Loksabha Election 2024: ಗ್ಯಾರಂಟಿ vs ಗ್ಯಾರಂಟಿ ಚುನಾವಣೆ; ಯಾವುದೇ ಪಕ್ಷಕ್ಕೂ ಸ್ಪರ್ಧೆ ಸುಲಭವಲ್ಲ!

ಭಾರತದ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸುವುದರೊಂದಿಗೆ, "ಕಾಂಗ್ರೆಸ್‌ನ ಗ್ಯಾರಂಟಿ" ಮತ್ತು "ಮೋದಿ ಕಿ ಗ್ಯಾರಂಟಿಗಳು" ಚುನಾವಣೆಗೆ ಹೊಸ ರೀತಿಯ ವೇದಿಕೆ ಸಿದ್ಧ ಮಾಡಿಕೊಟ್ಟಿದೆ.
ಕಾಂಗ್ರೆಸ್ vs ಬಿಜೆಪಿ
ಕಾಂಗ್ರೆಸ್ vs ಬಿಜೆಪಿ

ಬೆಂಗಳೂರು: ಭಾರತದ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸುವುದರೊಂದಿಗೆ, "ಕಾಂಗ್ರೆಸ್‌ನ ಗ್ಯಾರಂಟಿ" ಮತ್ತು "ಮೋದಿ ಕಿ ಗ್ಯಾರಂಟಿಗಳು" ಚುನಾವಣೆಗೆ ಹೊಸ ರೀತಿಯ ವೇದಿಕೆ ಸಿದ್ಧ ಮಾಡಿಕೊಟ್ಟಿದೆ.

ಕರ್ನಾಟಕದಲ್ಲಿ ಭೀಕರ ಬರ, ಕುಡಿಯುವ ನೀರಿನ ಬಿಕ್ಕಟ್ಟು ಮತ್ತು ಹೆಚ್ಚುತ್ತಿರುವ ಬಿಸಿಲಿನ ಮಟ್ಟಗಳ ನಡುವೆ, ಮುಂಬರುವ ವಾರಗಳಲ್ಲಿ ಮತದಾರರು ಎಲ್ಲಾ ಕಡೆಯಿಂದ ಭರವಸೆಗಳ ಮಹಾಪೂರಕ್ಕೆ ಒಳಗಾಗುತ್ತಾರೆ. ಟಿಕೆಟ್ ಘೋಷಣೆಯೊಂದಿಗೆ ಕರ್ನಾಟಕದಲ್ಲಿ ಬಿಜೆಪಿಗೆ ತಲೆನೋವು ಆರಂಭವಾದಂತೆ ಕಾಣುತ್ತಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಲೆಕ್ಕಾಚಾರದ ಅಪಾಯವನ್ನು ತೆಗೆದುಕೊಂಡ ನಂತರ ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಹಲವಾರು ಆಂತರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ.

ಹಲವಾರು ಕ್ಷೇತ್ರಗಳಲ್ಲಿ ಅದರ ನಾಯಕರು ಮತ್ತು ಕಾರ್ಯಕರ್ತರಲ್ಲಿ ಕೋಪ, ಆಕ್ರೋಶ, ಅಸಮಾಧಾನ ಮತ್ತು ಬಂಡಾಯ ಭುಗಿಲೆದ್ದಿದ್ದು, ಕಾಂಗ್ರೆಸ್‌ನೊಂದಿಗೆ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿರುವಾಗಲೂ ಹಿರಿಯ ನಾಯಕರು ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಬೇಕಾದ ಪರಿಸ್ಥಿತಿ ಎದುರಾಗಿದೆ.

ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ತುಮಕೂರಿನಲ್ಲಿ ಪಕ್ಷದ ಪರ ಪ್ರಚಾರಕ್ಕೆ ನಿರಾಕರಿಸಿರುವ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಸೋಮಣ್ಣ ಪರ ಪ್ರಚಾರಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ. ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ಮುಖಂಡರು, ಕೊಪ್ಪಳ ಸಂಸದರ ಬೆಂಬಲಿಗರು ಪಕ್ಷದ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕಾಂಗ್ರೆಸ್ vs ಬಿಜೆಪಿ
ಚುನಾವಣಾ ಬಾಂಡ್ ಬಿಜೆಪಿ ಕೈಯಲ್ಲಿರುವ ರಾಜಕೀಯ ಸುಲಿಗೆಯ ಬ್ರಹ್ಮಾಸ್ತ್ರವೇ? ಉತ್ತರಿಸಿ ಮೋದಿ: ಪ್ರಧಾನಿಗೆ ಸಿಎಂ ಪ್ರಶ್ನೆಗಳ ಸುರಿಮಳೆ

ಚಾಮರಾಜನಗರ ಮೀಸಲು ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ, ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರ ಅಳಿಯ ಡಾ.ಎನ್‌.ಎಸ್‌.ಮೋಹನ್‌ ಅವರು ಟಿಕೆಟ್‌ ಕೈತಪ್ಪಿದ ತಕ್ಷಣ ಕಾಂಗ್ರೆಸ್‌ನತ್ತ ಮುಖ ಮಾಡಿರುವುದು ಪಕ್ಷದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ಮಗನಿಗೆ ಟಿಕೆಟ್ ಸಿಗದಿರುವ ಬಗ್ಗೆ ಅಸಮಾಧಾನಗೊಂಡಿರುವ ಈಶ್ವರಪ್ಪ ಕೂಡ ಪಕ್ಷದಲ್ಲಿ ಹಿರಿಯ ನಾಯಕರಾಗಿದ್ದು, ಅವರ ಹಾನಿ ಸಾಮರ್ಥ್ಯ ಸೀಮಿತವಾಗಿದೆ ಎಂದು ಹೇಳಲಾಗುತ್ತಿದೆ.

ಅವರು ಪಕ್ಷ ಮತ್ತು ಅದರ ಸಿದ್ಧಾಂತಕ್ಕೆ ನಿಷ್ಠರಾಗಿ ಉಳಿದಿದ್ದು, ನಾಲ್ಕು ದಶಕಗಳ ಕಾಲದ ರಾಜಕೀಯ ಜೀವನದಲ್ಲಿ ಅವರು ಎಂದಿಗೂ ಪಕ್ಷಾಂತರ ಮಾಡಿರಲಿಲ್ಲ. ಆದರೆ, ಅವರ ಅನಾನುಕೂಲವೆಂದರೆ, ಕರ್ನಾಟಕದಾದ್ಯಂತ ಅವರ ಸಂಖ್ಯಾಬಲದ ಕುರುಬ ಸಮುದಾಯವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗಟ್ಟಿಯಾಗಿ ಬೆಂಬಲಿಸುತ್ತಿದೆ. 2023ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಈಶ್ವರಪ್ಪ ಅವರಿಗೆ ಟಿಕೆಟ್ ನಿರಾಕರಿಸಿದ್ದು, ಈಗ ಅವರು ತಮ್ಮ ಮಗನಿಗೆ ರಾಜಕೀಯ ವೇದಿಕೆ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಚುನಾವಣಾ ಪ್ರಚಾರವು ವೇಗವನ್ನು ಪಡೆದ ನಂತರ ಎಲ್ಲವೂ ಬದಲಾಗಬಹುದು ಎಂದು ಬಿಜೆಪಿ ಪಕ್ಷದ ಒಳಗಿನವರು ಭಾವಿಸುತ್ತಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಯಲ್ಲಿ ಪ್ರಧಾನಿ ಮೋದಿ ಪ್ರಚಾರ ಮಾಡುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ದೊರೆತಿದೆ. ಇದು ಕರ್ನಾಟಕದಲ್ಲಿ ಅವರ ಮೊದಲ ಚುನಾವಣಾ ರ್ಯಾಲಿಯಾಗಿದ್ದು. ಮೋದಿ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ಮತ್ತು "ಮೋದಿ ಕಿ ಗ್ಯಾರಂಟಿಗಳು" ಪಟ್ಟಿ ಮಾಡಿದರು.

