ಅರಸೀಕೆರೆಯಲ್ಲಿ ಫಲಾನುಭವಿಗಳ ಸಮಾವೇಶ: ಶಿವಲಿಂಗೇಗೌಡಗೆ ಮಂತ್ರಿ ಪಟ್ಟ ಬೇಕೆಂದು ಬೆಂಬಲಿಗರ ಕೂಗು; ಸಿಟ್ಟಿಗೆದ್ದು ವೇದಿಕೆಯಿಂದ ಹೊರ ನಡೆದ ಸಿಎಂ..!

ಶಿವಲಿಂಗೇಗೌಡ ಅವರನ್ನು ಮಂತ್ರಿ ಮಾಡುವುದು ಹೈಕಮಾಂಡ್, ಸರ್ಕಾರ. ಶಿವಲಿಂಗೇಗೌಡ ಮಂತ್ರಿ ಆಗಲು ಎಲ್ಲ ಅರ್ಹತೆ ಹೊಂದಿದ್ದಾರೆ. ಅವರ ವ್ಯಕ್ತಿತ್ವ ಗಮನಿಸಿ ನೀವು ಅವರನ್ನು ನಾಲ್ಕು ಬಾರಿ ಗೆಲ್ಲಿಸಿದ್ದೀರಿ.
CM Siddaramaiah.
ಮುಖ್ಯಮಂತ್ರಿ ಸಿದ್ದರಾಮಯ್ಯ
Updated on

ಅರಸೀಕೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕ ಸಮಾರಂಭಗಳನ್ನು ಉದ್ದೇಶಿಸಿ ಮಾತನಾಡಲು ವೇದಿಕೆ ತಲುಪಿದಾಗ ಅಭಿಮಾನಿಗಳು ಘೋಷಣೆಗಳನ್ನು ಕೂಗುವುದು ಮತ್ತು ಶಿಳ್ಳೆ ಹೊಡೆಯುವುದು ಸಾಮಾನ್ಯ. ಇದನ್ನು ಹಗುರವಾಗಿ ಪರಿಗಣಿಸಿ ಸಿದ್ದರಾಮಯ್ಯ ಅವರು ತಮ್ಮ ಭಾಷಣವನ್ನು ಮುಂದುವರೆಸುತ್ತಾರೆ. ಆದರೆ, ಶನಿವಾರ ಅರಸೀಕೆರೆಯಲ್ಲಿ ನಡೆದ ಫಲಾನುಭವಿಗಳ ಸಮಾವೇಶದಲ್ಲಿ ಅಭಿಮಾನಿಗಳ ವರ್ತನೆಗೆ ಕೆಂಡಾಮಂಡಲಗೊಂಡು ವೇದಿಕೆಯಿಂದ ಹೊರ ನಡೆದ ಬೆಳವಣಿಗೆ ಕಂಡು ಬಂದಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಟ್ಟು 600 ಕೋಟಿಗೂ ಅಧಿಕ ಮೊತ್ತದ 11 ಕಾಮಗಾರಿಗಳ ಲೋಕಾರ್ಪಣೆ ಹಾಗೂ 23 ನೂತನ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಸಮಾವೇಶದಲ್ಲಿ ಮೊದಲಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್​ ಖಾನ್ ಅವರು​, “ನಮ್ಮ ಪಕ್ಷ ಇರುವುದು ಜನರಿಗೆ ಸಹಾಯ ಮಾಡಲು. ನಾನು ಕೈ ಮುಗಿತಿನಿ ಸಿಎಂ, ಡಿಸಿಎಂ ಅವರೇ ಆದಷ್ಟು ಬೇಗ ಶಿವಲಿಂಗೇಗೌಡ ಅವರನ್ನು ಮಂತ್ರಿ ಮಾಡಿ ಎಂದು ಮನವಿ ಮಾಡಿದರು.

ನಂತರ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, “ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಉತ್ತಮ ಕೆಲಸ ಮಾಡಿದ್ದಾರೆ. ಇಂತಹ ಶಾಸಕರು ಎಲ್ಲೆಡೆ ಇದ್ದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು ಎಂದರು.

ಈ ವೇಳೆ ಅಭಿಮಾನಿಗಳು, ಕೆ.ಎಂ.ಶಿವಲಿಂಗೇಗೌಡರನ್ನು ಮಂತ್ರಿ ಮಾಡಿ ಎಂದು ಕೂಗಿದರು. “ಮಾಡ್ತೀನಿ ಬಿಡ್ರಿ ಆಯ್ತು ಆಯ್ತು, ಅದೆಲ್ಲ ಅಂಗಡಿಯಲ್ಲಿ ಸಿಗಲ್ಲ ಎಂದು ಭರವಸೆ ನೀಡಿದರು.

