ದೇವರೇ ಬಂದರೂ ಬೆಂಗಳೂರಿನ ಸ್ಥಿತಿ ಸರಿಪಡಿಸಲು ಸಾಧ್ಯವಿಲ್ಲ ಎನ್ನುವ ಬದಲು ಆಧುನಿಕ ಬೆಂಗಳೂರು ಬೆಳೆಸುವ ಬದ್ಧತೆ ಪ್ರದರ್ಶಿಸಿ!

ಗ್ರೇಟರ್ ಬೆಂಗಳೂರು ಯೋಜನೆಯಿಂದ ಆರ್ಥಿಕ ಹಾಗೂ ಅಭಿವೃದ್ಧಿಯ ಅಸಮಾನತೆ ಉದ್ಬವಿಸಲಿದ್ದು ಒಟ್ಟು ಬೆಂಗಳೂರಿನ ಸಮಗ್ರ ಅಭಿವೃದ್ಧಿ ಸಮತೋಲನ ಕಳೆದುಕೊಳ್ಳಲಿದೆ.
ಡಿಕೆ.ಶಿವಕುಮಾರ್-ವಿಜಯೇಂದ್ರ
ಡಿಕೆ.ಶಿವಕುಮಾರ್-ವಿಜಯೇಂದ್ರ
Updated on

ಬೆಂಗಳೂರು: ದೇವರೇ ಬಂದರೂ ಬೆಂಗಳೂರಿನ ಸ್ಥಿತಿ ಸರಿಪಡಿಸಲು ಸಾಧ್ಯವಿಲ್ಲ ಎನ್ನುವ ಫಲಾಯನವಾದದ ಮಾತನ್ನು ಬದಿಗೊತ್ತಿ, ಮೂಲ ಬೆಂಗಳೂರಿನ ಪರಂಪರೆಗೆ ಧಕ್ಕೆ ಬಾರದ ರೀತಿಯಲ್ಲಿ ಆಧುನಿಕ ಬೆಂಗಳೂರನ್ನು ಬೆಳೆಸುಳಿಸುವ ಬದ್ಧತೆ ಪ್ರದರ್ಶಿಸಿ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಒತ್ತಾಯಿಸಿದೆ.

ಗ್ರೇಟರ್ ಬೆಂಗಳೂರು ವಿಧೇಯಕ ವಾಪಸ್ ಕಳುಹಿಸಿದ ಗವರ್ನರ್ ನಿರ್ಧಾರದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಬೆಂಗಳೂರು ಬೆಳವಣಿಗೆಗೆ ಐತಿಹಾಸಿಕ ಹಿನ್ನೆಲೆಯಿದೆ, ಇಡೀ ಭಾರತದಲ್ಲೇ ಅತ್ಯಂತ ಯೋಜಿತ ನಗರವಾಗಿ ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ವಿಸ್ತರಿಸಿಕೊಳ್ಳುತ್ತಾ ಬಂದಿದೆ. ಬೆಂಗಳೂರನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪಕ್ಷ ರಾಜಕಾರಣವನ್ನು ಬದಿಗೊತ್ತಿ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಶ್ರಮಿಸಿದ ಹಿರಿಯ ರಾಜಕಾರಣಿಗಳು, ನಿವೃತ್ತ ಅಧಿಕಾರಿಗಳು ಹಾಗೂ ಪಕ್ಷಾತೀತವಾಗಿ ಸಮಗ್ರ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಒಂದು ಉತ್ತಮ ಯೋಜನೆಯನ್ನು ರೂಪಿಸುವುದು ಕಷ್ಟ ಸಾಧ್ಯವೇನಲ್ಲ.

ಗ್ರೇಟರ್ ಬೆಂಗಳೂರು ಯೋಜನೆಯಿಂದ ಆರ್ಥಿಕ ಹಾಗೂ ಅಭಿವೃದ್ಧಿಯ ಅಸಮಾನತೆ ಉದ್ಬವಿಸಲಿದ್ದು ಒಟ್ಟು ಬೆಂಗಳೂರಿನ ಸಮಗ್ರ ಅಭಿವೃದ್ಧಿ ಸಮತೋಲನ ಕಳೆದುಕೊಳ್ಳಲಿದೆ. ಕಾಂಗ್ರೆಸ್ ಸರ್ಕಾರದ ಸಂಪುಟದಲ್ಲಿ ಹಿಡನ್ ಅಜೆಂಡಾ ಇಟ್ಟುಕೊಂಡವರ ತಾಳಕ್ಕೆ ತಕ್ಕಂತೆ ಗ್ರೇಟರ್ ಬೆಂಗಳೂರು ಯೋಜನೆಯನ್ನು ಜಾರಿಗೆ ತರುವ ಮೂಲಕ ಬೆಂಗಳೂರಿನ ಬೆಳವಣಿಗೆಗೆ ಪೆಟ್ಟು ನೀಡಲು ಹೊರಟಿರುವುದು ಅವಿವೇಕತನದ ಕ್ರಮವಾಗಿದೆ ಎಂದು ಟೀಕಿಸಿದ್ದಾರೆ.

ಈಗಲೂ ಕಾಲ ಮಿಂಚಿಲ್ಲ, "ದೇವರೇ ಬಂದರೂ ಬೆಂಗಳೂರಿನ ಸ್ಥಿತಿ ಸರಿಪಡಿಸಲು ಸಾಧ್ಯವಿಲ್ಲ ಎನ್ನುವ ಫಲಾಯನವಾದದ ಮಾತನ್ನು ಬದಿಗೊತ್ತಿ" ಸರ್ಕಾರ ತೆರೆದ ಹೃದಯದಿಂದ ಎಲ್ಲರೊಂದಿಗೂ ಚರ್ಚಿಸಿ, ಸ್ವಲ್ಪ ತಡವಾದರೂ ಚಿಂತೆಯಿಲ್ಲ ಒಂದು ಉತ್ತಮ ಯೋಜನೆಯನ್ನು ರೂಪಿಸಿ ಮೂಲ ಬೆಂಗಳೂರಿನ ಪರಂಪರೆಗೆ ಧಕ್ಕೆ ಬಾರದ ರೀತಿಯಲ್ಲಿ , ಆಧುನಿಕ ಬೆಂಗಳೂರನ್ನು ಬೆಳೆಸುಳಿಸುವ ಬದ್ಧತೆ ಪ್ರದರ್ಶಿಸಲಿ ಎಂದು ಹೇಳಿದ್ದಾರೆ.

ಡಿಕೆ.ಶಿವಕುಮಾರ್-ವಿಜಯೇಂದ್ರ
ರಾಜ್ಯಪಾಲರು ಸ್ಪಷ್ಟೀಕರಣ ಕೇಳಿ ಗ್ರೇಟರ್ ಬೆಂಗಳೂರು ಮಸೂದೆ ಹಿಂದಿರುಗಿಸಿದ್ದಾರೆ: ಎಚ್.ಕೆ ಪಾಟೀಲ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com