ಬಿಡದಿ ಮನೆ 'ಹೊಸ ತೊಡಕು'ಗೆ ಆಯೋಗ ತಡೆ: ಹಿಂದೂ ಹಬ್ಬಗಳ ಮೇಲೆಯೇ ಕಾಮಾಲೆ ಕಣ್ಣು- ಕಾಂಗ್ರೆಸ್ ವಿರುದ್ಧ HD Kumaraswamy ಕಿಡಿ

ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ ಹೊಸ ತೊಡಕು ಕಾರ್ಯಕ್ರಮ ರದ್ದುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ದ ತೀವ್ರ ಕಿಡಿಕಾರಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಪಾರ್ಟಿ ಸಂಸ್ಕೃತಿ ಕಾಂಗ್ರೆಸ್ ನದ್ದು ಎಂದು ತಿರುಗೇಟು ನೀಡಿದ್ದಾರೆ.
ಎಚ್. ಡಿ. ಕುಮಾರಸ್ವಾಮಿ
ಎಚ್. ಡಿ. ಕುಮಾರಸ್ವಾಮಿ

ರಾಮನಗರ: ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ ಹೊಸ ತೊಡಕು ಕಾರ್ಯಕ್ರಮ ರದ್ದುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ದ ತೀವ್ರ ಕಿಡಿಕಾರಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಪಾರ್ಟಿ ಸಂಸ್ಕೃತಿ ಕಾಂಗ್ರೆಸ್ ನದ್ದು ಎಂದು ತಿರುಗೇಟು ನೀಡಿದ್ದಾರೆ.

ಎಚ್​ಡಿ ಕುಮಾರಸ್ವಾಮಿ (HD Kumaraswamy) ಅವರ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಎಚ್ ಡಿ ಕುಮಾರಸ್ವಾಮಿ, 'ಬಿಡದಿಯ ತೋಟದಲ್ಲಿ ಪಾರ್ಟಿ ಮಾಡಿಲ್ಲ. ಹಾಗೆ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಯಾವುದೇ ಔತಣ ಕೂಟ ನಡೆದಿರಲಿಲ್ಲ, ನಮ್ಮ ತೋಟದಲ್ಲಿ ಕೆಲಸ ಮಾಡುವವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂದು ಸ್ಪಷ್ಟ ಪಡಿಸಿದ್ದಾರೆ.

ಎಚ್. ಡಿ. ಕುಮಾರಸ್ವಾಮಿ
'ಕೈ' 'ಒಕ್ಕಲಿಗ ಅಸ್ತ್ರ'ಕ್ಕೆ BJP ಟಕ್ಕರ್; NDA ಅಭ್ಯರ್ಥಿಗಳಿಂದ ನಿರ್ಮಲಾನಂದ ಶ್ರೀಗಳ ಭೇಟಿ!

ನಮ್ಮ ತೋಟದ ಮನೆಯೇ ನಮಗೆ ಹೆಡ್ ಆಫೀಸ್

ಇದೇ ವೇಳೆ ಕಾಂಗ್ರೆಸ್ ನಾಯಕ JDS ಹೆಡ್ ಆಫೀಸ್ ಟೀಕೆಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, 'ನಮ್ಮ ತೋಟದ ಮನೆಯೇ ನಮಗೆ ಹೆಡ್ ಆಫೀಸ್. ಚುನಾವಣೆ ಸಂದರ್ಭದಲ್ಲಿ ನಾವು ಏನು ಮಾಡಬೇಕು, ಮಾಡಬಾರದು ಎಂಬುದು ಗೊತ್ತಿದೆ. ಪದೇ ಪದೇ ತಹಸೀಲ್ದಾರರಿಗೆ ಕರೆ ಮಾಡಿ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು.

ಮೈತ್ರಿ ಸರ್ಕಾರ ಪತನದ ಬಗ್ಗೆ ಸ್ವಾಮೀಜಿ ಏಕೆ ಮಾತನಾಡಬೇಕು..?

ಇದೇ ವೇಳೆ ಡಿಕೆ ಶಿವಕುಮಾರ್ ಅವರ ಸರ್ಕಾರ ಪತನ ಹೇಳಿಕೆಯನ್ನು ಉಲ್ಲೇಖಿಸಿದ ಕುಮಾರಸ್ವಾಮಿ, 'ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಿದ್ದ ಬಗ್ಗೆ ಆದಿಚುಂಚುನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಏಕೆ ಮಾತನಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಎಚ್. ಡಿ. ಕುಮಾರಸ್ವಾಮಿ
'ಒಕ್ಕಲಿಗರು ದಡ್ಡರಲ್ಲ, ಸ್ವಾಮೀಜಿಗಳು ಯಾರ ಪರವೂ ಅಲ್ಲ, ಪರ್ಯಾಯ ಮಠ ಸೃಷ್ಟಿಸಿದ್ದೇ HD Kumaraswamy': ಡಿಕೆ ಶಿವಕುಮಾರ್

