ಮಹಾಂತೇಶ ವಕ್ಕುಂದ ಬಂಡಾಯ: ಬೆಳಗಾವಿ ಬಿಜೆಪಿ ಅಸಮಾಧಾನ ತೀವ್ರ!

ರಾಜ್ಯ ಬಿಜೆಪಿ ಬೆಳಗಾವಿಗೆ ಹೊರಗಿನವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಪಕ್ಷದ ನಿರ್ಧಾರವನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಕಟ್ಟಾಳು ಮಹಾಂತ್ ವಕ್ಕುಂದ ತೀವ್ರವಾಗಿ ವಿರೋಧಿಸಿದ್ದು, ಇದರ ಪರಿಣಾಮ ಬಿಜೆಪಿ ಭದ್ರಕೋಟೆಯಾದ ಬೆಳಗಾವಿಯಲ್ಲಿ ಅಸಮಾಧಾನ ಹೊಗೆಯಾಡಲು ಹಂತಕ್ಕೆ ತಲುಪಿದೆ.
ಮಹಾಂತ್ ವಕ್ಕುಂದ
ಮಹಾಂತ್ ವಕ್ಕುಂದ

ಬೆಳಗಾವಿ: ರಾಜ್ಯ ಬಿಜೆಪಿ ಬೆಳಗಾವಿಗೆ ಹೊರಗಿನವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಪಕ್ಷದ ನಿರ್ಧಾರವನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಕಟ್ಟಾಳು ಮಹಾಂತ್ ವಕ್ಕುಂದ ತೀವ್ರವಾಗಿ ವಿರೋಧಿಸಿದ್ದು, ಇದರ ಪರಿಣಾಮ ಬಿಜೆಪಿ ಭದ್ರಕೋಟೆಯಾದ ಬೆಳಗಾವಿಯಲ್ಲಿ ಅಸಮಾಧಾನ ಹೊಗೆಯಾಡಲು ಹಂತಕ್ಕೆ ತಲುಪಿದೆ.

ಸ್ಥಳೀಯ ನಾಯಕರನ್ನು ಕಡೆಗಣಿಸಿ ಅದರ ಬದಲು ಹೊರಗಿನವರಾದ ಜಗದೀಶ್ ಶೆಟ್ಟರ್ ಅವರನ್ನು ಬೆಳಗಾವಿ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿರುವುದು ವಿವಾದದ ಕೇಂದ್ರ ಬಿಂದುವಾಗಿದೆ. ಈ ಕ್ರಮವು ಬೆಳಗಾವಿಯ 19 ಲಕ್ಷ ಮತದಾರರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.

ಪ್ರಸ್ತುತದ ಬೆಳವಣಿಗೆ ಕುರಿತು ಮಾತನಾಡಿದ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ ಅವರು, ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಜಗದೀಶ ಶೆಟ್ಟರ್‌ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರನ್ನು ಮನಬಂದಂತೆ ಟೀಕಿಸಿದ್ದರು. ಈಗ ಅವರನ್ನೇ ಮತ್ತೆ ಪಕ್ಷಕ್ಕೆ ಬರಮಾಡಿಕೊಂಡು, ಬೆಳಗಾವಿ ಟಿಕೆಟ್‌ ಕೊಟ್ಟಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ನನಗೇ ಟಿಕೆಟ್‌ ಕೊಡಬೇಕೆಂದು ಒತ್ತಡ ಹೇರಿಲ್ಲ. ಆದರೆ, ಸ್ಥಳೀಯವಾಗಿಯೇ ಹಲವು ಟಿಕೆಟ್ ಆಕಾಂಕ್ಷಿಗಳಿದ್ದರು. ಆದರೆ, ಹೊರಗಿನವರಿಗೆ ಮಣೆ ಹಾಕಿದ್ದು ಉತ್ತಮ ಬೆಳವಣಿಗೆಯಲ್ಲ. ಇನ್ನೂ ಯಾರಿಗೆ ಟಿಕೆಟ್‌ ನೀಡುವುದು ಸೂಕ್ತವೆಂದು ಪಕ್ಷದವರು ನಡೆಸಿದ ಸಮೀಕ್ಷೆಯೇ ಸುಳ್ಳು. ಸಮೀಕ್ಷೆಯಲ್ಲಿ ಹೆಸರೇ ಬಾರದವರಿಗೆ ಟಿಕೆಟ್‌ ಕೊಟ್ಟಿದ್ದರಿಂದ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದು, ಮಾ. 31ರಂದು ನಡೆಯುವ ಸಭೆಯಲ್ಲಿ ಎಲ್ಲರೂ ಕೈಗೊಳ್ಳುವ ನಿರ್ಧಾರದಂತೆ ಮುಂದುವರಿಯುತ್ತೇನೆ.

