ಕಾಶ್ಮೀರ ಭಾರತದ ಭಾಗವಾಗಿಯೇ ಉಳಿಯುತ್ತದೆ: ಫಾರೂಕ್ ಅಬ್ದುಲ್ಲಾ

ಕಾಶ್ಮೀರ ಭಾರತದ ಭಾಗವಾಗಿಯೇ ಉಳಿಯುತ್ತದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಫಾರೂಕ್ ಅಬ್ದುಲ್ಲಾ, ಸಿಎಂ ಸಿದ್ದರಾಮಯ್ಯ ಮತ್ತಿತರರು
ಫಾರೂಕ್ ಅಬ್ದುಲ್ಲಾ, ಸಿಎಂ ಸಿದ್ದರಾಮಯ್ಯ ಮತ್ತಿತರರು
Updated on

ಬೆಂಗಳೂರು: ಕಾಶ್ಮೀರ ಭಾರತದ ಭಾಗವಾಗಿಯೇ ಉಳಿಯುತ್ತದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ 'ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ-2024'ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಬ್ದುಲ್ಲಾ, ಲೋಕಸಭೆ ಚುನಾವಣೆಗೂ ಮುನ್ನ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಗ್ಗೆ ಕಳವಳ ವ್ಯಕ್ತಪಡಿಸಿದರು. ಭಾರತೀಯ ಚುನಾವಣಾ ಆಯೋಗ ಜನರಿಗೆ ನಿಜವಾದ ಚುನಾವಣೆ ಖಾತ್ರಿಪಡಿಸುತ್ತದೆ ಎಂಬ ವಿಶ್ವಾಸವಿದೆ ಎಂದರು.

ಕಾಶ್ಮೀರ ಭಾರತದ ಭಾಗವಾಗಿ ಉಳಿಯುತ್ತದೆ. ಆದರೆ, ರಾಷ್ಟ್ರದ ವೈವಿಧ್ಯತೆ ಬಲಿಷ್ಠವಾಗಲು ಅದನ್ನು ರಕ್ಷಿಸಬೇಕಾಗಿದೆ. “ಧರ್ಮವು ನಮ್ಮನ್ನು ವಿಭಜಿಸುವುದಿಲ್ಲ, ಧರ್ಮವು ನಮ್ಮನ್ನು ಒಂದುಗೂಡಿಸುತ್ತದೆ.

ಕೆಟ್ಟ ಧರ್ಮವಿಲ್ಲ. ನಾವುಗಳು ಮುಂದುವರಿಯಲು ಬಯಸಿದರೆ, ಪರಸ್ಪರರ ಜೊತೆಯಲ್ಲಿ ನಿಲ್ಲುವುದು, ಈ ರಾಷ್ಟ್ರವು ಎದುರಿಸುತ್ತಿರುವ ಸವಾಲುಗಳನ್ನು ಒಟ್ಟಾಗಿ ಎದುರಿಸುವುದು ಮತ್ತು ನಮ್ಮನ್ನು ವಿಭಜಿಸಲು ಬಯಸುವ ದುಷ್ಟರ ವಿರುದ್ಧ ಹೋರಾಡುವುದು ಒಂದೇ ಮಾರ್ಗವಾಗಿದೆ ಎಂದು ಅವರು ಹೇಳಿದರು.

ಫಾರೂಕ್ ಅಬ್ದುಲ್ಲಾ, ಸಿಎಂ ಸಿದ್ದರಾಮಯ್ಯ ಮತ್ತಿತರರು
ಸಂವಿಧಾನ ಬದಲಾಯಿಸುವ ಷಡ್ಯಂತ್ರ, ಗಟ್ಟಿಯಾಗಿ ನಿಲ್ಲದಿದ್ದರೆ ಸರ್ವಾಧಿಕಾರ: ಖರ್ಗೆ

ಸಂವಿಧಾನವು ಇಂದು ಅಪಾಯದಲ್ಲಿದೆ ಮತ್ತು ಅದು ಬಲವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ನಾವು ಹಾಗೆ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ನಾವು ಪಶ್ಚ್ಯಾತಾಪ ಪಡಬೇಕಾಗುತ್ತದೆ. ಇಂದು ವಿದ್ಯುನ್ಮಾನ ಯಂತ್ರಗಳನ್ನು ನಂಬುವಂತಿಲ್ಲ. ಚುನಾವಣಾ ಆಯೋಗ ಇದನ್ನು ಸೂಕ್ತವಾಗಿ ಪರಿಗಣಿಸುತ್ತದೆ ಮತ್ತು ಜನರಿಗೆ ನಿಜವಾದ ಚುನಾವಣೆಯನ್ನು ನೀಡುವಂತೆ ನೋಡಿಕೊಳ್ಳುತ್ತದೆ ಎಂದು ಭಾವಿಸುತ್ತೇನೆ, ಜನರು ಏನು ಬಯಸುತ್ತಾರೆಯೋ ಅದನ್ನು ಅವರಿಗೆ ನೀಡಬೇಕು ಎಂದರು.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮಾತನಾಡಿ,ಭಾರತದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪವನ್ನು ಆರ್‌ಎಸ್‌ಎಸ್ ಪ್ರತಿಪಾದಿಸುವ ಫ್ಯಾಸಿಸ್ಟ್ "ಹಿಂದುತ್ವ ರಾಷ್ಟ್ರ" ವಾಗಿ ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ, ಅವರ ಸಮಾಜವು 'ಮನುಸ್ಮೃತಿ' ಮತ್ತುಜಾತಿ ದಬ್ಬಾಳಿಕೆ ಮತ್ತು ಶ್ರೇಣಿ ವ್ಯವಸ್ಥೆಗಳ ಆಧಾರದ ಮೇಲೆ ಆಧಾರಿತವಾಗಿರುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com