
ಬೆಂಗಳೂರು: ಬಿಜೆಪಿಯವರು ನನ್ನನ್ನು ಗೌರವದಿಂದ ಮತ್ತೆ ವಾಪಸ್ ಕರೆಯಲಿದ್ದಾರೆ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶನಿವಾರ ಹೇಳಿದ್ದು, ಬಿಎಸ್ ಯಡಿಯೂರಪ್ಪ ಅವರ ಕುಟುಂಬ ರಾಜಕೀಯ ವಿನಾಶದ ಮುನ್ಸೂಚನೆ ನೀಡಿದ್ದಾರೆ.
ನನ್ನನ್ನು ವಾಪಸ್ ಕರೆಯುವ ಸಮಯ ಬರುತ್ತದೆ. ಈ ಹಿಂದೆ ಅಮಿತ್ ಶಾ ಅವರು ನನ್ನನ್ನು ವಾಪಸ್ ಕರೆದಿದ್ದರು. ಪ್ರಧಾನಿ ಮೋದಿ ಅವರೇ ನನ್ನನ್ನು ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುತ್ತಾರೆ ಎಂದು ಯತ್ನಾಳ್ ಸುದ್ದಿಗಾರರಿಗೆ ತಿಳಿಸಿದರು.
ಸ್ವತಂತ್ರವಾಗಿ ರಾಜಕೀಯ ಪಕ್ಷ ಆರಂಭಿಸುವ ಯೋಚನೆ ಇಲ್ಲ. ಯಡಿಯೂರಪ್ಪ ಕುಟುಂಬದಿಂದಾಗಿ ಈಗಿನ ಬಿಜೆಪಿ ಹಾಳಾಗಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಮತ್ತು ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ನೋಡಿ. ಅವರು ಹಿಂದುತ್ವದ ಪರವಾಗಿದ್ದಾರೆ. ಆದರೆ ಇಲ್ಲಿ, ಇದು ಕುಟುಂಬ ಮತ್ತು ಲೂಟಿಗೆ ಸಂಬಂಧಿಸಿದೆ" ಎಂದು ಅವರು ಆರೋಪಿಸಿದರು.
ಅವರು ವೀರಶೈವ-ಲಿಂಗಾಯತ ಜನರ ಹೆಸರಿಲ್ಲಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಅವರ ಪರವಾಗಿ ಹೇಳಿಕೆ ನೀಡುವ 5-6 ಮಠಾಧೀಶರನ್ನು ಕೂಡಾ ಸೆಳೆದುಕೊಂಡಿದ್ದಾರೆ ಎಂದು ಹೇಳಿದರು.
ಎಲ್ಲಾ ಬಿಜೆಪಿ ಶಾಸಕರಿಂದ ನನ್ನಗೆ ಕರೆಗಳು ಬರುತ್ತಿವೆ. ಪಕ್ಷವು ಅನ್ಯಾಯ ಮಾಡಿದೆ ಎಂದು ಅವರು ನನಗೆ ಹೇಳುತ್ತಿದ್ದಾರೆ. ನಮ್ಮಲ್ಲಿ ದೊಡ್ಡ ತಂಡವಿದೆ" ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಶನಿ ಮಹಾತ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಯತ್ನಾಳ್, ಶನಿಯು 2.5 ವರ್ಷಗಳಿಗೊಮ್ಮೆ ಬದಲಾಗುತ್ತಿರುವಂತೆ ತೋರುತ್ತಿದೆ. ಇದು ಕೆಲವು ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ. ನನ್ನ ರಾಶಿಯಲ್ಲಿನ ಪಂಚಮ ಶನಿಯು ನಿರ್ಗಮಿಸಿದ್ದು, ಭಾನುವಾರದಿಂದ ಹೊಸ ವರ್ಷ ಮತ್ತು ಯುಗ ಆರಂಭವಾಗಲಿದ್ದು, ನಾನು ಕೂಡ ಹೊಸದಾಗಿ ರಾಜಕೀಯ ಜೀವನ ಆರಂಭಿಸುತ್ತೇನೆ ಎಂದು ಹೇಳಿದರು.
Advertisement