಳ ಪೈಕಿ ಒಬ್ಬರು ಮಾತ್ರ ಗೆಲುವು ಕಂಡು ವಿಧಾನಸಭೆ ಮೆಟ್ಟಿಲೇರಿದ್ದಾರೆ.
Published: 16th May 2023 11:06 AM | Last Updated: 16th May 2023 04:51 PM | A+A A-

ಸಿ.ಕೆ ರಾಮಮೂರ್ತಿ
ಬೆಂಗಳೂರು: ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಏಳು ಮಾಜಿ ಬಿಬಿಎಂಪಿ ಕಾರ್ಪೊರೇಟರ್‌ಗಳ ಪೈಕಿ ಒಬ್ಬರು ಮಾತ್ರ ಗೆಲುವು ಕಂಡು ವಿಧಾನಸಭೆ ಮೆಟ್ಟಿಲೇರಿದ್ದಾರೆ.
ಮಾಜಿ ಕಾರ್ಪೋರೇಟರ್ ಗಳಾದ ಉಮೇಶ್ ಶೆಟ್ಟಿ, ಆನಂದ್ ಕುಮಾರ್, ಶಿವಕುಮಾರ್, ಆರ್.ಚಂದ್ರು, ಕೇಶವ ಮೂರ್ತಿ, ರವೀಂದ್ರ ಅಲ್ಪ ಮತಗಳ ಅಂತರದಿಂದ ಸೋತಿದ್ದಾರೆ. ಜಯನಗರದ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರು ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ವಿರುದ್ಧ 16 ಮತಗಳಿಂದ ಪ್ರಯಾಸದ ಗೆಲುವು ಕಂಡಿದ್ದಾರೆ.
ಹಾಲಿ ಶಾಸಕ ಬಿಎನ್ ವಿಜಯ್ ಕುಮಾರ್ ನಿಧನದ ನಂತರ 2018 ರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ರಾಮಮೂರ್ತಿ ಪ್ಲಾನ್ ಮಾಡಿದ್ದರು. ಆದರೆ ಪಕ್ಷವು ಸೌಮ್ಯಾ ರೆಡ್ಡಿ ವಿರುದ್ಧ ದಿವಂಗತ ವಿಜಯ್ ಕುಮಾರ್ ಅವರ ಸಹೋದರ ಪ್ರಹ್ಲಾದ್‌ಗೆ ಟಿಕೆಟ್ ನೀಡಿತು. ಆದರೆ ಈ ಬಾರಿ ಟಿಕೆಟ್ ಸಿಕ್ಕಿದ್ದು ಕಷ್ಟಪಟ್ಟು ಮತ ಎಣಿಕೆ ವೇಳೆ 16 ಮತಗಳ ಮುನ್ನಡೆ ಸಾಧಿಸಿ ಈಗ ಜಯನಗರ ಶಾಸಕನಾಗಿದ್ದೇನೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ರಾಮಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ಆಯ್ಕೆ ಕಗ್ಗಂಟು: ಸಿಎಂ ಸ್ಥಾನಕ್ಕೆ ಡಿಕೆಶಿ ಪಟ್ಟು; ಶಿವಕುಮಾರ್ ವಾದವೇನು, 'ಬಂಡೆ'ಗಿರುವ ಆತಂಕವೇನು?
ನಾಗರಭಾವಿ ವಾರ್ಡ್ ಪ್ರತಿನಿಧಿಸಿದ್ದ ಉಮೇಶ್ ಶೆಟ್ಟಿ ವಿಜಯನಗರದಿಂದ ಎಂ.ಕೃಷ್ಣಪ್ಪ ವಿರುದ್ಧ ಸ್ಪರ್ಧಿಸಲು ತಯಾರಿ ನಡೆಸಿದ್ದರು, ಆದರೆ ಹಾಲಿ ಶಾಸಕ ಹಾಗೂ ಸಚಿವ ವಿ.ಸೋಮಣ್ಣ ಅವರು ವರುಣಾ ಮತ್ತು ಚಾಮರಾಜನಗರದಿಂದ ಸ್ಪರ್ಧಿಸಿದ್ದ ಹಿನ್ನೆಲೆಯಲ್ಲಿ ರವೀಂದ್ರ ಅವರನ್ನು ಗೋವಿಂದರಾಜನಗರಕ್ಕೆ ಕಳುಹಿಸಲಾಯಿತು. ಸೋಮಣ್ಣ ಕೂಡ ಈ ಹಿಂದೆ ಕಾರ್ಪೊರೇಟರ್ ಆಗಿದ್ದರು ಎಂಬುದು ಕುತೂಹಲದ ವಿಷಯವಾಗಿದೆ. ಉಮೇಶ್ ಶೆಟ್ಟಿ ಅವರು ಕಾಂಗ್ರೆಸ್ ನ ಪ್ರಿಯಾ ಕೃಷ್ಣ ಅವರ ವಿರುದ್ಧ 12,000 ಮತಗಳಿಂದ ಸೋಲನುಭವಿಸಿದ್ದಾರೆ.
