ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಆಧಾರರಹಿತವಾಗಿ ಶೇ.40 ಕಮಿಷನ್ ಸರ್ಕಾರವೆಂದು ಆರೋಪಗಳ ಲೇಬಲ್ ಮಾಡಿದ್ದವರು ಈಗ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದರೂ ಚಕಾರವೆತ್ತುತ್ತಿಲ್ಲವೇಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.
ಅಬಕಾರಿ ಇಲಾಖೆಯು ಮದ್ಯದಂಗಡಿಗಳಿಂದ 'ಮಂಥ್ಲಿ ಮನಿ' ಹೆಸರಿನಲ್ಲಿ ಲಂಚ ಪಡೆಯುತ್ತಿದೆ ಎಂಬ ಆರೋಪ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ ಅವರು, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯದ 700 ಕೋಟಿ ರೂ.ಗಳ ಮದ್ಯದ ಹಗರಣವೀಗ ಬಯಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಡಿಯಲ್ಲಿ ಭ್ರಷ್ಟಾಚಾರವು ಹಗರಣವಲ್ಲ. ಇದು, ಕಾಂಗ್ರೆಸ್ ಪಕ್ಷದ ಜೀವನಶೈಲಿಯಾಗಿದೆ. 17 ತಿಂಗಳ ಭ್ರಷ್ಟಾಚಾರದ ಪುಟದಲ್ಲಿ ಹೊಸ ಅಧ್ಯಾಯವಿದು. ಸಚಿವ ಆರ್.ಬಿ.ತಿಮ್ಮಾಪುರ ಅವರ ಸುಲಿಗೆ ದಂಧೆಯನ್ನು ಕರ್ನಾಟಕ ಮದ್ಯ ವ್ಯಾಪಾರಿಗಳ ಸಂಘ ಬಹಿರಂಗಪಡಿಸಿದೆ. ತಿಮ್ಮಾಪುರ ವಿರುದ್ಧ ವಾರ್ಷಿಕ 180 ಕೋಟಿ ರೂ.ಗಳ ಹ್ತಾ ವಸೂಲಿ ಆರೋಪವು ಗಂಭೀರವಾಗಿ ಪರಿಗಣಿಸುವುದು ಅನುಮಾನ. ಇದೊಂದು ಪೇ ಟು ಪ್ಲೇ ಸ್ಕೀಮ್ ಭಾಗವಾಗಿರಬಹುದು ಅಥವಾ ‘ಚುನಾವಣೆ ಉದ್ದೇಶ’ ಎನ್ನುವ ಉದಾತತ್ತೆಯೂ ಇರಬಹುದು !. ಇಲ್ಲವೇ ಪಾಲುದಾರಿಕೆಯಿರುವ ಸಾಧ್ಯತೆಯೂ ಇದೆ.
ಅಬಕಾರಿ ಇಲಾಖೆಯಲ್ಲಿ ಪ್ರತಿಯೊಂದಕ್ಕೂ ಲಂಚದ ದರ ಪಟ್ಟಿ ನಿಗದಿಯಾಗಿದೆ. ಸಿಎಲ್7 ಬಾರ್ ಸನ್ನದು ಪಡೆಯಲು 30 ರಿಂದ 70 ಲಕ್ಷ ರೂ.ಗಳಿದ್ದು, ನಿಯಮ ಬಾಹಿರವಾಗಿ ಒಂದು ಸಾವಿರ ಸನ್ನದು ನೀಡಲಾಗಿದೆ. ಇದೊಂದು ಫ್ರಾಂಚೈಸಿ ಭ್ರಷ್ಟಾಚಾರದ ಕಾರ್ಯಾಚರಣೆ, ವಾರ್ಷಿಕ 700 ಕೋಟಿ ರೂ. ವಸೂಲಿಯು ದಿಗ್ಭ್ರಮೆಗೊಳಿಸುವ ಉದ್ಯಮ ರೀತಿಯ ದಂಧೆಯಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಆಧಾರರಹಿತವಾಗಿ ಶೇ.40 ಕಮಿಷನ್ ಸರ್ಕಾರವೆಂದು ಆರೋಪಗಳ ಲೇಬಲ್ ಮಾಡಿದ್ದವರು ಈಗ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಕರ್ನಾಟಕ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ರೂ.500 ಕೋಟಿ ಭ್ರಷ್ಟಾಚಾರ ಎಸಗಿರುವ ಗಂಭೀರ ಆರೋಪ ಮಾಡಿದ್ದರೂ ಮೌನವಾಗಿರುವುದು ವಿಪರ್ಯಾಸವೇ ಸರಿ.
ಸಿದ್ದರಾಮಯ್ಯನವರಿಗೆ ರಾಜಕೀಯ ಪ್ರಾಮಾಣಿಕತೆ ಇದ್ದರೆ ಕೂಡಲೇ ಸಚಿವ ತಿಮ್ಮಾಪುರ್ ಅವರನ್ನು ವಜಾಗೊಳಿಸಿ ಲೋಕಾಯುಕ್ತ ತನಿಖೆಗೆ ಆದೇಶಿಸಬೇಕು. ಆದರೆ, ಗಂಭೀರ ಭ್ರಷ್ಟಾಚಾರದ ಆರೋಪಗಳ ಹೊರತಾಗಿಯೂ ಅಧಿಕಾರಕ್ಕೆ ಅಂಟಿಕೊಂಡಿರುವ ಮುಖ್ಯಮಂತ್ರಿಯಿಂದ ಹೊಣೆಗಾರಿಕೆ ನಿಭಾಸುತ್ತಾರೆಂಬುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ, ಮುಡಾ ಹಗರಣದಲ್ಲಿ ಆರೋಪಿ ನಂ. 1 ಆಗಿರುವ ಸಿದ್ದರಾಮಯ್ಯ ಅವರಿಗೆ ಸಚಿವರ ವಜಾಗೊಳಿಸುವ ಅಥವಾ ತನಿಖೆಗೆ ಆದೇಶಿಸುವ ಧೈರ್ಯವಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುತ್ತಿಲ್ಲ ಬದಲಿಗೆ ನಿಭಾಯಿಸಲಾಗುತ್ತಿದೆ. ಹಗರಣಗಳು ಹೊರ ಬಿದ್ದಾಗ ದಿವ್ಯಮೌನವಹಿಸಲಾಗುತ್ತದೆ. ಭ್ರಷ್ಟಾಚಾರದ ಬ್ರ್ಯಾಂಡ್’ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರದಿಂದ ಕರ್ನಾಟಕದ ಜನರು ಶಾಪಗ್ರಸ್ತರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
Advertisement