ಕುಟುಂಬ ರಾಜಕಾರಣದ ಕರಿನೆರಳಲ್ಲಿ ಹೊಳಪು ಕಳೆದುಕೊಂಡ 'ಕುಂದಾ'ನಗರಿ: ಹೆಬ್ಬಾಳ್ಕರ್ ಭದ್ರಕೋಟೆ ಭೇದಿಸುವರೇ ಶೆಟ್ಟರ್!

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) ಮತ್ತು ಜಗದೀಶ್ ಶೆಟ್ಟರ್ (ಬಿಜೆಪಿ) ನಡುವೆ ಮುಖಾಮುಖಿ ಸ್ಪರ್ಧೆಗೆ ವೇದಿಕೆ ಸಿದ್ಧಗೊಂಡಿದ್ದು ಎರಡೂ ಕುಟುಂಬಗಳು ಹಗ್ಗಜಗ್ಗಾಟಕ್ಕೆ ಕಡಿವಾಣ ಹಾಕಿ ಗೆಲ್ಲಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿವೆ.
ಮೃಣಾಲ್ ಹೆಬ್ಬಾಳ್ಕರ್ - ಜಗದೀಶ್ ಶೆಟ್ಟರ್
ಮೃಣಾಲ್ ಹೆಬ್ಬಾಳ್ಕರ್ - ಜಗದೀಶ್ ಶೆಟ್ಟರ್

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) ಮತ್ತು ಜಗದೀಶ್ ಶೆಟ್ಟರ್ (ಬಿಜೆಪಿ) ನಡುವೆ ಮುಖಾಮುಖಿ ಸ್ಪರ್ಧೆಗೆ ವೇದಿಕೆ ಸಿದ್ಧಗೊಂಡಿದ್ದು ಎರಡೂ ಕುಟುಂಬಗಳು ಹಗ್ಗಜಗ್ಗಾಟಕ್ಕೆ ಕಡಿವಾಣ ಹಾಕಿ ಗೆಲ್ಲಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿವೆ.

ಒಂದು ಕಾಲದಲ್ಲಿ ರಾಜ್ಯದ ರಾಜಕೀಯದ ದಿಕ್ಕನ್ನೇ ಬದಲಿಸುತ್ತಿದ್ದ ಕ್ಷೇತ್ರವಾಗಿದ್ದ ಬೆಳಗಾವಿಯು ಇತ್ತೀಚಿನ ದಿನಗಳಲ್ಲಿ ಅನಿರೀಕ್ಷಿತವಾಗಿ ಜನಬೆಂಬಲವನ್ನು ಕ್ರೋಢೀಕರಿಸುವ ಕುಟುಂಬ ರಾಜಕಾರಣದಿಂದ ತನ್ನ ಹೊಳಪು ಕಳೆದುಕೊಂಡಿದೆ. ಅಭಿವೃದ್ಧಿ, ರಾಜ್ಯ ಮತ್ತು ರಾಷ್ಟ್ರೀಯ ವ್ಯವಹಾರಗಳು, ನೀತಿಗಳು, ಮೂಲಸೌಕರ್ಯ ಇತ್ಯಾದಿಗಳಂತಹ ಪ್ರಮುಖ ವಿಷಯಗಳು ನಗಣ್ಯವಾಗಿವೆ. ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ, 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಮತ್ತು ಬಿಜೆಪಿ ಐದು ಕ್ಷೇತ್ರಗಳನ್ನು ಗೆದ್ದಿದೆ.