CM Siddaramaiah.
EC, ಬಿಜೆಪಿಯಿಂದ ಚುನಾವಣಾ ದುರುಪಯೋಗ; ಬಿಹಾರ ಅದರ ಮುಂದಿನ ಟಾರ್ಗೆಟ್: ಸಿದ್ದರಾಮಯ್ಯ

ಕೊನೆಗೆ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಲು ಆರಂಭಿಸಿದರು. ಭಾಷಣದ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಶಾಸಕ ಶಿವಲಿಂಗೇಗೌಡ ಅವರಿಗೆ ಉತ್ತಮ ಭವಿಷ್ಯವಿದೆ ಎಂದರು.

ಈ ವೇಳೆ ಶಿವಲಿಂಗೇಗೌಡ ಅವರ ಬೆಂಬಲಿಗರು ಅವರನ್ನು ಮಂತ್ರಿ ಮಾಡಿ ಎಂದು ಘೋಷಣೆ ಕೂಗಲು ಆರಂಭಿಸಿದರು. ಆಗ ಸಿದ್ದರಾಮಯ್ಯ ಅವರು ಸುಮ್ಮನೆ ಕುಳಿತುಕೊಳ್ಳಿ ಎಂದು ಸಿಟ್ಟಾದರು. ಆದರೂ ಜನರು ಕೂಗುತ್ತಿದ್ದರಿಂದ ಆಕ್ರೋಶಗೊಂಡ ಅವರು, ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿ ತಮ್ಮ ಕುರ್ಚಿಯತ್ತ ತೆರಳಿದರು.

ಬಳಿಕ ಕೆ.ಎನ್. ರಾಜಣ್ಣ ಮತ್ತು ಕೆ.ಎಂ. ಶಿವಲಿಂಗೇಗೌಡ ಇಬ್ಬರೂ ಅಭಿಮಾನಿಗಳ ವರ್ತನೆ ವಿರುದ್ಧ ಕಿಡಿಕಾರಿದರು. ನಂತರ ಸಿಎಂ ಸಿದ್ದರಾಮಯ್ಯ ಅವರನ್ನು ಸಮಾಧಾನಗೊಳಿಸಿದರು.

ಪರಿಸ್ಥಿತಿ ತಿಳಿಗೊಂಡ ಬಳಿಕ ಸಿದ್ದರಾಮಯ್ಯ ಅವರು ಮತ್ತೆ ಭಾಷಣ ಮುಂದುವರಿಸಿ, ಶಿವಲಿಂಗೇಗೌಡ ಅವರನ್ನು ಮಂತ್ರಿ ಮಾಡುವುದು ಹೈಕಮಾಂಡ್, ಸರ್ಕಾರ. ಶಿವಲಿಂಗೇಗೌಡ ಮಂತ್ರಿ ಆಗಲು ಎಲ್ಲ ಅರ್ಹತೆ ಹೊಂದಿದ್ದಾರೆ. ಅವರ ವ್ಯಕ್ತಿತ್ವ ಗಮನಿಸಿ ನೀವು ಅವರನ್ನು ನಾಲ್ಕು ಬಾರಿ ಗೆಲ್ಲಿಸಿದ್ದೀರಿ. ಜನರು ಇದೇ ಬಾಂಧವ್ಯವನ್ನು ಕಾಯ್ದುಕೊಳ್ಳಬೇಕು ಮತ್ತು ಎಲ್ಲಾ ಅಂಶಗಳಲ್ಲಿ ಶಿವಲಿಂಗೇಗೌಡರನ್ನು ಬೆಂಬಲಿಸಬೇಕು. 2028 ರ ವಿಧಾನಸಭಾ ಚುನಾವಣೆಯಲ್ಲಿಯೂ ಅವರನ್ನು ಮತ್ತೆ ಆಯ್ಕೆ ಮಾಡಬೇಕು. ಕೆ.ಎಂ. ಶಿವಲಿಂಗೇಗೌಡ ರಾಜ್ಯದ ಅತ್ಯುತ್ತಮ ಮತ್ತು ಜನಪ್ರಿಯ ಶಾಸಕರಲ್ಲಿ ಒಬ್ಬರು. ಆದರೆ, ಎಲ್ಲ ವಿಚಾರಗಳನ್ನು ಬಹಿರಂಗವಾಗಿ ಹೇಳಲು ಆಗಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com