ಕಾಂಗ್ರೆಸ್ vs ಬಿಜೆಪಿ
ಲೋಕಸಭಾ ಚುನಾವಣೆ: 'ಶ್ರಮಿಕ್ ನ್ಯಾಯ್', 'ಹಿಸ್ಸೇದಾರಿ ನ್ಯಾಯ್' ಸೇರಿ ಕಾಂಗ್ರೆಸ್ ಒಟ್ಟು 5 ಗ್ಯಾರಂಟಿ ಘೋಷಣೆ!

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕರ್ನಾಟಕವನ್ನು ಒಂದು ಕುಟುಂಬ ಎಟಿಎಂ ಆಗಿ ಬಳಸುತ್ತಿದೆ ಎಂದು ಆರೋಪಿಸಿದರು. ಕುತೂಹಲಕಾರಿ ಸಂಗತಿಯೆಂದರೆ, ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಸಮಯಕ್ಕೆ ಸರಿಯಾಗಿ ಅವರು ಕಲಬುರಗಿಯಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ತಮ್ಮ ತವರೂರಿನಲ್ಲಿ ಪ್ರಧಾನಿಯವರ ರ್ಯಾಲಿಗೆ ಕೆಲವೇ ಗಂಟೆಗಳ ಮೊದಲು, ಬೆಂಗಳೂರಿನಲ್ಲಿ ಕಾಂಗ್ರೆಸ್ ನ "ಶ್ರಮಿಕ್ ನ್ಯಾಯ" ಮತ್ತು "ಹಿಸ್ಸೆದಾರಿ ನ್ಯಾಯ" ಗ್ಯಾರಂಟಿ ಯೋಜನೆಗಳನ್ನು ಖರ್ಗೆ ಘೋಷಿಸಿದರು. 2024 ರ ಲೋಕಸಭಾ ಚುನಾವಣೆಗೆ ಇದು ಭರವಸೆಗಳಾಗಿದ್ದರೆ, ಕರ್ನಾಟಕದಲ್ಲಿ, ಪಕ್ಷವು ಮುಖ್ಯವಾಗಿ ಅದರ ಐದು ಗ್ಯಾರಂಟಿ ಯೋಜನೆಗಳ ಪ್ರಸ್ತುತ ಅನುಷ್ಠಾನದ ಮೇಲೆ ಕಾರ್ಯ ನಿರ್ವಹಣೆ ಮಾಡುತ್ತಿದೆ.

ಕಳೆದ ಕೆಲವು ದಿನಗಳಿಂದ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸರ್ಕಾರದ ಪ್ರಮುಖ ಯೋಜನೆಗಳ ಫಲಾನುಭವಿಗಳ ಸರಣಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಇಂತಹ ಸಮಾವೇಶಗಳು ನಡೆಯುತ್ತಿವೆ. 2022 ರ ವಿಧಾನಸಭಾ ಚುನಾವಣೆಯಲ್ಲಿ ಫಲಾನುಭವಿ ಅಂಶವು ಹೊಸ ನಿರ್ಣಾಯಕ ಅಂಶವಾಗಿ ಹೊರಹೊಮ್ಮಿದಾಗ ಉತ್ತರ ಪ್ರದೇಶ ಮಾದರಿಯನ್ನು ಅನುಕರಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ. ಕಾಂಗ್ರೆಸ್ ಕರ್ನಾಟಕದಲ್ಲಿ ಗ್ಯಾರಂಟಿಗಳನ್ನು ಗೇಮ್ ಚೇಂಜರ್ ಎಂದು ಗ್ರಹಿಸುತ್ತಿದ್ದು, ಅದೇ ಹುಮ್ಮಸ್ಸಿನಲ್ಲಿ ರಾಜ್ಯದಲ್ಲಿ ಮುನ್ನುಗ್ಗುತ್ತಿದೆ. ಆದರೆ, ಅದಕ್ಕೆ ತನ್ನದೇ ಆದ ಸವಾಲುಗಳಿವೆ.