ಆರು ಬಾರಿ ಶಾಸಕರಾಗಿ, ಮಾಜಿ ಸಿಎಂ ಆಗಿರುವ ಜಗದೀಶ್ ಶೆಟ್ಟರ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ 31 ವರ್ಷದ ಮೃಣಾಲ್ ಹೆಬ್ಬಾಳ್ಕರ್ ಮುಖಾಮುಖಿಯಾಗಿದ್ದಾರೆ. ಇಬ್ಬರೂ ಪ್ರಬಲ ಲಿಂಗಾಯತ ಸಮುದಾಯದಿಂದ ಬಂದವರಾಗಿದ್ದಾರೆ. ಜಾತಿಯ ಹೊರತಾಗಿ ಸಿಎಂ, ವಿರೋಧ ಪಕ್ಷದನಾಯಕ ಹಾಗೂ ರಾಜ್ಯ ಬಿಜೆಪಿಯ ಮುಖ್ಯಸ್ಥರಾಗಿ ಅವರ ಅನುಭವವು ಶೆಟ್ಟರ್ ಗೆ ಹೆಚ್ಚಿನ ಬಲ ತರಲಿದೆ. ಬಿಜೆಪಿ ಶೆಟ್ಟರ್ ಅವರನ್ನು ಏಕೆ ಆಯ್ಕೆ ಮಾಡಿದೆ ಎಂದರೆ ಈ ವಿಭಾಗವು 2000 ರ ದಶಕದ ಆರಂಭದಿಂದಲೂ ಬಿಜೆಪಿಯ ಭದ್ರಕೋಟೆಯಾಗಿದೆ ಮತ್ತು ಸುರೇಶ್ ಅಂಗಡಿ ಕುಟುಂಬ ಕಳೆದ ಐದು ಚುನಾವಣೆಗಳಲ್ಲಿ ಗೆದ್ದಿದೆ. ಅಂಗಡಿಯವರ ಮಗಳು ಶ್ರದ್ಧಾ ಜಗದೀಶ್ ಶೆಟ್ಟರ ಸೊಸೆ, ಹೀಗಾಗಿ ಶೆಟ್ಟರ್ ಬಿಜೆಪಿ ಮಣೆ ಹಾಕಿದೆ.

ಬೆಳಗಾವಿಯ ಬಿಜೆಪಿಯ ಒಂದು ವರ್ಗವು ಹುಬ್ಬಳ್ಳಿಯಿಂದ ಬಂದಿರುವ "ಹೊರಗಿನ" ಶೆಟ್ಟರ್ ಅವರನ್ನು ಪಕ್ಷದಿಂದ ಕಣಕ್ಕಿಳಿಸಿದ ಬಗ್ಗೆ ಅಸಮಾಧಾನಗೊಂಡಿದೆ. ಆದರೆ, ಬೆಳಗಾವಿಯಲ್ಲಿ ಜನರು ಮತ್ತು ಪಕ್ಷದ ಮುಖಂಡರು ತಮ್ಮನ್ನು ಒಪ್ಪಿಕೊಂಡಿದ್ದಾರೆ ಮತ್ತು ಮೋದಿ ಅಂಶವು ಚುನಾವಣೆಯಲ್ಲಿ ಪ್ರಮುಖ ವಿಷಯವಾಗಲಿದೆ ಎಂದು ಶೆಟ್ಟರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಮೃಣಾಲ್ ಹೆಬ್ಬಾಳ್ಕರ್ - ಜಗದೀಶ್ ಶೆಟ್ಟರ್
ಬೆಳಗಾವಿ ಲೋಕಸಭೆ ಕ್ಷೇತ್ರ: ಮರಾಠಿ ಪಕ್ಷ MES ಸ್ಪರ್ಧೆಯಿಂದ ಮತ ವಿಭಜನೆ; ಬಿಜೆಪಿಯ ಶೆಟ್ಟರ್ ಗೆಲುವಿಗೆ ಅಡ್ಡಗಾಲು?

ಮತ್ತೊಂದೆಡೆ, ಬೆಳಗಾವಿಯ ಹಲವು ಭಾಗಗಳಲ್ಲಿ ಮೃಣಾಲ್ ಅವರ ಹೈ ವೋಲ್ಟೇಜ್ ಪ್ರಚಾರವು ಅವರ ಜನಪ್ರಿಯತೆ ಹೆಚ್ಚಲು ಸಹಾಯ ಮಾಡಿದೆ. ಮೃಣಾಲ್ ಚೊಚ್ಚಲ ಬಾರಿ ಸ್ಪರ್ಧಿಸಿರುವುದರಿಂದ ಅವರ ತಾಯಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಚಾರದ ನೇತೃತ್ವ ವಹಿಸಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ರಾಜಕೀಯ ಚಾಣಕ್ಷತನದಿಂದಾಗಿ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿ ಸಚಿವೆಯಾಗಿದ್ದಾರೆ, ತಮ್ಮ ಸಹೋದರನನ್ನು ಎಂಎಲ್ ಸಿ ಮಾಡಿದ್ದಾರೆ. ಈಗ ಮಗನನ್ನು ರಾಷ್ಟ್ರ ರಾಜಕಾರಣಕ್ಕೆ ತರುತ್ತಿದ್ದಾರೆ. ಒಂದೊಮ್ಮೆ ಈ ಚುನಾವಣೆಯಲ್ಲಿ ಮಗ ಗೆದ್ದರೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜಕೀಯ ಜೀವನ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ಸೋಲು ಅವರ ರಾಜಕೀಯ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ ಪಟ್ಟಿದ್ದಾರೆ. ಬೆಳಗಾವಿ ರಾಜಕೀಯದ ಮೇಲೆಪ್ರಬಲ ಹಿಡಿತ ಸಾಧಿಸಿರುವ ಜಾರಕಿಹೊಳಿ ಸಹೋದರರ ಪ್ರಯತ್ನವನ್ನು ಹೆಬ್ಬಾಳ್ಕರ್ ಅವರ ಗೆಲುವು ಮೊಟಕುಗೊಳಿಸಬಹುದು. ಆದರೆ ಯಾವುದಕ್ಕೂ ಜಗ್ಗದ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಗೋಕಾಕ್ ಸಹೋದರರು ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಳನ್ನುಪೂರ್ಣಗೊಳಿಸಲು ಯಾವುದೇ ರೀತಿಯ ಅತಿರೇಕಕ್ಕೆ ಹೋಗಬಹುದು ಎಂಬುದು ವಿಶ್ಲೇಷಕರ ಅಭಿಮತ.