ಮಹಾಂತ್ ವಕ್ಕುಂದ
ಬೆಳಗಾವಿ ಮೇಲೆ ಶೆಟ್ಟರ್ ಕಣ್ಣು: ಸ್ಥಳೀಯ ನಾಯಕರ ಅಪಸ್ವರ; ಮತ್ತೊಂದು ಕ್ಷೇತ್ರದಲ್ಲಿ BJP ಬಂಡಾಯದ ಸೂಚನೆ!

ಮಹಾಂತೇಶ ವಕ್ಕುಂದ್ ಫೌಂಡೇಶನ್ ಮೂಲಕ ನಾನು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಕೋವಿಡ್ ಸಮಯದಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ವ್ಯವಸ್ಥೆ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸಿದ್ದೇನೆ. ಬೆಳಗಾವಿಯ ಬಹುಪಾಲು ಮತದಾರರು ಪಂಚಮಸಾಲಿ ಲಿಂಗಾಯತರು ನನ್ನನ್ನು ಬೆಂಬಲಿಸುತ್ತಾರೆಂದು ತಿಳಿಸಿದರು.

ಪಕ್ಷದ ಸ್ಥಳೀಯ ಕಾರ್ಯಕರ್ತರು ಮಾತನಾಡಿ, ಹುಬ್ಬಳ್ಳಿ-ಧಾರವಾಡದಿಂದ ಪ್ರಲ್ಹಾದ್ ಜೋಶಿ, ಹಾವೇರಿಯಿಂದ ಬಸವರಾಜ ಬೊಮ್ಮಾಯಿ ಮತ್ತು ಬೆಳಗಾವಿಯಿಂದ ಜಗದೀಶ ಶೆಟ್ಟರ್'ಗೆ ಬಿಜೆಪಿ ಟಿಕೆಟ್ ನೀಡಿದೆ. ಉತ್ತರ ಕರ್ನಾಟಕದ ಎಲ್ಲ ಸೀಟುಗಳನ್ನು ಹುಬ್ಬಳ್ಳಿಯ ಅಭ್ಯರ್ಥಿಗಳಿಗೆ ನೀಡಬೇಕಿತ್ತೇ? ಬೆಳಗಾವಿಗೆ ಸೂಕ್ತ ಸ್ಥಳೀಯ ಅಭ್ಯರ್ಥಿಗಳು ಪಕ್ಷಕ್ಕೆ ಸಿಗಲಿಲ್ಲವೇ?

ಮಹಾಂತ್ ವಕ್ಕುಂದ
ಹೊಸಬ V/s ಹಿರಿಯ: ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ಮೃಣಾಲ್ ಹೆಬ್ಬಾಳ್ಕರ್ ಸೆಣಸಾಟ

ಕ್ಷೇತ್ರದಲ್ಲಿ ಹಾಲಿ ಸಂಸದೆ ಮಂಗಳ ಅಂಗಡಿ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಮಹಾಂತೇಶ ವಕ್ಕುಂದ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ ರಮೇಶ ಕತ್ತಿ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದರು. ಆದರೂ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಮರಳಿದ ಶೆಟ್ಟರ್ ಅವರನ್ನು ಸಮಾಧಾನ ಪಡಿಸಲು ಇವರೆಲ್ಲರನ್ನು ಕಡೆಗಣಿಸಲಾಗಿದೆ. ಶೆಟ್ಟರ್ ಅವರು ಕೋವಿಡ್ ಸಮಯದಲ್ಲಿ ಹುಬ್ಬಳ್ಳಿಗೆ ಕೇಂದ್ರ ಸರ್ಕಾರ ನೀಡಿದ್ದ ಆಕ್ಸಿಜನ್ ಕೋಟಾದ ಬಹುಪಾಲು ಭಾಗವನ್ನು ಹುಬ್ಬಳ್ಳಿಗೆ ವರ್ಗಾಯಿಸಿದ್ದಾರೆ, ಇದರಿಂದಾಗಿ ಬೆಳಗಾವಿಯ ರೋಗಿಗಳು ತೊಂದರೆ ಅನುಭವಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಈ ನಡುವೆ ರ್ಯಾಲಿಯೊಂದರಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರೂ ಕೂಡ ಶೆಟ್ಟರ್ ವಿರುದ್ಧ ಆರೋಪ ಮಾಡಿದರು.

ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಸಚಿವರಾಗಿದ್ದಾಗ ಬೆಳಗಾವಿಯಿಂದ ಹುಬ್ಬಳ್ಳಿಗೆ ಐಟಿ-ಬಿಟಿ ಮತ್ತು ಇತರ ಕೈಗಾರಿಕಾ ಯೋಜನೆಗಳನ್ನು ಸ್ಥಳಾಂತರಿಸಿದ್ದರು ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com