'ಶುಭವಾಗಲಿ' ಬರೆಯಲು ಪರದಾಡಿದ ಕನ್ನಡ ಸಂಸ್ಕೃತಿ ಸಚಿವ; ಕನ್ನರಾಮಯ್ಯ ಸರ್ಕಾರದಿಂದ ಕನ್ನಡದ ಕಗ್ಗೂಲೆ- BJP ವಂಗ್ಯ

ಕೊಪ್ಪಳ ಜಿಲ್ಲೆಯ ಕಾರಟಗಿ ಜೆಪಿ ನಗರದ ಅಂಗವಾಡಿಗೆ ಭೇಟಿ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕನ್ನಡದಲ್ಲಿ ಶುಭವಾಗಲಿ ಬರೆಯಲು ಪರದಾಡಿದ್ದರು.
ಬಿಜೆಪಿ ಟ್ವೀಟ್
ಬಿಜೆಪಿ ಟ್ವೀಟ್
Updated on

ಬೆಂಗಳೂರು: ಅನಕ್ಷರಸ್ಥರ ದೊಡ್ಡಿಯಾಗಿರುವ ಕಾಂಗ್ರೆಸ್ ಸರ್ಕಾರ ಕನ್ನಡದ ಅಸ್ಮಿತಿಗೆ ಕೊಳ್ಳಿ ಇಟ್ಟಿದೆ. ಇಂತಹ ಮಹಾನ್‌ ಮೇಧಾವಿಗಳಾದ ಶಿಕ್ಷಣ ಸಚಿವ, ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಪಡೆದ ಕರುನಾಡು ಪಾವನ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಕೊಪ್ಪಳ ಜಿಲ್ಲೆಯ ಕಾರಟಗಿ ಜೆಪಿ ನಗರದ ಅಂಗವಾಡಿಗೆ ಭೇಟಿ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕನ್ನಡದಲ್ಲಿ ಶುಭವಾಗಲಿ ಬರೆಯಲು ಪರದಾಡಿದ್ದರು. ಬಳಿಕ ಬೆಂಬಲಿಗರ ಸಹಾಯದೊಂದಿಗೆ ಸರಿಯಾಗಿ ಬರೆದಿದ್ದರು. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಸಚಿವರು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಕುರಿತು ವ್ಯಂಗ್ಯವಾಡಿದೆ.

ಕನ್ನರಾಮಯ್ಯ ಸರ್ಕಾರದಿಂದ ಕನ್ನಡದ ಕಗ್ಗೂಲೆ ಎಂದಿರುವ ಬಿಜೆಪಿ, ಕನ್ನಡ ಓದಲು ಬರೆಯಲು ಬಾರದ ಅನಕ್ಷರಸ್ಥ ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಂದು ಕಡೆಯಾದರೆ, ಕನ್ನಡದ ಸುಲಭವಾದ ಪದವನ್ನು ಬರೆಯಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ವಿಲ ವಿಲ ಒದ್ದಾಡಿದ್ದಾರೆ. ಅನಕ್ಷರಸ್ಥರ ದೊಡ್ಡಿಯಾಗಿರುವ ಕಾಂಗ್ರೆಸ್ ಸರ್ಕಾರ ಕನ್ನಡದ ಅಸ್ಮಿತಿಗೆ ಕೊಳ್ಳಿ ಇಟ್ಟಿದೆ. ಇಂತಹ ಮಹಾನ್‌ ಮೇಧಾವಿಗಳಾದ ಶಿಕ್ಷಣ ಸಚಿವ, ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಪಡೆದ ಕರುನಾಡು ಪಾವನ ಎಂದು ವ್ಯಂಗ್ಯವಾಡಿದೆ.

ಕೆ.ಪಿ.ಎ.ಸ್ಸಿ ಪ್ರಶ್ನೆ ಪತ್ರಿಗಳಲ್ಲೂ ಪದೇ ಪದೆ ಕನ್ನಡ ವ್ಯಾಕರಣ ತಪ್ಪಾಗಿ ಮುದ್ರಿಸುವುದು. ಕನ್ನಡ ಶಾಲೆಗಳನ್ನು ಮುಚ್ಚಿಸುತ್ತಿರುವುದು ಈ ಎಲ್ಲವನ್ನೂ ನೋಡಿದರೆ ಕರುನಾಡಲ್ಲಿ ಕನ್ನಡವನ್ನು ಅಳಿಸಿ ಹಾಕಬೇಕೆಂದು ಕಾಂಗ್ರೆಸ್‌ ಹೊರಟಿದೆ ಎಂದೂ ಕಿಡಿಕಾರಿದೆ.

ಬಿಜೆಪಿ ಟ್ವೀಟ್
Video: ಸಂಸ್ಕೃತಿ ಸಚಿವರಿಗೂ ಕನ್ನಡ ಬರಲ್ವಾ?; ಬೋರ್ಡ್ ಮೇಲೆ ಬರೆಯಲು ತಡಕಾಡಿದ Shivaraj Tangadagi!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com