ಶೆಟ್ಟರ್ ಮತ್ತು ಮೃಣಾಲ್ ಇಬ್ಬರೂ ಏಕವಚನದಲ್ಲಿ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಅವರ ಪಕ್ಷ ಮತ್ತು ಕಾರ್ಯಕರ್ತರು ಅಷ್ಟು ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ. ಎರಡೂ ಪಕ್ಷಗಳು ಕುಟುಂಬ ರಾಜಕಾರಣದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮುಂಚೂಣಿಯಲ್ಲಿದ್ದಾರೆಯೇ ಹೊರತು ಮೃಣಾಲ್ ಅಥವಾ ಪಕ್ಷದ ಇತರ ನಾಯಕರು ಮುಖ್ಯವಲ್ಲ.

ಮೃಣಾಲ್ ಹೆಬ್ಬಾಳ್ಕರ್ - ಜಗದೀಶ್ ಶೆಟ್ಟರ್
ಅಂದಿನ ಸಂದರ್ಭಗಳು ನನ್ನನ್ನು ಅಲ್ಪಕಾಲ ಬಿಜೆಪಿ ತ್ಯಜಿಸುವಂತೆ ಮಾಡಿತ್ತು, ಆ ಬಗ್ಗೆ ವಿಷಾದ ಇಲ್ಲ: ಜಗದೀಶ್ ಶೆಟ್ಟರ್

ಸಾಂಪ್ರದಾಯಿಕವಾಗಿ ಬಿಜೆಪಿಯ ಬೆಂಬಲಿಗರಾದ ಪ್ರಬಲ ಲಿಂಗಾಯತ ಸಮುದಾಯವು ಇಬ್ಬರು ಲಿಂಗಾಯತ ಅಭ್ಯರ್ಥಿಗಳ ನಡುವೆ ಹಂಚಿಹೋಗಿದೆ. ಬೆಳಗಾವಿಯಲ್ಲಿ 2021 ರಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ 1.17 ಲಕ್ಷ ಮತಗಳನ್ನು ಗಳಿಸಿದ ಎಂಇಎಸ್ ಅಭ್ಯರ್ಥಿ ಮಹಾದೇವ ಪಾಟೀಲ್ ಅವರನ್ನು ಕಣಕ್ಕಿಳಿಸಿದೆ, ಇದು ಬಿಜೆಪಿಯ ಮತಗಳು ಎಂಇಎಸ್‌ಗೆ ಹೋಗುವುದನ್ನು ತಡೆಯಬಹುದು. ಇಂದಿನ ವಾಸ್ತವ ಪರಿಸ್ಥಿತಿ ಗಮನಿಸಿದರೆ, ಇಬ್ಬರೂ ಅಭ್ಯರ್ಥಿಗಳು ತಲಾ 5 ಲಕ್ಷ ಮತಗಳನ್ನು ದಾಟಬೇಕು ಮತ್ತು ಅವರಲ್ಲಿ ಒಬ್ಬರು 20,000 ರಿಂದ 30,000 ಮತಗಳ ಅಂತರದಿಂದ ಗೆಲ್ಲುವ ಸಾಧ್ಯತೆಯಿದೆ ಎಂದು ರಾಜಕೀಯ ತಜ್ಞರು ಹೇಳುತ್ತಾರೆ.