ಕಾಂಗ್ರೆಸ್ vs ಬಿಜೆಪಿ
ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನೀಡಬೇಡಿ: ವರಿಷ್ಠರಿಗೆ ಬಿಜೆಪಿ ವಕ್ತಾರ ಛಲವಾದಿ ನಾರಾಯಣಸ್ವಾಮಿ ಆಗ್ರಹ

2023ರ ಸೆಪ್ಟೆಂಬರ್‌ನಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದ ರಾಜ್ಯದಲ್ಲಿ ಇದು ಮೊದಲ ಪಕ್ಷವಾಗಿದ್ದು, ವಿಪರ್ಯಾಸವೆಂದರೆ, ಖರ್ಗೆ ಮತ್ತು ಸಿದ್ದರಾಮಯ್ಯನವರ ತವರು ಜಿಲ್ಲೆಗಳು ಸೇರಿದಂತೆ 21 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಇನ್ನೂ ಘೋಷಿಸಿಲ್ಲ. ಬಿಜೆಪಿ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ ನಂತರ ಪರಿಸ್ಥಿತಿ ಹೇಗೆ ಹೊರಹೊಮ್ಮಬಹುದು ಎಂದು ಕಾಂಗ್ರೆಸ್ ನಾಯಕರು ಕಾಯುತ್ತಿದ್ದಾರೆ.

ಇತ್ತ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಅಳಿಯ ಮತ್ತು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದನ್ನು ಹೊರತುಪಡಿಸಿದರೆ ಹಳೇ ಮೈಸೂರಿನಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಕೆಲವು ಸ್ಥಾನಗಳಲ್ಲಿ ಮಾತ್ರ ನೆಲೆಸಿದೆ. ಜೆಡಿಎಸ್ ತನ್ನ ತವರು ಕ್ಷೇತ್ರವಾದ ಹಾಸನ ಮತ್ತು ಮಂಡ್ಯದಲ್ಲಿಯೂ ಕಠಿಣ ಹೋರಾಟ ಎದುರಿಸಲಿದೆ ಎಂಬುದಕ್ಕೆ ನೆಲಮಂಗಲದಿಂದ ಸೂಚನೆಗಳು ಬಂದಿವೆ. ಹಾಸನದಲ್ಲಿ, ಜೆಡಿಎಸ್ ಅನ್ನು ವಿರೋಧಿಸುವ ರಾಜಕೀಯವನ್ನು ನಿರ್ಮಿಸಿದ ಬಿಜೆಪಿ ಕಾರ್ಯಕರ್ತರ ಬೆಂಬಲವನ್ನು ಪಡೆಯಲು ಆ ಪಕ್ಷವು ತೊಂದರೆಗಳನ್ನು ಎದುರಿಸುತ್ತಿದೆ.

ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಕೂಡ ಅಸಾಧಾರಣ ಶಕ್ತಿ ತೋರುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರದಲ್ಲಿ ಹೆಚ್.ಡಿ.ರೇವಣ್ಣ ವಿರುದ್ಧ 3000 ಮತಗಳ ಅಂತರದಿಂದ ಸೋತಿದ್ದರು. ಅವರ ತಾತ ಪುಟ್ಟಸ್ವಾಮಿಗೌಡ ಅವರು 1989ರ ವಿಧಾನಸಭಾ ಚುನಾವಣೆ ಮತ್ತು 1999ರ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ದರು. ಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

ಸದ್ಯದ ಪರಿಸ್ಥಿತಿಯಂತೆ, ಕರ್ನಾಟಕದ ಯಾವುದೇ ಕ್ಷೇತ್ರಗಳಲ್ಲಿ ಯಾವುದೇ ಪಕ್ಷಕ್ಕೆ ಇದು ಸುಲಭದ ಹೋರಾಟವಲ್ಲ ಎಂಬುದಂತೂ ಸತ್ಯ.

-ರಾಮು ಪಾಟೀಲ್

ಹಿರಿಯ ಸಹ ಸಂಪಾದಕರು, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್

ramu@newindianexpress.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com