ಅದೇ ರೀತಿ ವಿಜಯನಗರದ ಹೊಸಹಳ್ಳಿಯ ಮಾಜಿ ಕಾರ್ಪೊರೇಟರ್ ಎಚ್.ರವೀಂದ್ರ ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, 8 ಸಾವಿರಕ್ಕೂ ಅಧಿಕ ಮತಗಳಿಂದ ಸೋಲು ಕಂಡಿದ್ದಾರೆ.
ಬಿಬಿಎಂಪಿ ಆರೋಗ್ಯ ಸಮಿತಿ ಮಾಜಿ ಅಧ್ಯಕ್ಷ ಎಸ್.ಆನಂದ್ ಕುಮಾರ್ ಅವರು ಸಿ.ವಿ.ರಾಮನ್ ನಗರದಲ್ಲಿ ಬಿಜೆಪಿಯ ಎಸ್.ರಘು ವಿರುದ್ಧ 16,000 ಮತಗಳಿಂದ ಸೋತಿದ್ದಾರೆ. ಪ್ರಚಾರದ ವೇಳೆ ಆನಂದ್ ಜನ ಸಮೂಹ ಸೇರಿಸಲು ಯಶಸ್ವಿಯಾದರು ಜೊತೆಗೆ ಅನೇಕ ನಾಯಕರನ್ನು ಒಂದುಗೂಡಿಸಿದ್ದರು. ಆದರೆ, ಆನಂದಪುರಂ ಮತ್ತು ಸುಧಾಮನಗರದ ಸ್ಲಂ ಮತದಾರರನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ರಘು ಕೂಡ ಒಮ್ಮೆ ಕಾರ್ಪೋರೇಟರ್ ಆಗಿದ್ದರು.
ಇದನ್ನೂ ಓದಿ: ಕರ್ನಾಟಕ ಚುನಾವಣೆ: 34 ವರ್ಷಗಳಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಮತ ಗಳಿಕೆ; ಅತಿ ದೊಡ್ಡ ಜಯ!
ಆನಂದ್ ಕುಮಾರ್ ಅವರಂತೆ ಶಾಂತಲಾ ನಗರ ವಾರ್ಡ್‌ನಿಂದ ಬಿಬಿಎಂಪಿ ಮಾಜಿ ಸದಸ್ಯ ಶಿವಕುಮಾರ್ ಶಾಂತಿನಗರದಿಂದ ಹಾಲಿ ಶಾಸಕ ಎನ್‌ಎ ಹರೀಸ್ ವಿರುದ್ಧ ಸ್ಪರ್ಧಿಸಿ 7 ಸಾವಿರ ಮತಗಳಿಂದ ಸೋತರು.
ರಾಮಸ್ವಾಮಿ ಪಾಳ್ಯದ ಮಾಜಿ ಕಾರ್ಪೊರೇಟರ್ ಎನ್ ಚಂದ್ರು ಶಿವಾಜಿನಗರದಿಂದ ಸ್ಪರ್ಧಿಸಿದ್ದರು, ಆದರೆ ಅವರ ಅಪರಾಧ ಹಿನ್ನೆಲೆ ಉಳ್ಳ ಅವರಿಗೆ ಮತದಾರರು ಅಷ್ಟಾಗಿ ಗಮನ ಕೊಡಲಿಲ್ಲ. ರಿಜ್ವಾನ್ ಅರ್ಷದ್ ಅವರನ್ನು 20,000 ಮತಗಳಿಂದ ಸೋಲಿಸಿದರು. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಮಾಜಿ ಕಾರ್ಪೊರೇಟರ್ ಕೇಶವ ಮೂರ್ತಿ ಕೆ.ಗೋಪಾಲಯ್ಯ ವಿರುದ್ಧ ಸ್ಪರ್ಧಿಸಿ ವಿಫಲರಾಗಿದ್ದರು. ಗೋಪಾಲಯ್ಯ ಕೂಡ ಒಮ್ಮೆ ಕಾರ್ಪೋರೇಟರ್ ಆಗಿದ್ದವರು ಎಂಬುದು ಗಮನಾರ್ಹ.