ನೀವು ಚುನಾವಣೆಯಲ್ಲಿ ಗೆಲ್ಲುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್, ಇಡೀ ದೇಶವು ಪ್ರಧಾನಿ ನರೇಂದ್ರ ಮೋದಿ ಇನ್ನೂ ಒಂದು ದಶಕದ ಕಾಲ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂದು ಬಯಸುತ್ತದೆ. ಬೆಳಗಾವಿಯ ಜನರು ಅವರಿಗೆ ಮತ ಹಾಕುತ್ತಾರೆ. "ನಾನು ಹಲವಾರು ವರ್ಷಗಳಿಂದ ಮುಖ್ಯಮಂತ್ರಿಯಾಗಿ ಮತ್ತು ಬಿಜೆಪಿಯ ನಾಯಕನಾಗಿ ಬೆಳಗಾವಿ ಪ್ರದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದೇನೆ" ಎಂದು ಅವರು ಹೇಳಿದರು. ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಮಗ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರದ ಸಾಧನೆ ಮತ್ತು ಜನರ ಜೀವನವನ್ನು ಸುಧಾರಿಸುವ ಭರವಸೆಗಳು ತನಗೆ ಸೂಕ್ತ ಬೆಂಬಲ ನೀಡುತ್ತವೆ ಎಂದು ಭಾವಿಸಿದ್ದಾರೆ.ತಮ್ಮ ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಮಗ ಸಂಸದನಾಗಿ ಗೆದ್ದರೆ ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ ಎಂದು ಅವರು ಹೇಳಿದರು.

ಮೃಣಾಲ್ ಹೆಬ್ಬಾಳ್ಕರ್ - ಜಗದೀಶ್ ಶೆಟ್ಟರ್
ಹೊಸಬ V/s ಹಿರಿಯ: ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ಮೃಣಾಲ್ ಹೆಬ್ಬಾಳ್ಕರ್ ಸೆಣಸಾಟ

ಬೆಳಗಾವಿಯ ರಾಜಕೀಯ ವ್ಯವಹಾರಗಳ ಮೇಲೆ ಹಿಡಿತ ಸಾಧಿಸಲು ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ಕುಟುಂಬಗಳ ನಡುವೆ ನಡೆಯುತ್ತಿರುವ ಶೀತಲ ಸಮರದಲ್ಲಿ, ಲಕ್ಷ್ಮಿ ಅವರು ಇತ್ತೀಚೆಗೆ ತಮ್ಮ ಸಹೋದರನನ್ನು MLC ಯಾಗಿ ಆಯ್ಕೆ ಮಾಡಿದರು ಮತ್ತು ಈಗ ಮಗ ಮೃಣಾಲ್ ಅವರನ್ನು ಸಂಸದರನ್ನಾಗಿ ಮಾಡಲು ಉತ್ಸುಕರಾಗಿದ್ದಾರೆ. ಜಾರಕಿಹೊಳಿ ಸಹೋದರರು (ಇಬ್ಬರು ಬಿಜೆಪಿ ಶಾಸಕರು, ಒಬ್ಬರು ಸ್ವತಂತ್ರ ಎಂಎಲ್‌ಸಿ, ಒಬ್ಬರು ಕಾಂಗ್ರೆಸ್ ಶಾಸಕರು) ಮೃಣಾಲ್ ಸೋಲಿಸಲು ಒಟ್ಟಾಗಿ ಕೆಲಸ ಮಾಡಬಹುದು. ಬಿಜೆಪಿ ತನ್ನ ಗೆಲುವಿನ ಓಟವನ್ನು ಮುಂದುವರಿಸುವ ಮೂಲಕ ಬೆಳಗಾವಿ ಕ್ಷೇತ್ರದಲ್ಲಿ ಗಟ್ಟಿಯಾದ ಹಿಡಿತ ಸಾಧಿಸಲು ಬಯಸಿದೆ. ಇದು ಹೆಚ್ಚಾಗಿ 'ಮೋದಿ ಅಂಶ' ಮತ್ತು ಪ್ರಬಲ ಲಿಂಗಾಯತ ಸಮುದಾಯದ ಮೇಲೆ ಅವಲಂಬಿತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com