'ರಾಜಕೀಯಕ್ಕೂ, ಧರ್ಮಕ್ಕೂ ಏನು ಸಂಬಂಧ, ಸ್ವಾಮೀಜಿಯವರನ್ನು ಏಕೆ ರಾಜಕೀಯಕ್ಕೆ ಬಳಸಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ. ಶ್ರೀಗಳನ್ನು ಭೇಟಿ ಮಾಡಿ ಅವರನ್ನು ಬಳಸಿಕೊಳ್ಳುವ ಪ್ರಯತ್ನ ಕಾಂಗ್ರೆಸ್ ಮಾಡಿದೆ, ಜಾತ್ಯತೀತ ಎಂದು ಹೇಳಿಕೊಳ್ಳುವ ಇವರು ಯಾವ ಜಾತ್ಯತೀತರು?.. ಅಧಿಕಾರದಲ್ಲಿ ಇದ್ದಾಗ ನಾನು ನಮ್ಮ ಸ್ವಾಮೀಜಿ ಅವರನ್ನು ಎಂದೂ ದುರುಪಯೋಗ ಪಡಿಸಿಕೊಳ್ಳವ ಕೆಲಸ ಮಾಡಿಲ್ಲ. ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿಲ್ಲ, ಜಾತ್ಯತೀತರು ಎಂದು ಹೇಳುವ ಕಾಂಗ್ರೆಸ್ ನವರು ನಿತ್ಯ ಜಾತಿ ಬಗ್ಗೆ ಮಾತನಾಡುತ್ತಾರೆ. ಜನರು ದಡ್ಡರಲ್ಲ. ಸ್ವಾಮೀಜಿ ಅವರನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದೂ ಸಂಸ್ಕೃತಿ ಮತ್ತು ಆಚರಣೆಗಳ ಮೇಲೆ ಕಾಂಗ್ರೆಸ್ 'ದುಷ್ಟ ಕಣ್ಣು'

ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ನಮ್ಮ ಸಂಪ್ರದಾಯ, ಸಂಸ್ಕೃತಿ ಮತ್ತು ಆಚರಣೆಗಳ ಮೇಲೆ ತನ್ನ 'ದುಷ್ಟ ಕಣ್ಣು' ಹಾಕಿದೆ ಮತ್ತು ಈ ಹಬ್ಬವನ್ನು ಭಯೋತ್ಪಾದನಾ ಕೃತ್ಯವೆಂದು ಬಿಂಬಿಸುತ್ತಿದೆ. ಹಿಂದುಗಳ ಹಬ್ಬಗಳ ಮೇಲೆ ಕಾಂಗ್ರೆಸ್ ಕಾಮಾಲೆಯ ಕಣ್ಣು ನೆಟ್ಟಿದೆ. ಜಾತಿ ಮತ್ತು ಧರ್ಮಗಳ ತುಷ್ಟೀಕರಣ ಕಾಂಗ್ರೆಸ್ ಪಕ್ಷಕ್ಕೆ ಅಂಟಿಕೊಂಡಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಎಚ್. ಡಿ. ಕುಮಾರಸ್ವಾಮಿ
ಹೊಸ ತೊಡಕು ಆಚರಣೆ, ಮದ್ಯ-ಮಾಂಸ ವಿತರಣೆ: HDK ಬಿಡದಿ ತೋಟದ ಮನೆಗೆ ಚುನಾವಣಾಧಿಕಾರಿಗಳ ಭೇಟಿ, ಪರಿಶೀಲನೆ

ಜೆಡಿಎಸ್ ಸ್ಪಷ್ಟನೆ

ಪ್ರತೀ ಹಿಂದೂಗಳ ಮನೆಯಲ್ಲಿ ನಡೆಯುವಂತೆ ಕುಮಾರಸ್ವಾಮಿ ಮನೆಯಲ್ಲಿಯೂ ಹೊಸತೊಡಕು ಆಚರಣೆ ನಡೆಯುತ್ತಿದೆ. ಅದರಲ್ಲಿ ವಿಶೇಷವೇನೂ ಇಲ್ಲ. ಹೊಸತೊಡಕು ಊಟಕ್ಕೆ ಸಂಬಂಧಿಕರು, ಸ್ನೇಹಿತರು ಹಾಗೂ ರಾಜಕೀಯ ಸಹಪಾಠಿಗಳನ್ನು ಅವರು ಆಹ್ವಾನಿಸಿದ್ದಾರೆ. ಮಾಂಸದ ಅಡುಗೆ ಈ ದಿನದ ಸಾಮಾನ್ಯ ತಿನಿಸು. ಈ ಊಟಕ್ಕೂ ಕಾಂಗ್ರೆಸ್ ಕಲ್ಲು ಹಾಕಿ ವಿಕೃತಿ ಮೆರೆದಿದೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ. ಅಲ್ಲದೆ ಮತಕ್ಕಾಗಿ ಹಣ, ಹೆಂಡ, ಸೀರೆ, ಕುಕ್ಕರ್, ಪ್ರಿಜ್ಡ್, ಕೂಪನ್ ಹಂಚುವ ಸತ್ಸಂಪ್ರದಾಯ ರೂಢಿಸಿಕೊಂಡಿರುವ ಕಾಂಗ್ರೆಸ್, ಕಾವೇರಿ ಅಮ್ಮನ ಹೆಸರಿನಲ್ಲಿ ನಡೆಸಿದ ಮೇಕೆದಾಟು ಪಾದಯಾತ್ರೆಯಲ್ಲಿ ನದಿಯಂತೆ ಹರಿಸಿದ ಮಾಂಸ, ಮದ್ಯದ ಹೊಳೆಯನ್ನು ಕಾಣದವರು ಯಾರೂ ಇಲ್ಲ. ಆದರೆ, ಆ ಪಕ್ಷದ ಕಾಮಾಲೆ ಕಣ್ಣು ಹಿಂದೂಗಳ ಹಬ್ಬಗಳ ಮೇಲೆಯೇ ಬಿದ್ದಿದೆ. ಜಾತಿ, ಧರ್ಮಗಳ ತುಷ್ಟೀಕರಣ ಜಾಡ್ಯ ಕಾಂಗ್ರೆಸ್ ಪಕ್ಷವನ್ನು ಅಂಟಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com