'ಮುಸ್ಲಿಮರಿಗೆ ಉಡುಗೊರೆ, ರೈತರಿಗೆ ಗಾಯದ ಮೇಲೆ ಬರೆ': ಸರ್ಕಾರದ ವಿರುದ್ಧ ಆರ್.ಅಶೋಕ್ ಕಿಡಿ

ಬರದಿಂದ ಹೈರಾಣಾಗಿರುವ ರೈತರಿಗೆ ನೆರವು ನೀಡಲು ಹಣವಿಲ್ಲ ಎಂದು ಗಾಯದ ಮೇಲೆ ಬರೆ ಎಳೆಯುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ, ವಕ್ಫ್‌ ಆಸ್ತಿಗಳಿಗೆ ಕಾಂಪೌಂಡ್‌ ಕಟ್ಟಿಸಿಕೊಡಲು 31 ಕೋಟಿ ರೂಪಾಯಿ ಉಡುಗೊರೆ ನೀಡಲು ಮುಂದಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಕಿಡಿಕಾರಿದ್ದಾರೆ.
ಆರ್.ಅಶೋಕ್
ಆರ್.ಅಶೋಕ್

ಬೆಂಗಳೂರು: ಬರದಿಂದ ಹೈರಾಣಾಗಿರುವ ರೈತರಿಗೆ ನೆರವು ನೀಡಲು ಹಣವಿಲ್ಲ ಎಂದು ಗಾಯದ ಮೇಲೆ ಬರೆ ಎಳೆಯುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ, ವಕ್ಫ್‌ ಆಸ್ತಿಗಳಿಗೆ ಕಾಂಪೌಂಡ್‌ ಕಟ್ಟಿಸಿಕೊಡಲು 31 ಕೋಟಿ ರೂಪಾಯಿ ಉಡುಗೊರೆ ನೀಡಲು ಮುಂದಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮುಸ್ಲಿಮರಿಗೆ ಉಡುಗೊರೆ, ರೈತರಿಗೆ ಗಾಯದ ಮೇಲೆ ಬರೆ. ಬರದಿಂದ ಹೈರಾಣಾಗಿರುವ ರೈತರಿಗೆ ನೆರವು ನೀಡಲು ಹಣವಿಲ್ಲ ಎಂದು ಗಾಯದ ಮೇಲೆ ಬರೆ ಎಳೆಯುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ, ವಕ್ಫ್‌ ಆಸ್ತಿಗಳಿಗೆ ಕಾಂಪೌಂಡ್‌ ಕಟ್ಟಿಸಿಕೊಡಲು 31 ಕೋಟಿ ರೂಪಾಯಿ ಉಡುಗೊರೆ ನೀಡಲು ಮುಂದಾಗಿದೆ. ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರಕ್ಕೆ ನಾಡಿಗೆ ಅನ್ನ ನೀಡುವ ರೈತರ ಹಿತರಕ್ಷಣೆಗಿಂತ ಮುಸ್ಲಿಮರ ಓಲೈಕೆ ಮಾಡಿ ತಮ್ಮ ವೋಟ್ ಬ್ಯಾಂಕ್ ರಕ್ಷಣೆ ಮಾಡಿಕೊಳ್ಳುವುದೇ ಆದ್ಯತೆಯಾಗಿದೆ.

ಕರ್ನಾಟಕದಲ್ಲಿರುವುದು ಮುಸ್ಲಿಂ ಪರ ಸರ್ಕಾರ, ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದೇ ಮುಸ್ಲಿಮರ ಮತದಿಂದ ಅಂತ ಹೇಳಿದ್ದೀರಲ್ಲ ಡಿಸಿಎಂ ಡಿಕೆ.ಶಿವಕುಮಾರ್ ಅವರೇ, ನಾಡಿನ ರೈತರು ಲೋಕಸಭೆ ಚುನಾವಣೆಯಲ್ಲಿ ತಮಗೆ ತಕ್ಕ ಪಾಠ ಕಲಿಸಲಿದ್ದಾರೆಂದು ಹೇಳಿದ್ದಾರೆ.

ಇದೇ ವೇಳೆ ದೆಹಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಹುಬ್ಬಳ್ಲಿಯ ರೈತರನ್ನು ಭೋಪಾಲ್ ನಲ್ಲಿ ಬಂಧಿಸಿದ್ದಾರೆಂದು ಹೇಳಿ, ಮಧ್ಯಪ್ರದೇಶ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಸಿದ್ದರಾಮಯ್ಯ ವಿರುದ್ಧವೂ ಅಶೋಕ್ ಅವರು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರೇ, ತಾವು ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗ  ಕಳಸಾ-ಬಂಡೂರಿ ಅನುಷ್ಠಾನಕ್ಕೆ ಕರ್ನಾಟಕದ ರೈತರು ಪ್ರತಿಭಟನೆ ಮಾಡಿದ್ದಾಗ ತಮ್ಮ ಸರ್ಕಾರ ಪೊಲೀಸರನ್ನು ಹಳ್ಳಿ ಹಳ್ಳಿಗೆ ಕಳಿಸಿ ರೈತರ ಮೇಲೆ ಲಾಠಿ ಬೀಸಿದ್ದನ್ನು ರಾಜ್ಯದ ಜನ ಮರೆತಿಲ್ಲ. ಬೆಳಗಾವಿಯಲ್ಲಿ ವಿಠಲ್ ಅರಬಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಾಗ, ಕುಡಿದು ಸತ್ತ ಎಂದು ವ್ಯಂಗ್ಯವಾಡಿದ್ದನ್ನ ಮರೆತಿಲ್ಲ. ಇತ್ತೀಚೆಗೆ ತಮ್ಮ ಮಂತ್ರಿಗಳು, ಪರಿಹಾರಕ್ಕೋಸ್ಕರ, ಸಾಲ ಮನ್ನಾ ಆಗುತ್ತದೆ ಎನ್ನುವ ಆಸೆಯಿಂದ ಬರ ಬರಲಿ ಎಂದು ಆಶಿಸುತ್ತಾರೆ ಎಂದು ಅನ್ನದಾತರನ್ನು ಅವಮಾನಿಸಿದ್ದನ್ನು ಜನ ಮರೆತಿಲ್ಲ.

ತಮ್ಮ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು "ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೇ?" ಎಂದು ನಿಂದಿಸಿದ್ದನ್ನೂ ಜನ ಮರೆತಿಲ್ಲ. ಈಗ ಚುನಾವಣೆ ಹೊಸ್ತಿಲಲ್ಲಿರುವಾಗ ದಿಢೀರನೆ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ತಮ್ಮ ನಾಟಕವನ್ನು ಕರ್ನಾಟಕದ ರೈತರು ನಂಬುತ್ತರೆಯೇ? ನಿಮ್ಮ ನಾಟಕ ಸಾಕು ಮಾಡಿ ಮೊದಲು ರೈತರಿಗೆ ಬರ ಪರಿಹಾರ ಕೊಡುವತ್ತ ಗಮನ ಹರಿಸಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com